ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್ ಪುನರಾರಂಭಿಸಲು ಮೆಲ್ಬರ್ನ್‌ಗೆ ಬಂದ ಕೆಎಲ್ ರಾಹುಲ್

India vs Australia: KL Rahul returns to MCG hoping to restart Test career

ಮೆಲ್ಬರ್ನ್: ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆರಂಭಿಕ ಭಾರತದ ಬ್ಯಾಟ್ಸ್‌ಮನ್‌, ವಿಕೆಟ್ ಕೀಪರ್ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ರಾಹುಲ್ ಸುಸ್ಥಿರ ಪ್ರದರ್ಶನ ನೀಡಬೇಕಾಗಿದೆ. ಬಹುಶಃ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ರಾಹುಲ್ ಅದೃಷ್ಟ ಪರೀಕ್ಷಿಸಿಕೊಳ್ಳುವ ನಿರೀಕ್ಷೆಯಿದೆ.

ಮ್ಯಾನ್ಚೆಸ್ಟರ್ ಯು., ಲಿವರ್‌ಪೂಲ್, ಬಾರ್ಕಾ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್!ಮ್ಯಾನ್ಚೆಸ್ಟರ್ ಯು., ಲಿವರ್‌ಪೂಲ್, ಬಾರ್ಕಾ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್!

ಆರಂಭಿಕ ಪಂದ್ಯದಲ್ಲಿ ಓಪನರ್ ಆಗಿ ಆಡಿದ್ದ ಯುವ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ನಿರಾಸೆ ಮೂಡಿಸಿದ್ದರು. ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 0, 4 ರನ್ ಗಳಿಸಿದ್ದರು. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಶಾ ಬದಲಿಗೆ ಕೆಎಲ್ ರಾಹುಲ್‌ಗೆ ಅವಕಾಶ ನೀಡಬೇಕೆಂಬ ಮಾತುಗಳು ಕೇಳಿಬಂದಿದ್ದವು.

ಭಾರತದ ಮಾಜಿ ಬ್ಯಾಟ್ಸ್‌ಮನ್‌ ಸುನಿಲ್ ಗವಾಸ್ಕರ್, ವಾಸಿಮ್ ಜಾಫರ್ ಕೂಡ ರಾಹುಲ್ ಮತ್ತು ಶುಬ್‌ಮನ್ ಗಿಲ್‌ಗೆ ಅವಕಾಶ ನೀಡುವಂತೆ ಟ್ವೀಟ್ ಮೂಲಕ ನಾಯಕ ಅಜಿಂಕ್ಯ ರಹಾನೆ ಅವರಲ್ಲಿ ಕೇಳಿಕೊಂಡಿದ್ದರು. ಹೀಗಾಗಿ ದ್ವಿತೀಯ ಟೆಸ್ಟ್‌ನಲ್ಲಿ ರಾಹುಲ್ ಪ್ಲೇಯಿಂಗ್‌ XIನಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಲಕ್ಷಣಗಳಿವೆ. ದ್ವಿತೀಯ ಟೆಸ್ಟ್ ಮೆಲ್ಬರ್ನ್‌ನಲ್ಲಿ ಡಿಸೆಂಬರ್ 26ರಿಂದ ಆರಂಭಗೊಳ್ಳಲಿದೆ.

ಐಸಿಸಿ ರ್‍ಯಾಂಕಿಂಗ್ಸ್‌: ವಿರಾಟ್ ಕೊಹ್ಲಿಗಿಂತ ಕೆಎಲ್ ರಾಹುಲ್ ಮುಂದುಐಸಿಸಿ ರ್‍ಯಾಂಕಿಂಗ್ಸ್‌: ವಿರಾಟ್ ಕೊಹ್ಲಿಗಿಂತ ಕೆಎಲ್ ರಾಹುಲ್ ಮುಂದು

ಕೆಎಲ್ ರಾಹುಲ್ ಕಡೇಯ ಟೆಸ್ಟ್‌ ಪಂದ್ಯ ಆಡಿದ್ದು 2019ರ ಆಗಸ್ಟ್ 30ರಂದು ವೆಸ್ಟ್ ಇಂಡೀಸ್ ವಿರುದ್ಧ. ಅಂದರೆ ರಾಹುಲ್ ಟೆಸ್ಟ್ ಆಡಿ ವರ್ಷ ಕಳೆದಿದೆ. ದ್ವಿತೀಯ ಟೆಸ್ಟ್‌ನಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿದರೆ ಮುಂದಿನ ಪಂದ್ಯಗಳಲ್ಲೂ ರಾಹುಲ್‌ಗೆ ಅವಕಾಶ ಒದಗಿ ಬರಲಿದೆ. ಒಟ್ಟು 36 ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ 2006 ರನ್ ಗಳಿಸಿದ್ದಾರೆ.

Story first published: Thursday, December 24, 2020, 9:50 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X