ಉತ್ತಮ ಉದಾಹರಣೆಯೊಂದಿಗೆ ಬೂಮ್ರಾ ಸಮರ್ಥಿಸಿದ ಕೆಎಲ್ ರಾಹುಲ್

ಸಿಡ್ನಿ: ಸಿಡ್ನಿ ಕ್ರಿಕೆಟ್ ಗ್ರೌಂಡ್ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಪಾಲಿಗೆ ವಿಶೇಷ-ಸ್ಮರಣೀಯ. ಯಾಕೆಂದರೆ ಇದೇ ಮೈದಾನದಲ್ಲಿ ಬೂಮ್ರಾ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು. 2016 ಜನವರಿ 23ರಂದು ನಡೆದಿದ್ದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಬೂಮ್ರಾ ಆವತ್ತು ಸ್ಟೀವ್ ಸ್ಮಿತ್ ವಿಕೆಟ್ ಪಡೆದು ಮಿಂಚಿದ್ದರು. ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಭಾರತ ತಂಡ, ಅಂದು ಐದು ಪಂದ್ಯಗಳ ಏಕದಿನ ಸರಣಿಯ 5ನೇ ಮತ್ತು ಕೊನೇ ಪಂದ್ಯದಲ್ಲಿ ಗೆದ್ದಿತ್ತು.

ಫಾರ್ಮುಲಾ 1 ರೇಸ್‌ನಲ್ಲಿ ಭೀಕರ ಅಪಘಾತ, ಹೊತ್ತಿ ಉರಿದ ಕಾರು: ವಿಡಿಯೋ

ಆ ದಿನ ಜಸ್‌ಪ್ರೀತ್ ಬೂಮ್ರಾಗೆ ಚೊಚ್ಚಲ ವಿಕೆಟ್‌ ಆಗಿ ಸ್ಟೀವ್ ಸ್ಮಿತ್ ವಿಕೆಟ್ ಅಲ್ಲದೆ ಜೇಮ್ಸ್ ಫಾಕ್ನರ್ ವಿಕೆಟ್ ಕೂಡ ಲಭಿಸಿತ್ತು. ಅಂದು 40 ರನ್‌ಗೆ 2 ವಿಕೆಟ್ ಮುರಿದು ಬೂಮ್ರಾ ಗಮನ ಸೆಳೆದಿದ್ದರು. ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಜಯ ಸಾಧಿಸಿತ್ತು ಕೂಡ.

ಭಾರತ vs ಆಸ್ಟ್ರೇಲಿಯಾ: ವಿರಾಟ್ ಕೊಹ್ಲಿ ನಿರ್ಧಾರದ ಬಗ್ಗೆ ಆಶಿಶ್ ನೆಹ್ರಾ ಅಸಮಾಧಾನ

ಆದರೆ ಈಗ ಅದೇ ಸ್ಟೇಡಿಯಂನಲ್ಲಿ ಬೂಮ್ರಾ ನೀರಸ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಸರಣಿಯ ಎರಡು ಏಕದಿನ ಪಂದ್ಯಗಳಲ್ಲಿ ಬೂಮ್ರಾ ಪ್ರದರ್ಶನ ಕಳೆಗುಂದಿದೆ.

ದುಬಾರಿ ರನ್‌ ನೀಡಿದ ಬೂಮ್ರಾ

ದುಬಾರಿ ರನ್‌ ನೀಡಿದ ಬೂಮ್ರಾ

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆರಂಭಿಕ ಎರಡು ಪಂದ್ಯಗಳು ಮುಗಿದಿದ್ದು, ಮೊದಲ ಪಂದ್ಯದಲ್ಲಿ ಬೂಮ್ರಾ 10 ಓವರ್‌ಗಳಲ್ಲಿ 73 ರನ್‌ ನೀಡಿ 1 ವಿಕೆಟ್, ದ್ವಿತೀಯ ಪಂದ್ಯದಲ್ಲಿ 10 ಓವರ್‌ ಎಸೆದು 79 ರನ್‌ ನೀಡಿ 1 ವಿಕೆಟ್ ಪಡೆದಿದ್ದರು. ಎರಡೂ ಪಂದ್ಯಗಳನ್ನು ಸೋತಿರುವ ಭಾರತ ಏಕದಿನ ಸರಣಿಯನ್ನೂ ಕಳೆದುಕೊಂಡಿದೆ.

ಬೂಮ್ರಾ ಬೆನ್ನಿಗೆ ರಾಹುಲ್

ಬೂಮ್ರಾ ಬೆನ್ನಿಗೆ ರಾಹುಲ್

ಆದರೆ ನಿಯಮಿತ ಓವರ್‌ ಕ್ರಿಕೆಟ್‌ನಲ್ಲಿ ಉಪನಾಯಕರಾಗಿರುವ ಕೆಎಲ್ ರಾಹುಲ್ ಬೂಮ್ರಾ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. 'ಬೂಮ್ರಾ ಒಬ್ಬ ಚಾಂಪಿಯನ್ ಬೌಲರ್. ಆತನ ಉಪಸ್ಥಿತಿ ತುಂಬಾ ಅಮೂಲ್ಯವಾಗಿದೆ. ಬೂಮ್ರಾ ಮೌಲ್ಯ ನಮಗೆ ಗೊತ್ತು,' ಎಂದು ರಾಹುಲ್ ಹೇಳಿದ್ದಾರೆ.

ಬೂಮ್ರಾ ಮೌಲ್ಯ ನಮಗೆ ಗೊತ್ತು

ಬೂಮ್ರಾ ಮೌಲ್ಯ ನಮಗೆ ಗೊತ್ತು

'ಎಂಥ ದೊಡ್ಡ ಬೌಲರ್ ಆದರೂ ನಿಮ್ಮ ಪ್ರದರ್ಶನ ಕಮ್‌ಬ್ಯಾಕ್‌ ಮಾಡಿಕೊಳ್ಳಲು ನಿಮಗೊಂದು ಸಮಯ ಬರುತ್ತದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿಕೆಟ್‌ಗಳು ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕಾರಿ. ಇಂಥ ವಿಕೆಟ್‌ಗಳಲ್ಲಿ ಟೌಪ್ ಬೌಲರ್ ಕೂಡ ವಿಕೆಟ್ ಪಡೆಯದಿರುವುದನ್ನು ನೀವು ಗಮನಿಸಿರಬಹುದು. ಹೀಗಾಗಿ ಬೂಮ್ರಾ ಹಿನ್ನಡೆ ಒಪ್ಪಿಕೊಳ್ಳಬಹುದಾದಂಥದ್ದು,' ಎಂದು ರಾಹುಲ್, ಬೂಮ್ರಾ ಅವರನ್ನು ಸಮರ್ಥಿಸಿದ್ದಾರೆ.

3ನೇ ಪಂದ್ಯ ಪ್ರತಿಷ್ಠೆಯದ್ದು

3ನೇ ಪಂದ್ಯ ಪ್ರತಿಷ್ಠೆಯದ್ದು

ಮೂರು ಪಂದ್ಯಗಳ ಏಕದಿನ ಸರಣಿಯ ಕಡೇ ಪಂದ್ಯ ಡಿಸೆಂಬರ್ 2ರ ಬುಧವಾರ ನಡೆಯಲಿದೆ. ಇದು ಆಸ್ಟ್ರೇಲಿಯಾ ಪಾಲಿಗೆ ಔಪಚಾರಿಕವಾಗಿದ್ದರೆ, ಭಾರತದ ಪಾಲಿಗೆ ಪ್ರತಿಷ್ಠೆಯ ಪಂದ್ಯ. ಈ ಪಂದ್ಯದಲ್ಲಿ ಭಾರತ ಗೆದ್ದು ವೈಟ್ ವಾಷ್ ಮುಖಭಂಗ ತಪ್ಪಿಸಿಕೊಳ್ಳಬೇಕಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, November 30, 2020, 16:48 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X