ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೆಹ್ವಾಗ್-ಸಚಿನ್ ಜೊತೆ ಎಲೈಟ್ ಪಟ್ಟಿಗೆ ಸೇರಿದ ವಾರ್ನರ್ ಫಿಂಚ್ ಜೋಡಿ

India vs Australia: Finch, Warner join Sehwag-Tendulkar in elite list of openers

ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗದ ಅಬ್ಬರ ಭಾರತದ ಎರಡನೇ ಏಕದಿನ ಪಂದ್ಯದಲ್ಲೂ ಮುಂದುವರಿಸಿದೆ. ಸತತ ಎರಡಬನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾದ ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಜೋಡಿ ಶತಕದ ಜೊತೆಯಾಟವನ್ನು ನೀಡಿದೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಜೊತೆಯಾಟದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ದಾಖಲಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಶತಕದ ಜೊತೆಯಾಟವನ್ನು ನೀಡಿದ ಆರಂಭಿಕ ಆಟಗಾರರ ಪೈಕಿ ವಾರ್ನರ್ ಹಾಗೂ ಫಿಂಚ್ ಜೋಡಿ ಭಾರತದ ಖ್ಯಾತ ಜೋಡಿಯಾದ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಅವರಿಗೆ ಸಮನಾದ ಸಾಧನೆಯನ್ನು ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ಹಾಗೂ ಸೆಹ್ವಾಗ್ ಜೋಡಿ 12 ಭಿನ್ನ ಸಂದರ್ಭಗಳಲ್ಲಿ ಶತಕದ ಜೊತೆಯಾಟವನ್ನು ನೀಡಿದ್ದರು. ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಕೂಡ ಇಷ್ಟೇ ಸಂಖ್ಯೆಯಲ್ಲಿ ಶತಕದ ಜೊತೆಯಾಟವನ್ನು ನೀಡಿದ್ದಾರೆ.

Ind vs Aus : ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಆಟಗಾರರು ಸೀಮಿತ ಓವರ್‌ಗಳ ಸರಣಿಯಿಂದ ಔಟ್Ind vs Aus : ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಆಟಗಾರರು ಸೀಮಿತ ಓವರ್‌ಗಳ ಸರಣಿಯಿಂದ ಔಟ್

ಶತಕದ ಜೊತೆಯಾಟವನ್ನು ನೀಡಿದ ಆರಂಭಿಕ ಆಟಗಾರರ ಪೈಕಿ ಫಿಂಚ್ ವಾರ್ನರ್ ಜೋಡಿ 4ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಟೀಮ್ ಇಂಡಿಯಾದ ಅದ್ಭುತ ಆರಂಭಿಕ ಜೋಡಿಯಾದ ರ್ಸರವ್ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್ ಇದ್ದಾರೆ. ಸಚಿನ್ ಹಾಗೂ ಸೌರವ್ ಜೋಡಿ 21 ಶತಕದ ಜೊತೆಯಾಟವನ್ನು ನೀಡಿದ್ದಾರೆ.

ಇನ್ನು ಎರಡನೇ ಸ್ಥಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾದ ಎರಡು ಜೋಡಿಗಳು ಹಂಚಿಕೊಂಡಿದೆ. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ 16 ಶತಕದ ಜೊತೆಯಾಟವನ್ನು ನೀಡಿದ್ದರೆ ಆಸ್ಟ್ರೇಲಿಯಾದ ಆಡಂ ಗಿಲ್‌ಕ್ರಿಸ್ಟ್ ಹಾಗೂ ಮ್ಯಾಥ್ಯೂ ಹೇಡನ್ ಜೋಡಿ ಕೂಡ 16ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದೆ.

ಏಕದಿನ ವಿಶ್ವಕಪ್ ಬಳಿಕ ಮೊದಲ ಬಾರಿಗೆ ಬೌಲಿಂಗ್ ಮಾಡಲು ಕಣಕ್ಕಿಳಿದ ಹಾರ್ದಿಕ್ ಪಾಂಡ್ಯಏಕದಿನ ವಿಶ್ವಕಪ್ ಬಳಿಕ ಮೊದಲ ಬಾರಿಗೆ ಬೌಲಿಂಗ್ ಮಾಡಲು ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ

ವೆಸ್ಟ್ ಇಂಡೀಸ್‌ನ ಗಾರ್ಡನ್ ಗ್ರೀನಿಡ್ಜ್ ಹಾಗೂ ಡೆಸ್ಮಾಂಡ್ ಹೇಯ್ನಿಸ್ ಜೋಡಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು 15 ಶತಕದ ಜೊಯಾಟದಲ್ಲಿ ಪಾಲ್ಗೊಂಡಿದ್ದಾರೆ. ಅದಾದ ಬಳಿಕ ಟೀಮ್ ಇಂಡಿಯಾದ ಸಚಿನ್-ಸೆಹ್ವಾಗ್ ಹಾಗೂ ಫಿಂಚ್-ವಾರ್ನರ್ ಜೋಡಿ 12 ಶತಕದ ಜೊತೆಯಾಟದ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.

Story first published: Monday, November 30, 2020, 11:47 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X