ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಭಜನ್ ಸಿಂಗ್ ದಾಖಲೆ ಮುರಿದು ಮಿನುಗಿದ ಕುಲದೀಪ್ ಯಾದವ್

India vs Australia: Kuldeep Yadav breaks Harbhajan Singh’s record

ರಾಜ್‌ಕೋಟ್‌, ಜನವರಿ 18: ಮುಂಬೈ ಸ್ಟೇಡಿಯಂನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅನುಭವಿಸಿದ್ದ 10 ವಿಕೆಟ್‌ಗಳ ಸೋಲಿನ ಮುಖಭಂಗವನ್ನು ಭಾರತ ತಂಡ, ದ್ವಿತೀಯ ಪಂದ್ಯದ ಮೂಲಕ ತೀರಿಸಿತ್ತು. ರಾಜ್‌ಕೋಟ್‌ನಲ್ಲಿನ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 36 ರನ್‌ಗಳ ಜಯ ಗಳಿಸಿತ್ತು.

ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!

ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್‌ ಬೆಂಬಲ ನೀಡಿದರೆ, ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್ ಶಮಿ, ನವದೀಪ್ ಸೈನಿ, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ತುಂಬಿದ ಬಲ ಪ್ರಮುಖ ಪಂದ್ಯದಲ್ಲಿ ತಂಡದ ಗೆಲುವನ್ನು ಬರೆದಿತ್ತು.

ಸಚಿನ್, ಆಮ್ಲಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!ಸಚಿನ್, ಆಮ್ಲಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!

ರಾಜ್‌ಕೋಟ್‌ನಲ್ಲಿ ಶುಕ್ರವಾರ (ಜನವರಿ 17) ನಡೆದ ಪಂದ್ಯದಲ್ಲಿ ಭಾರತದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ.

ಪ್ರಮುಖ ವಿಕೆಟ್‌ಗಳು ಮುರಿದಿದ್ದು

ಪ್ರಮುಖ ವಿಕೆಟ್‌ಗಳು ಮುರಿದಿದ್ದು

ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕುಲದೀಪ್ ಯಾದವ್, ಆಸ್ಟ್ರೇಲಿಯಾದ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಾದ ಸ್ಟೀವ್ ಸ್ಮಿತ್ (98 ರನ್) ಮತ್ತು ಅಲೆಕ್ಸ್ ಕ್ಯಾರಿ (18 ರನ್) ವಿಕೆಟ್‌ ಮುರಿದರು. ಇದು ಟೀಮ್ ಇಂಡಿಯಾದ ಗೆಲುವಿನಾಸೆಗೆ ಬಲ ತುಂಬಿತ್ತು.

ಹರ್ಭಜನ್ ದಾಖಲೆ ಪತನ

ಹರ್ಭಜನ್ ದಾಖಲೆ ಪತನ

ರಾಜ್‌ಕೋಟ್‌ನಲ್ಲಿ ದೊರೆತ ಎರಡು ವಿಕೆಟ್‌ಗಳಿಂದ ಕುಲದೀಪ್ ಯಾದವ್ ಏಕದಿನದಲ್ಲಿ ವೇಗದಲ್ಲಿ 100 ವಿಕೆಟ್ ಪಡೆದ ದಾಖಲೆಗೂ ಕಾರಣರಾಗಿದ್ದಾರೆ. 100 ವಿಕೆಟ್‌ಗಳಿಗಾಗಿ ಕುಲದೀಪ್ ಒಟ್ಟು 58 ಪಂದ್ಯಗಳನ್ನು ಬಳಸಿಕೊಂಡಿದ್ದಾರೆ. ಇದು ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್‌ ಸಿಂಗ್ ಹೆಸರಿನಲ್ಲಿದ್ದ ದಾಖಲೆ ಮೀರಿಸಿದೆ.

ಭಾರತದ ಮೂರನೇ ಸಾಧಕ

ಭಾರತದ ಮೂರನೇ ಸಾಧಕ

ಏಕದಿನ 100 ವಿಕೆಟ್ ಸಾಧನೆಗಾಗಿ ಭಜ್ಜಿ 76 ಪಂದ್ಯಗಳನ್ನು ಬಳಸಿಕೊಂಡಿದ್ದರೆ, ಕುಲದೀಪ್ ಕೇವಲ 58 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ವೇಗಿ ಜಸ್‌ಪ್ರೀತ್‌ ಬೂಮ್ರಾ (57 ಪಂದ್ಯ) ಮತ್ತು ಮೊಹಮ್ಮದ್ ಶಮಿ (56 ಪಂದ್ಯ) ಬಳಿಕ ಏಕದಿನದಲ್ಲಿ ವೇಗದ 100 ವಿಕೆಟ್‌ ದಾಖಲೆ ಮಾಡಿದ ಭಾರತದ 3ನೇ ಬೌಲರ್ ಆಗಿಯೂ ಯಾದವ್ ಗಮನ ಸೆಳೆದಿದ್ದಾರೆ.

ವಿಶ್ವಮಟ್ಟದ ದಾಖಲೆ ಸರದಾರರು

ವಿಶ್ವಮಟ್ಟದ ದಾಖಲೆ ಸರದಾರರು

ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಅತೀ ವೇಗದಲ್ಲಿ 100 ವಿಕೆಟ್‌ಗಳನ್ನು ಪಡೆದ ವಿಶ್ವದಾಖಲೆ ಸಾಲಿನಲ್ಲಿ ಅಫ್ಘಾನಿಸ್ಥಾನಿ ಸ್ಪಿನ್ನರ್ ರಶೀದ್ ಖಾನ್ (44 ಪಂದ್ಯಗಳು), ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ (52 ಪಂದ್ಯಗಳು) ಮತ್ತು ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ (53 ಪಂದ್ಯಗಳು) ಅಗ್ರ ಸ್ಥಾನಗಳನ್ನು ಪಡೆದಿದ್ದಾರೆ. ಇದೇ ಸಾಧನೆಗೆ ಬರೀ ಸ್ಪಿನ್ನರ್‌ಗಳನ್ನು ಗಣನೆಗೆ ತೆದುಕೊಂಡರೆ ರಶೀದ್ ಖಾನ್, ಸಕ್ಲೇನ್ ಮುಷ್ತಾಕ್, ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ)/ಕುಲದೀಪ್ ಯಾದವ್ ಮೊದಲ 3ರಲ್ಲಿ ಗುರುತಿಸಿಕೊಂಡಿದ್ದಾರೆ.

Story first published: Saturday, January 18, 2020, 12:33 [IST]
Other articles published on Jan 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X