ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಭ್ ಪಂತ್ ಬ್ಯಾಟಿಂಗ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಗೌತಮ್ ಗಂಭೀರ್

India vs Australia: Gautam Gambhir praises Rishabh Pants style

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಭಾರತ ರೋಚಕ ರೀತಿಯಲ್ಲಿ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತ ತಂಡದ ಪ್ರದರ್ಶನಕ್ಕೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಆಸ್ಟ್ರೇಲಿಯಾ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟುವ ವೇಳೆ ಯುವ ಕ್ರಿಕೆಟಿಗ ರಿಷಭ್ ಪಂತ್ ಆಟ ತಂಡದ ಭರವಸೆಯನ್ನು ಹೆಚ್ಚುವಂತೆ ಮಾಡಿತ್ತು. ಈ ಪ್ರದರ್ಶನದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮನಸ್ಸನ್ನು ಗೆಲ್ಲುವಲ್ಲಿಯೂ ಯಶಸ್ವಿಯಾಗಿದೆ.

ರಿಷಭ್ ಪಂತ್ ನಿಜಕ್ಕೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಅವರು ತನ್ನ ಸಾಮರ್ಥ್ಯದ ಬೆಂಬಲದೊಂದಿಗೆ ಹೇಗೆ ಬ್ಯಾಟಿಂಗ್ ನಡೆಸಬೇಕೋ ಹಾಗೆಯೇ ಬ್ಯಾಟಿಂಗ್ ಮಾಡಿದ್ದಾರೆ. ಜನರು ಆ ಹೊಡೆತವನ್ನು ಬಾರಿಬೇಕಾದ ಅಗತ್ಯವಿರಲಿಲ್ಲ ಎಮದು ಹೇಳಬಹುದು. ಆದರೆ ಆತ ಆಡುತ್ತಲೇ ಇದ್ದ ಹಾಗೂ ಪಂದ್ಯದಲ್ಲಿ ಭಾರತ ಉಳಿದುಕೊಳ್ಳುವಂತೆ ನೋಡಿಕೊಂಡರು. ಆತ ಇನ್ನು ಕೆಲ ಓವರ್‌ಗಳ ಕಾಲ ಬ್ಯಾಟಿಂಗ್ ನಡೆಸಿದ್ದರೆ ಭಾರತ ಬಹುಶಃ ಈ ಪಂದ್ಯವನ್ನು ಗೆದ್ದುಕೊಳ್ಳುತ್ತಿತ್ತು. ಆಗ ಅದು ಐತಿಹಾಸಿಕವಾಗಿ ಶ್ರೇಷ್ಠ ಗೆಲುವಾಗಿಸಿಕೊಳ್ಳುತ್ತಿತ್ತು ಎಂದು ಗಂಭೀರ್ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್‌ನಿಂದ ರವೀಂದ್ರ ಜಡೇಜಾ ಹೊರಕ್ಕೆಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್‌ನಿಂದ ರವೀಂದ್ರ ಜಡೇಜಾ ಹೊರಕ್ಕೆ

ಇದೇ ಸಂದರ್ಭದಲ್ಲಿ ಗೌತ್ ಗಂಭೀರ್ ಚೇತೇಶ್ವರ್ ಪೂಜಾರ ಬಗ್ಗೆಯೂ ಪ್ರಶಂಸೆಯ ಮಾತುಗಳನ್ನು ಆಡಿದರು. ಸಮಯವನ್ನು ಆಡಬಲ್ಲ ವಿಶ್ವದ ಕೆಲವೇಆಟಗಾರರ ಪೈಕಿ ಪೂಜಾರ ಕೂಡ ಓರ್ವ ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗಲಿ ಸಂಸದ ಗೌತಮ್ ಗಂಭೀರ್.

"ಚೇತೇಶ್ವರ್ ಪೂಜಾರ ಅವರ ಬ್ಯಾಟಿಂಗ್ ಬಗ್ಗೆ ನಿಮಗೆ ಎಷ್ಟು ಸಾಧ್ಯವೀ ಅಷ್ಟು ಮಾತನಾಡಬಹುದು. ಆತನ ಸ್ಟ್ರೈಕ್‌ರೇಟ್ ಬಗ್ಗೆ ಎಷ್ಟು ಬಯಸುತ್ತೀರೀ ಅಷ್ಟು ಹೇಳಬಹುದು. ಆದರೆ ವಿಶ್ವದಲ್ಲಿ ಕೆಲವೇ ಆಟಗಾರರು ಸಮಯ ಮತ್ತು ಸೆಶನ್‌ನಲ್ಲಿ ಆಡಬಲ್ಲರು. ನೀವು ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಮಾತ್ರವೇ ಸಮರ್ಥರು ಎಂದು ಕೆಲವರು ಭಾವಿಸಬಹುದು . ಆದರೆ ಈ ರೀತಿಯ ಡ್ರಾಗಳು ಗೆಲುವಿನಷ್ಟೇ ದೊಡ್ಡದು" ಎಂದು ಪೂಜಾರ ಆಟದ ಬಗ್ಗೆ ಗೌತನ್ ಗಂಭೀರ್ ಪ್ರಶಂಸೆಯ ನುಡಿಗಳನ್ನು ಆಡಿದ್ದಾರೆ.

ಚೇತೇಶ್ವರ್ ಪೂಜಾರ ಸಿಡ್ನಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 205 ಎಸೆತಗಳನ್ನು ಎದುರಿಸಿ 77 ರನ್ ಬಾರಿಸಿದ್ದರು. ಈ ಮೂಲಕ ಸಿಡ್ನಿ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಕಾರಣರಾಗಿದ್ದರು.

Story first published: Wednesday, January 13, 2021, 9:49 [IST]
Other articles published on Jan 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X