ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಸೋತರೂ ವಿಶೇಷ ದಾಖಲೆ ಬರೆದ ಭಾರತ

India vs Australia: Highest aggregate in an ODI in Australia

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸ ಸರಣಿಯ ಆರಂಭಿಕ ಪಂದ್ಯದಲ್ಲೇ ಟೀಮ್ ಇಂಡಿಯಾ ಎಡವಿದೆ. ನೀರಸ ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿನ ತಪ್ಪುಗಳು ವಿರಾಟ್ ಕೊಹ್ಲಿ ಪಡೆ ಸೋಲಿನ ಕಹಿ ಅನುಭವಿಸುವಂತೆ ಮಾಡಿದೆ. ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ಮುಕ್ತಾಯಗೊಂಡ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 66 ರನ್‌ಗಳ ಗೆಲುವನ್ನಾಚರಿಸಿದೆ.

ಭಾರತ vs ಆಸ್ಟ್ರೇಲಿಯಾ: 17 ವರ್ಷಗಳ ಬಳಿಕ ಸೋಲಿನಲ್ಲಿ ಕೆಟ್ಟ ದಾಖಲೆ ಬರೆದ ಭಾರತಭಾರತ vs ಆಸ್ಟ್ರೇಲಿಯಾ: 17 ವರ್ಷಗಳ ಬಳಿಕ ಸೋಲಿನಲ್ಲಿ ಕೆಟ್ಟ ದಾಖಲೆ ಬರೆದ ಭಾರತ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾದಿಂದ ನಾಯಕ ಆ್ಯರನ್ ಫಿಂಚ್ 114, ಸ್ಟೀವನ್ ಸ್ಮಿತ್ 105 (66 ಎಸೆತ), ಡೇವಿಡ್ ವಾರ್ನರ್ 69, ಗ್ಲೆನ್ ಮ್ಯಾಕ್ಸ್‌ವೆಲ್ 45 ರನ್ ಬಾರಿಸಿದ್ದರಿಂದ ಕಾಂಗರೂ ಪಡೆ 50 ಓವರ್‌ ಮುಕ್ತಾಯಕ್ಕೆ 6 ವಿಕೆಟ್ ಕಳೆದು 374 ರನ್ ಬಾರಿಸಿತು.

ಗುರಿ ಬೆನ್ನಟ್ಟಿದ ಭಾರತದಿಂದ ಶಿಖರ್ ಧವನ್ 74, ಹಾರ್ದಿಕ್ ಪಾಂಡ್ಯ 90 (76 ಎಸೆತ) ರನ್ ಬಾರಿಸಿ ಗೆಲುವಿನ ನೆಲೆಯಲ್ಲಿ ಹೋರಾಟ ನಡೆಸಿದರಾದರೂ ತಂಡ 50 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 308 ರನ್ ಗಳಿಸಿತು. ಭಾರತದ ಇನ್ನಿಂಗ್ಸ್‌ನಲ್ಲಿ ಆಸೀಸ್ ಸ್ಪಿನ್ನರ್ ಆ್ಯಡಂ ಜಂಪಾ 54 ರನ್ 4, ಜೋಶ್ ಹ್ಯಾಝಲ್ವುಡ್ 55 ರನ್‌ಗೆ 3 ವಿಕೆಟ್ ಮುರಿದು ಪಾರಮ್ಯ ಮೆರೆದರು.

ಕಿವೀಸ್ vs ವಿಂಡೀಸ್: ಸ್ಫೋಟಕ ಅರ್ಧ ಶತಕ ಚಚ್ಚಿದ ಕೀರನ್ ಪೊಲಾರ್ಡ್ಕಿವೀಸ್ vs ವಿಂಡೀಸ್: ಸ್ಫೋಟಕ ಅರ್ಧ ಶತಕ ಚಚ್ಚಿದ ಕೀರನ್ ಪೊಲಾರ್ಡ್

ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿದೆಯಾದರೂ ಇತ್ತಂಡಗಳ ಹೆಸರಿನಲ್ಲಿ ವಿಶಿಷ್ಠ ದಾಖಲೆ ನಿರ್ಮಾಣವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಇತ್ತಂಡಗಳು ಅತೀ ಹೆಚ್ಚು ಒಟ್ಟು ರನ್ ಬಾರಿಸಿದ ದಾಖಲೆ ಸಾಲಿನಲ್ಲಿ ಶುಕ್ರವಾರದ ಪಂದ್ಯದ ರನ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ದಾಖಲಾದ ಅತ್ಯಧಿಕ ಒಟ್ಟು ರನ್‌ಗಳು
1. 688 ಒಟ್ಟು ರನ್, 376 ಆಸ್ಟ್ರೇಲಿಯಾ, 312 ಶ್ರೀಲಂಕಾ, ಸಿಡ್ನಿ, 2015
2. 682 ಒಟ್ಟು ರನ್, 374 ಆಸ್ಟ್ರೇಲಿಯಾ, 308 ಭಾರತ, ಸಿಡ್ನಿ, 2020*
3. 681 ಒಟ್ಟು ರನ್, 369 ಆಸ್ಟ್ರೇಲಿಯಾ, 312 ಪಾಕಿಸ್ತಾನ, ಅಡಿಲೇಡ್, 2017

Story first published: Friday, November 27, 2020, 20:51 [IST]
Other articles published on Nov 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X