ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ ಟಿ ನಟರಾಜನ್

India vs Australia: Know more about ODI debutant T Natarajan

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ತಂಗರಸು ನಟರಾಜನ್ ಟೀಮ್ ಇಂಡಿಯಾಗೆ ಪದಾರ್ಪಣೆಯನ್ನು ಮಾಡಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಟಿ ನಟರಾಜನ್ ನಾಯಕ ವಿರಾಟ್ ಕೊಹ್ಲಿಯಿಂದ ಟೀಮ್ ಇಂಡಿಯಾದ ಕ್ಯಾಪ್ ಪಡೆದುಕೊಂಡರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ 232ನೇ ಆಟಗಾರನೆನಿಸಿದ್ದಾರೆ.

ಮೊದಲಿಗೆ ಟೀಮ್ ಇಂಡಿಯಾದ ಟಿ20 ತಂಡಕ್ಕೆ ಆಯ್ಕೆಯಾಗಿದ್ದ ವರುಣ್ ಚಕ್ರವರ್ತಿ ಗಾಯಗೊಂಡ ಕಾರಣ ಆ ಸ್ಥಾನಕ್ಕೆ ಟಿ ನಟರಾಜನ್ ಟಿ20 ತಂಡಕ್ಕೆ ಆಯ್ಕೆಯಾಗಿ ಮೊದಲ ಬಾರಿಗೆ ಭಾರತ ತಂಡದ ಪರವಾಗಿ ಕಣಕ್ಕಿಳಿಯಲು ಕರೆಯನ್ನು ಪಡೆದರು. ಬಳಿಕ ಆಸ್ಟ್ರೇಲಿಯಾಗೆ ಟೀಮ್ ಇಂಡಿಯಾ ಬಂದಿಳಿದ ಬಳಿ ಏಕದಿನ ತಂಡಕ್ಕೂ ಟಿ ನಟರಾಜನ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಆಸಿಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ನಟರಾಜನ್ ಪದಾರ್ಪಣೆಯನ್ನೂ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತ vs ಆಸ್ಟ್ರೇಲಿಯಾ: 3ನೇ ಏಕದಿನ ಪಂದ್ಯ, Live ಸ್ಕೋರ್ಭಾರತ vs ಆಸ್ಟ್ರೇಲಿಯಾ: 3ನೇ ಏಕದಿನ ಪಂದ್ಯ, Live ಸ್ಕೋರ್

ತಮಿಳು ನಾಡು ಮೂಲದ ನಟರಾಜನ್ ಯುಎಇನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಈ ಬಾರಿ ಅದ್ಭುತ ಯಶಸ್ಸು ಸಾಧಿಸಿದರು. ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಕಣಕ್ಕಿಳಿದಿದ್ದ ನಟರಾಜನ್ ತಮ್ಮ ನಿಖರವಾದ ಯಾರ್ಕರ್ ದಾಳಿಯ ಮೂಲಕ ಎಲ್ಲರ ಗಮನ ಸೆಳೆದರು. ಈ ಮೂಲಕ ಟೀಮ್ ಇಂಡಿಯಾದ ಕದ ತಟ್ಟುವಲ್ಲೂ ಯಶಸ್ವಿಯಾದರು.

ತಮಿಳು ನಾಡಿನ ಸೇಲಂನವರಾದ ನಟರಾಜನ್ ಟೆನ್ನಿಸ್ ಬಾಲ್‌ನ ಟೂರ್ನಿಯೊಂದರಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದರು. ಇದರ ಆಧಾರದಲ್ಲಿ ತಮಿಳುನಾಡಿನ ಟಿ20 ಲೀಗ್ 'ತಮಿಲ್‌ನಾಡು ಪ್ರೀಮಿಯರ್ ಲೀಗ್‌'ನಲ್ಲಿ 2017ರ ಆವೃತ್ತಿಯಲ್ಲಿ ಅವಕಾಶವನ್ನು ಪಡೆದುಕೊಂಡರು. ಅಲ್ಲಿ ಸಾಧಿಸಿದ ಯಶಸ್ಸು ಅವರನ್ನು ಐಪಿಎಲ್‌ಗೆ ಆಯ್ಕೆಯಾಗುವಂತೆ ಮಾಡಿತ್ತು.

3-0 ಅಂತರದ ಸೋಲನ್ನು ತಪ್ಪಿಸಿಕೊಳ್ಳುತ್ತಾ ಟೀಮ್ ಇಂಡಿಯಾ?: ಕೆಟ್ಟ ದಾಖಲೆಯ ಭೀತಿಯಲ್ಲಿ ಕೊಹ್ಲಿ3-0 ಅಂತರದ ಸೋಲನ್ನು ತಪ್ಪಿಸಿಕೊಳ್ಳುತ್ತಾ ಟೀಮ್ ಇಂಡಿಯಾ?: ಕೆಟ್ಟ ದಾಖಲೆಯ ಭೀತಿಯಲ್ಲಿ ಕೊಹ್ಲಿ

2018ರಲ್ಲೇ ನಟರಾಜನ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದರು. ಆದರೆ 2020ರ ಟೂರ್ನಿಯಲ್ಲಿ ನಟರಾಜನ್ ಆಡುವ ಬಳಗದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡರು. ಯಾರ್ಕರ್‌ ಪ್ರಮುಖ ಅಸ್ತ್ರವಾಗೊರುವ ನಟರಾಜನ್ ಸತತವಾಗಿ ಯಾರ್ಕರ್ ಎಸೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Story first published: Wednesday, December 2, 2020, 14:41 [IST]
Other articles published on Dec 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X