ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೂಜಾರ ವಿರುದ್ಧ ಆಸ್ಟ್ರೇಲಿಯಾ ತನ್ನ ಯೋಜನೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಿದೆ

India vs Australia: Glenn McGrath on Cheteshar pujara wicket

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ದಿಗ್ಗಜ ಬೌಲರ್ ಗ್ಲೆನ್ ಮೆಕ್‌ಗ್ರಾಥ್ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅವರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿರುವ ಆಸ್ಟ್ರೇಲಿಯಾ ಬೌಲರ್‌ಗಳನ್ನು ಹೊಗಳಿದ್ದಾರೆ. ಪೂಜಾರ ವಿರುದ್ಧ ಆಸಿಸ್ ಬೌಲರ್‌ಗಳು ಅತ್ಯುತ್ತಮವಾಗಿ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ ಎಂದು ಗ್ಲೆನ್ ಮೆಕ್‌ಗ್ರಾಥ್ ಹೇಳಿದ್ದಾರೆ.

ಬ್ರಸಿ್ಬೇನ್‌ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟಕ್ಕಾಗಿ ನಾಯಕ ಅಜಿಂಕ್ಯ ರಹಾನೆ ಜೊತೆಗೆ ಅನುಭವಿ ಚೇತೇಶ್ವರ್ ಪೂಜಾರ ಕ್ರೀಸ್ ಕಾಯ್ದುಕೊಮಡಿದ್ದರು. ಆದರೆ ಮೂರನೇ ದಿನದಾಟದ ಆಟಂಭದ ಕೆಲವೇ ಹೊತ್ತಿನಲ್ಲಿ ಪೂಜಾರ ವಿಕೆಟ್ ಪಡೆಯುವಲ್ಲಿ ಆಸಿಸ್ ಯಶಸ್ವಿಯಾಗಿತ್ತು. ಹ್ಯಾಜಲ್‌ವುಡ್ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ವಿಫಲರಾದ ಪೂಜಾರ ಕೀಪರ್ ಟಿಮ್ ಪೈನ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್ ಬ್ರಿಸ್ಬೇನ್, ದಿನ 3, Live ಸ್ಕೋರ್ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್ ಬ್ರಿಸ್ಬೇನ್, ದಿನ 3, Live ಸ್ಕೋರ್

ಈ ಹಿಂದಿನ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ಸರಣಿ ಗೆಲ್ಲುವಲ್ಲಿ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಪ್ರದರ್ಶನ ನಿರ್ಣಾಯಕ ಪಾತ್ರವಹಿಸಿತ್ತು. ಆ ಸರಣಿಯಲ್ಲಿ ಪೂಜಾರ ಮೂರಯ ಶತಕಗಳ ಸಹಿತ 521 ರನ್ ಬಾರಿಸಿ ಎರಡು ತಂಡಗಳ ಮಧ್ಯೆ ದೊಡ್ಡ ವ್ಯತ್ಯಾಸಕ್ಕೆ ಕಾರಣರಾಗಿದ್ದರು. ಆದರೆ ಈ ಬಾರಿಯ ಸರಣಿಯಲ್ಲಿ ಪೂಜಾರ ಈವರೆಗೆ ಒಂದೂ ಶತಕವನ್ನು ಸಿಡಿಸಲು ಸಾಧ್ಯವಾಗಿಲ್ಲ. ಆಡಿರುವ 7 ಇನ್ನಿಂಗ್ಸ್‌ನಲ್ಲಿ ಪೂಜಾರ ಈವರೆಗೆ ಗಳಿಸಿದ್ದು 215 ರನ್‌ಗಳನ್ನು ಮಾತ್ರ.

ಸೋನಿ ಸಿಕ್ಸ್ ಜೊತೆಗೆ ಮಾತನಾಡಿದ ಗ್ಲೆನ್ ಮೆಕ್‌ಗ್ರಾಥ್ "ಪೂಜಾರ ಈ ಹಿಂದೆ ಔಟಾದ ರೀತಿಯಲ್ಲೇ ಮತ್ತೆ ವಿಕೆಟ್ ಒಪ್ಪಿಸಿದ್ದಾರೆ. ಆದರೆ ಅದು ನಿಜಕ್ಕೂ ಅದ್ಭುತವಾದ ಎಸೆತಗಳು. ಬಹುಶಃ ಅವರು ಇನ್ನಷ್ಟು ಬಲ ಗೈ ಆಟಗಾರರ ವಿಕೆಟ್ ಪಡೆಯಲಿದ್ದಾರೆ" ಎಂದಿದ್ದಾರೆ ಗ್ಲೆನ್ ಮೆಕ್‌ಗ್ರಾಥ್.

ಆಸ್ಟ್ರೇಲಿಯಾ ವಿರುದ್ಧ ಆಡ್ತಿರೋದು ಅತೀ ದುರ್ಬಲ ಭಾರತ ತಂಡ ಅನ್ನೋದು ಗೊತ್ತಾ!?ಆಸ್ಟ್ರೇಲಿಯಾ ವಿರುದ್ಧ ಆಡ್ತಿರೋದು ಅತೀ ದುರ್ಬಲ ಭಾರತ ತಂಡ ಅನ್ನೋದು ಗೊತ್ತಾ!?

ನನಗನಿಸುತ್ತದೆ ಆಸ್ಟ್ರೇಲಿಯಾದ ಆಟಗಾರರು ಪೂಜಾರ ವಿಕೆಟ್ ಪಡೆಯುವ ಕಲೆಯನ್ನು ಕಂಡುಕೊಮಡಿದ್ದಾರೆ. ಸರಣಿ ಆರಂಭಕ್ಕೂ ಮುನ್ನವೇ ಒಊಜಾರ ವಿಕೆಟ್ ಪಡೆಯಲು ಯೋಜನೆಯನ್ನು ಹೊಂದಿದ್ದೇವೆ ಎಂದಿದ್ದರು. ಅದನ್ನು ಅವರು ಉತ್ತಮವಾಗಿ ಕಾರ್ಯಗತಗೊಳಿಸುತ್ತಿರುವಂತೆ ತೋರುತ್ತಿದೆ. ಅದರ ಪರಿಣಾಮವಾಗಿ ಉತ್ತಮ ಫಲಿತಾಂಶವನ್ನು ಅವರು ಪಡೆದುಕೊಳ್ಳುತ್ತಿದ್ದಾರೆ ಎಂದು ಮೆಕ್‌ಗ್ರಾಥ್ ಹೇಳಿದ್ದಾರೆ.

Story first published: Sunday, January 17, 2021, 10:47 [IST]
Other articles published on Jan 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X