ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಆಸ್ಟ್ರೇಲಿಯಾವನ್ನು ಮಣಿಸಿ ಸರಣಿ ಗೆದ್ದ ಟೀಮ್ ಇಂಡಿಯಾ

India Vs Australia Final Match At Chinnaswamy Stadium Bangalore

ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಭರ್ಜರಿಯಾಗಿ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಈ ಅಮೋಘ ಜಯದ ಮೂಲಕ ಟೀಮ್ ಇಂಡಿಯಾ ಮೊದಲ ಪಂದ್ಯದ ಹೀನಾಯ ಸೋಲಿಗೆ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೇಡು ತೀರಿಕೊಂಡು ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಉಪನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಮತ್ತು ನಾಯಕ ವಿರಾಟ್ ಕೋಹ್ಲಿ ಅಮೋಘ ಆಟಕ್ಕೆ ಎದುರಾಳಿ ತಂಡ ಸ್ವಲ್ಪವೂ ಉಸಿರೆತ್ತಲು ಅವಕಾಶವೇ ದೊರೆಯಲಿಲ್ಲ. ಈ ಮೂಲಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಟೀಮ್ ಇಂಡಿಯಾ ನಾಯಕ ಉಪನಾಯಕರ ಅತ್ಯದ್ಭುತ ಆಟಕ್ಕೆ ಸಾಕ್ಷಿಯಾಯಿತು. ಅಂತಿಮ ಹಂತದಲ್ಲಿ ಶ್ರೇಯಸ್ ಅಯ್ಯರ್ ಕೂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು

ರೋಹಿತ್ ಶರ್ಮಾ 119 ರನ್ ಗಳಿಸಿದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 89 ರನ್ ಗಳಿಸಿ ಅಂತಿಮ ಹಂತದಲ್ಲಿ ವಿಕೆಟ್ ಕಳೆದುಕೊಂಡರು. ಆಸ್ಟ್ರೇಲಿಯಾ ಪರವಾಗಿ ಬೌಲರ್‌ಗಳು ಕೇವಲ ಮೂರು ವಿಕೆಟ್‌ ಪಡೆಯಲಷ್ಟೇ ಶಕ್ತರಾದರು.

ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲ್ಲಬೇಕಾದರೆ ಈ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲಲೇ ಬೇಕಾಗಿತ್ತು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಟೀಮ್ ಇಂಡಿಯಾ ಬ್ಯಾಟಿಂಗ್‌ ಪಡೆ ಆಸ್ಟ್ರೇಲಿಯಾವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಟೀಮ್ ಇಂಡಿಯಾ ಜಯಭೇರಿ ಮೊಳಗಿಸಿತು.

ಈ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡು ಭರ್ಜರಿ ರನ್ ಕಲೆ ಹಾಕಿತು. 286 ರನ್‌ಗಳಿಸಿದ ಆಸ್ಟ್ರೇಲಿಯಾ ತಂಡ ತನ್ನ 9 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಟೀಮ್ ಇಂಡಿಯಾ ಗೆಲ್ಲಲು ಸವಾಲಿನ ಗುರಿ ನೀಡಿತ್ತು.

ಆಸ್ಟ್ರೇಲಿಯಾ ಪರವಾಗಿ ಸ್ಟೀವ್ ಸ್ಮಿತ್ ಶತಕದ ಆಟವನ್ನು ಆಡಿ ಆಸ್ಟ್ರೇಲಿಯಾಗೆ ಆಸರೆಯಾದರು. ಸ್ಮಿತ್ 132ಎಸೆತಗಳನ್ನು ಎದುರಿಸಿ ಭರ್ಜರಿ 131 ರನ್ ಬಾರಿಸಿದ್ದಾರೆ. ಸ್ಮಿತ್ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸ್ ಮತ್ತು 14 ಬೌಂಡರಿಗಳು ಇತ್ತು. ಸ್ಮಿತ್‌ಗೆ ಈ ಪಂದ್ಯದಲ್ಲೂ ಎರಡನೇ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವ ಮಾರ್ನಸ್ ಲ್ಯಾಬ್ಯುಷ್ಯಾಗ್ನೆ ಉತ್ತಮ ಸಾಥ್ ನೀಡಿದರು. ಈ ಪಂದ್ಯದಲ್ಲಿ ಮಾರ್ನಸ್ ಅರ್ಧ ಶತಕವನ್ನು ಸಿಡಿಸಿದರು. ಉಳಿದಂತೆ ಯಾವ ಆಟಗಾರನಿಂದಲೂ ಹೇಳಿಕೊಳ್ಳುವಂತಾ ಪ್ರದರ್ಶನ ಮೂಡಿಬಂದಿಲ್ಲ.

ಟೀಮ್ ಇಂಡಿಯಾ ಪರವಾಗಿ ವೇಗಿ ಮೊಹಮದ್ ಶಮಿ ನಾಲ್ಕು ವಿಕೆಟ್ ಪಡೆದರೆ ರವೀಂದ್ರ ಜಡೇಜಾ 2 ವಿಕೆಟ್ ಕಿತ್ತರು. ನವ್‌ದೀಪ್ ಸೈನಿ ಮತ್ತು ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

.

ಎಲ್ಲೂ ಸಲ್ಲುತ್ತಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ನೆನಪಿಸಿದ ಕೆಎಲ್ ರಾಹುಲ್!.

1
46132

ಟೀಮ್ ಇಂಡಿಯಾ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಲೋಕೇಶ್ ರಾಹುಲ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಆಷ್ಟನ್ ಟರ್ನರ್, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಆಡಮ್ ಜಂಪಾ

Story first published: Sunday, January 19, 2020, 21:15 [IST]
Other articles published on Jan 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X