ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದು ಕೇವಲ ನಂಬರ್ ಅಷ್ಟೇ: 40ನೇ ಏಕದಿನ ಶತಕಕ್ಕೆ ಕೊಹ್ಲಿ ಪ್ರತಿಕ್ರಿಯೆ

India vs Australia: ‘It’s just a number’ - Virat Kohli on his 40th ODI hundred

ನಾಗ್ಪುರ, ಮಾರ್ಚ್ 6: ಸಾಧನೆಯ ಹಂಬಲವಿರುವವರು ಪ್ರತಿಸಾರಿ ಸಾಧಿಸಿದಾಗಲೂ ಅದನ್ನು ದೊಡ್ಡ ಮಟ್ಟಿನಲ್ಲಿ ಸಂಭ್ರಮಿಸೋಲ್ಲ. ಬದಲಿಗೆ ಅವರಲ್ಲಾಗ ತಾನು ಇನ್ನೊಂದಿಷ್ಟು ಸಾಧಿಸಬೇಕು ಅನ್ನೋ ಹಪಹಪಿ ಶುರುವಾಗಿರುತ್ತದೆ. ಟೀಮ್ ಇಂಡಿಯಾ ನಾಯಕ ಕೊಹ್ಲಿಯೂ ಇದೇ ಸಾಲಿನ ಸಾದಕರಾಗಿ ಕಾಣಿಸುತ್ತಾರೆ.

ರನ್ ಮಷಿನ್ ಕೊಹ್ಲಿ 40ನೇ ಒಡಿಐ ಶತಕ, ಇನ್ನಿತರ ದಾಖಲೆಗಳುರನ್ ಮಷಿನ್ ಕೊಹ್ಲಿ 40ನೇ ಒಡಿಐ ಶತಕ, ಇನ್ನಿತರ ದಾಖಲೆಗಳು

ನಾಗ್ಪುರದಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 5) ನಡೆದ ಭಾರತ vs ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 40ನೇ ಅಂತಾರಾಷ್ಟ್ರೀಯ ಏಕದಿನ ಶತಕ ಬಾರಿಸಿದ್ದರು. ಆದರೆ ತನ್ನ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಕೊಹ್ಲಿ ಇದು ಕೇವಲ ನಂಬರ್ ಅಷ್ಟೇ ಎಂದಿದ್ದಾರೆ.

ಕೊಹ್ಲಿ ಆಕರ್ಷಕ ಶತಕ, ಆಸೀಸ್ ವಿರುದ್ಧ ಭಾರತಕ್ಕೆ 8 ರನ್ ರೋಚಕ ಜಯಕೊಹ್ಲಿ ಆಕರ್ಷಕ ಶತಕ, ಆಸೀಸ್ ವಿರುದ್ಧ ಭಾರತಕ್ಕೆ 8 ರನ್ ರೋಚಕ ಜಯ

ಪಂದ್ಯದಲ್ಲಿ ಕೊಹ್ಲಿ 120 ಎಸೆತಗಳಿಗೆ 116 ರನ್ ಬಾರಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 48.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 250 ರನ್ ಬಾರಿಸಿತ್ತು. 251 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 49.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 242 ರನ್ ಪೇರಿಸುವುದರೊಂದಿಗೆ ಶರಣಾಗಿತ್ತು.

'40ನೇ ಏಕದಿನ ಶತಕ ಪೂರೈಸಿದ್ದಕ್ಕೆ ಖುಷಿಯಿದೆ. ಆದರೂ ಅದು ಕೇವಲ ನಂಬರ್ ಎಂದಷ್ಟೇ ನನಗನ್ನಿಸುತ್ತಿದೆ. ಒಂದಂತೂ ನಿಜ; ಭಾರತ ತಂಡ ಗೆದ್ದಿದ್ದಕ್ಕೆ ನನಗೆ ಹೆಚ್ಚು ಖುಷಿ ಅನ್ನಿಸುತ್ತಿದೆ' ಎಂದು ಪಂದ್ಯದ ಬಳಿಕ ಕೊಹ್ಲಿ ಅಭಿಪ್ರಾಯ ಹಂಚಿಕೊಂಡರು.

ರೋಚಕ ಹಂತಕ್ಕೆ ತಲುಪಿದ್ದ ಪಂದ್ಯ ಆಸೀಸ್ ಪರ ವಾಲುವುದರಲ್ಲಿತ್ತು. ಅಂತಿಮ ಓವರ್‌ನಲ್ಲಿ ಆಸೀಸ್‌ಗೆ ಕೇವಲ 11 ರನ್‌ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್‌ನಲ್ಲಿ ವಿಜಯ್ ಶಂಕರ್ ಅವರು ಅಪಾಯಕಾರಿ ಆಟಗಾರ ಮಾರ್ಕಸ್ ಸ್ಟೋಯ್ನಿಸ್ ಮತ್ತು ಆದಂ ಜಂಪಾ ವಿಕೆಟ್ ಕೆಡವಿ ಭಾರತಕ್ಕೆ 8 ವಿಕೆಟ್ ಗೆಲುವು ತಂದಿದ್ದರು.

Story first published: Wednesday, March 6, 2019, 11:41 [IST]
Other articles published on Mar 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X