ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

India vs Australia: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯ

India vs Australia: Karnataka fans Insist on Kannada commentary

ಬೆಂಗಳೂರು: ನವೆಂಬರ್ 27ರಿಂದ ಭಾರತ vs ಆಸ್ಟ್ರೇಲಿಯಾ ನಡುವಿನ ಕುತೂಹಲಕಾರಿ ಸರಣಿ ಆರಂಭವಾಗಲಿದೆ. ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿರುವ ವಿರಾಟ್ ಕೊಹ್ಲಿ ಪಡೆ ಅಲ್ಲಿ ಮೂರು ಏಕದಿನ ಪಂದ್ಯಗಳು, ಮೂರು ಟಿ20ಐ ಪಂದ್ಯಗಳು ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಲಿದೆ.

ಭಾರತ vs ಆಸೀಸ್: ಕಾಮೆಂಟೇಟರ್ಸ್ ಪಟ್ಟಿಯಲ್ಲಿ ಸಂಜಯ್ ಮಂಜ್ರೇಕರ್ಭಾರತ vs ಆಸೀಸ್: ಕಾಮೆಂಟೇಟರ್ಸ್ ಪಟ್ಟಿಯಲ್ಲಿ ಸಂಜಯ್ ಮಂಜ್ರೇಕರ್

ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ರೋಚಕತೆಯಿಂದ ಕೂಡಿರುತ್ತದೆ. ಇತ್ತಂಡಗಳ ಕದಕ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಬೇಸರದ ಸಂಗತಿಯೊಂದಿಗೆ. ಭಾರತ-ಆಸ್ಟ್ರೆಲಿಯಾ ಪಂದ್ಯಗಳ ಕಾಮೆಂಟರಿ ಕನ್ನಡದಲ್ಲಿ ಬರುತ್ತಿಲ್ಲ.

ರೋಹಿತ್, ಇಶಾಂತ್ ಭಾರತ ಟೆಸ್ಟ್ ತಂಡದಲ್ಲೇ ಇಲ್ಲ: ಬಿಸಿಸಿಐರೋಹಿತ್, ಇಶಾಂತ್ ಭಾರತ ಟೆಸ್ಟ್ ತಂಡದಲ್ಲೇ ಇಲ್ಲ: ಬಿಸಿಸಿಐ

ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸ ಸರಣಿಗಳ ಅಧಿಕೃತ ಪ್ರಸಾರಕ ಸೋನಿ ಪಿಕ್ಚರ್ಸ್ ಸ್ಪೋರ್ಟ್ಸ್ ಇಂಡಿಯಾ ಸರಣಿಗೆ ಸಂಬಂಧಿಸಿ ಇತ್ತೀಚೆಗೆ ಕಾಮೆಂಟೇಟರ್‌ಗಳ ಪಟ್ಟಿ ಬಿಡುಗಡೆ ಮಾಡಿತ್ತು. ಇದರಲ್ಲಿ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಭಾಷೆಗಳ ಕಾಮೆಂಟೇಟರ್‌ಗಳ ಪಟ್ಟಿಯಿತ್ತು. ಆದರೆ ಕನ್ನಡ ಭಾಷೆ ಈ ಪಟ್ಟಿಯಲ್ಲಿರಲಿಲ್ಲ.

ಕನ್ನಡದ ಕಡೆಗಣನೆ ಗಮನಿಸಿದ್ದ ಭಾರತದ ಕ್ರಿಕೆಟಿಗ ಕನ್ನಡಿಗ ದೊಡ್ಡ ಗಣೇಶ್, ಕನ್ನಡವನ್ನೂ ಪರಿಗಣಿಸುವಂತೆ ಸೋನಿ ಸ್ಪೋರ್ಟ್ಸ್ ಜೊತೆ ಕೇಳಿಕೊಂಡಿದ್ದರು. ಈಗ ಚೇತನ್ ಜೀರಾಳ್ ಕೂಡ #CommentaryInKannada ಹ್ಯಾಷ್ ಟ್ಯಾಗ್ ಅಭಿಯಾನದ ಮೂಲಕ ಕನ್ನಡ ಕಾಮೆಂಟರಿಗೆ ಒತ್ತಾಯಿಸುವಂತೆ ಕೇಳಿಕೊಂಡಿದ್ದಾರೆ.

Story first published: Wednesday, November 25, 2020, 13:15 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X