ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದ ಸೋಲಿಗೆ ಕಾರಣ ಹೇಳಿದ ಭಜ್ಜಿ

India vs Australia: Harbhajan Singh explains India’s mistake in 1st ODI

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ ಉತ್ತಮ ಆರಂಭ ಕಂಡಿಲ್ಲ. ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 66 ರನ್‌ಗಳ ಸೋಲನುಭವಿಸುವುದರೊಂದಿಗೆ ಏಕದಿನ ಸರಣಿಯಲ್ಲಿ 1-0ಯ ಹಿನ್ನಡೆ ಅನುಭವಿಸಿದೆ.

ಪಾಕಿಸ್ತಾನದ 7ನೇ ಆಟಗಾರನಿಗೆ ಕೊರೊನಾವೈರಸ್ ಪಾಸಿಟಿವ್ಪಾಕಿಸ್ತಾನದ 7ನೇ ಆಟಗಾರನಿಗೆ ಕೊರೊನಾವೈರಸ್ ಪಾಸಿಟಿವ್

ಒಂದು ಹಂತದಲ್ಲಿ 104 ರನ್‌ಗೆ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತ ಅಂತಿಮವಾಗಿ 50 ಓವರ್‌ಗೆ 8 ವಿಕೆಟ್‌ ಕಳೆದು 308 ರನ್ ಗಳಿಸಿ ಶರಣಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದ್ದ ಆಸೀಸ್ 50 ಓವರ್‌ಗೆ 6 ವಿಕೆಟ್ ಕಳೆದು 374 ರನ್ ಮಾಡಿತ್ತು.

ಆರಂಭಿಕ ಪಂದ್ಯದಲ್ಲಿ ಭಾರತ ಎಡವಿದ್ದೆಲ್ಲಿ ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ. 'ಸಂಗತಿಗಳು ಭಾರತ ಅಂದುಕೊಂಡಂತೆ ನಡೆಯಲಿಲ್ಲ. ಸಿಡ್ನಿಯಲ್ಲಿ ಭಾರತ ಒಳ್ಳೆಯ ಕ್ರಿಕೆಟ್ ಆಡಿತು ಅನ್ನುತ್ತೇನೆ, ಆದರೆ ಆಡಿದ್ದರಲ್ಲಿ ಸಣ್ಣ ಸಣ್ಣ ತಪ್ಪುಗಳಿದ್ದವು. ಫೀಲ್ಡಿಂಗ್ ಸರಿಯಿರಲಿಲ್ಲ. ಬಹಳಷ್ಟು ಕ್ಯಾಚ್‌ಗಳನ್ನು ಬಿಡಲಾಯ್ತು,' ಎಂದು ಇಂಡಿಯಾ ಟುಡೇ ಜೊತೆ ಹರ್ಭಜನ್ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಸೋತರೂ ವಿಶೇಷ ದಾಖಲೆ ಬರೆದ ಭಾರತಭಾರತ vs ಆಸ್ಟ್ರೇಲಿಯಾ: ಸೋತರೂ ವಿಶೇಷ ದಾಖಲೆ ಬರೆದ ಭಾರತ

'ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಡುವಾಗ ನೀವು ಪ್ರತೀ ಕ್ಯಾಚನ್ನು ಪಡೆಯಲು ಬಯಸುತ್ತೀರಿ. ಹೆಚ್ಚು ಕ್ಯಾಚ್‌ಗಳನ್ನು ಪಡೆಯುವ ಅವಕಾಶ ನಿಮಗೆ ಬಂದಿತ್ತು. ಆದರೆ ದುರದೃಷ್ಟಕರವೆಂದರೆ, ಎಣಿಕೆಯಂತೆ ನಡೆಯಲಿಲ್ಲ. ಫೀಲ್ಡರ್‌ಗಳು ಬೌಲರ್‌ಗಳಿಗೆ ಬೆಂಬಲಿಸದಿದ್ದರೆ ಬೌಲರ್‌ಗಳು ನೋವು ಅನುಭವಿಸಬೇಕಾಗುತ್ತದೆ. ಇವತ್ತು ಅದೇ ಆಗಿದೆ,' ಎಂದು ಭಜ್ಜಿ ವಿವರಿಸಿದ್ದಾರೆ.

Story first published: Saturday, November 28, 2020, 12:59 [IST]
Other articles published on Nov 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X