ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ರಿಚರ್ಡ್ಸನ್ ಹೊರಕ್ಕೆ, ಆ್ಯಂಡ್ರ್ಯೂ ಟೈ ಒಳಕ್ಕೆ

India vs Australia: Kane Richardson out, Andrew Tye joins Australia squad

ಸಿಡ್ನಿ: ಮುಂದಿನ ವಾರ ಆರಂಭಗೊಳ್ಳಲಿರುವ ಭಾರತ ವಿರುದ್ಧದ ಅಂತಾರಾಷ್ಟ್ರೀಯ ಟಿ20 ಮತ್ತು ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ತಂಡಕ್ಕೆ ವೇಗಿ ಆ್ಯಂಡ್ರ್ಯೂ ಟೈ ಸೇರ್ಪಡೆಗೊಂಡಿದ್ದಾರೆ. ವೇಗಿ ಕೇನ್ ರಿಚರ್ಡ್ಸನ್ ಸರಣಿಯಿಂದ ಹಿಂದೆ ಸರಿದಿದ್ದರಿಂದ ಅವರ ಸ್ಥಾನಕ್ಕೆ ಟೈ ಅವರನ್ನು ತರಲಾಗಿದೆ.

ಆರ್‌ಸಿಬಿಯ ನಿರಾಶಾದಾಯಕ ಆಟಗಾರನ ಹೆಸರಿಸಿದ ಆಕಾಶ್ ಚೋಪ್ರಾ!ಆರ್‌ಸಿಬಿಯ ನಿರಾಶಾದಾಯಕ ಆಟಗಾರನ ಹೆಸರಿಸಿದ ಆಕಾಶ್ ಚೋಪ್ರಾ!

ಭಾರತ-ಆಸ್ಟ್ರೇಲಿಯಾ ಸರಣಿಗಾಗಿ ಹೆಸರಿಸಲಾಗಿದ್ದ ಕೇನ್ ರಿಚರ್ಡ್ಸನ್ ತಾನು ಅಡಿಲೇಡ್‌ನಲ್ಲಿ ತನ್ನ ಪತ್ನಿ ಮತ್ತು ನವಜಾತ ಶಿಶುವಿನ ಜೊತೆ ಇರಬಯಸಿದ್ದೇನೆ ಎಂದು ತಿಳಿಸಿ ಸರಣಿಯಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಭಾರತ-ಆಸ್ಟ್ರೇಲಿಯಾ ಸರಣಿ ನವೆಂಬರ್ 27ರಿಂದ ಆರಂಭವಾಗಲಿದೆ.

'ಕೇನ್‌ಗೆ ನಿರ್ಧರಿಸಲು ಅದು ಕಠಿಣ ನಿರ್ಧಾರವಾಗಿತ್ತು. ಅದರೆ ಅವರಿಗೆ ಆಡುವ ತಂಡದ ಮತ್ತು ಆಯ್ಕೆದಾರರ ಸಂಪೂರ್ಣ ಬೆಂಬಲವಿದೆ. ಕೇನ್ ತಂಡಕ್ಕೆ ಏನು ಕೊಡುಗೆ ನೀಡಲಿದ್ದರೋ ಅದನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ಅವರ ನಿರ್ಧಾರ ನಮಗೆ ಅರ್ಥವಾಗಿದೆ,' ಎಂದು ರಾಷ್ಟ್ರೀಯ ಆಯ್ಕೆದಾರ ಟ್ರೆವರ್ ಹಾನ್ಸ್ ಹೇಳಿದ್ದಾರೆ.

ಶಕೀಬ್ ಅಲ್ ಹಸನ್‌ಗೆ ಜೀವ ಬೆದರಿಕೆಯೊಡ್ಡಿದ್ದ ವ್ಯಕ್ತಿಯ ಬಂಧನಶಕೀಬ್ ಅಲ್ ಹಸನ್‌ಗೆ ಜೀವ ಬೆದರಿಕೆಯೊಡ್ಡಿದ್ದ ವ್ಯಕ್ತಿಯ ಬಂಧನ

33ರ ಹರೆಯದ ಆ್ಯಂಡ್ರ್ಯೂ ಟೈ ಆಸ್ಟ್ರೇಲಿಯಾ ಪರ 7 ಏಕದಿನ ಪಂದ್ಯಗಳು, 26 ಟಿ20ಐ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 12, 37 ವಿಕೆಟ್‌ಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದಾಗ ಟೈ ಮೀಸಲು ವೇಗಿಯಾಗಿ ತಂಡದಲ್ಲಿದ್ದರು.

Story first published: Friday, November 20, 2020, 14:51 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X