ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್‌ಗಳ ಜೊತೆ ಲಾಬುಶೇನ್ ಕುತೂಹಲಕಾರಿ ಸಂಭಾಷಣೆ: ವಿಡಿಯೋ

india vs australia: Labuschagne and Gill were having banter between the match

ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕರು ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಆಸ್ಟ್ರೇಲಿಯಾದ ಬೌಲರ್‌ಗಳನ್ನು ಆರಂಭದಲ್ಲಿ ಬೆವರಿಸಳಿಸುವಲ್ಲಿ ಟೀಮ್ ಇಂಡಿಯಾ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಯಶಸ್ವಿಯಾದರು.

ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಯುವ ಬ್ಯಾಟಿಂಗ್ ಸೆನ್ಸೇಶನ್ ಮಾರ್ನಸ್ ಲೆಬುಶೇನ್ ಟೀಮ್ ಇಂಡಿಯಾ ಆರಂಭಿಕರಾದ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಅವರನ್ನು ಮಾತಿಗೆಳೆಯಲು ಯತ್ನಿಸಿದ ಕುತೂಹಲಕಾರಿ ಘಟನೆ ನಡೆಯಿತು. ಈ ಮೂಲಕ ಆಟಗಾರರ ಗಮನ ಬೇರೆಡೆ ಸೆಳೆಯುವ ಯತ್ನ ನಡೆಸಿದರು ಆಸಿಸ್ ಯುವ ಆಟಗಾರ.

ಲಾಬುಶೇನ್ ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿ ನಿಂತು ಫೀಲ್ಡಿಂಗ್ ನಡೆಸುತ್ತಿದ್ದರು. ಹೀಗಾಗಿ ಅವರು ಮಾತನಾಡುತ್ತಿದ್ದ ಹಾಗೂ ಬೌಲರ್‌ಗಳಿಗೆ ಉತ್ಸಾಹ ತುಂಬುತ್ತಿದ್ದ ಮಾತುಗಳು ವಿಕೆಟ್ ಹಿಂದಿನ ಮೈಕ್‌ನಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಇದೇ ಸಂದರ್ಭದಲ್ಲಿ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾಗೆ ಕೇಳಿದ ಪ್ರಶ್ನೆಗಳು ಕುತೂಹಲಕಾರಿಯಾಗಿದೆ.

ಭಾರತ vs ಆಸ್ಟ್ರೇಲಿಯಾ: 27ನೇ ಶತಕ ಸಿಡಿಸಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ಸ್ಮಿತ್ಭಾರತ vs ಆಸ್ಟ್ರೇಲಿಯಾ: 27ನೇ ಶತಕ ಸಿಡಿಸಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ಸ್ಮಿತ್

ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡುವ ವೇಳೆ ಲಾಬುಶೇನ್ "ನಿನ್ನ ಫೇವರೀಟ್ ಆಟಗಾರ ಆಟಗಾರ ಯಾರು?" ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಶುಭ್ಮನ್ ಗಿಲ್ ಪ್ರತಿಕ್ರಿಯಿಸಿ "ಪಂದ್ಯದ ಬಳಿಕ ತಿಳಿಸುತ್ತೇನೆ" ಎನ್ನುತ್ತಾರೆ. ಮುಂದುವರಿದ ಲಾಬುಶೇನ್ "ಎಸೆತದ ಬಳಿಕ ತಿಳಿಸುತ್ತೀಯಾ? ಯಾರು ಸಚಿನ್‌ ಆ? ವಿರಾಟ್ ಕೊಹ್ಲಿ ಜೊತೆಗೆ ಲೆಕ್ಕಾಚಾರ ಮಾಡುತ್ತಿದ್ದೀಯಾ?" ಎಂದು ಹೇಳಿರುರುವುದು ಸ್ಪಷ್ಟವಾಗಿ ದಾಖಲಾಗಿದೆ.

ಬಳಿಕ ರೋಹಿತ್ ಶರ್ಮಾ ಬ್ಯಾಟಿಂಗ್ ನಡೆಸುವ ವೇಳೆಯೂ ಲಾಬುಶೇನ್ "ಕ್ವಾರಂಟೈನ್ ಸಂದರ್ಭದಲ್ಲಿ ಏನು ಮಾಡಿದ್ದಿರಿ? ಎಂದು ಲಘುವಾದ ದಾಟಿಯಲ್ಲೇ ರೋಹಿತ್ ಶರ್ಮಾ ಮುಂದೆಯೂ ಲಾಬುಶೇನ್ ಪ್ರಶ್ನೆಯನ್ನು ಮುಂದಿಡುತ್ತಾರೆ. ಆದರೆ ರೋಹಿತ್ ಶರ್ಮಾ ಈ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಬ್ಯಾಟಿಂಗ್ ಮುಂದುವರಿಸುತ್ತಾರೆ. ಆದರೆ ಈ ಸಂಭಾಷಣೆ ಟಿವಿಯಲ್ಲಿ ವೀಕ್ಷಿಸುತ್ತಿದ್ದ ಅಭಿಮಾನಿಗಳಲ್ಲಿ ಮಂದಹಾಸ ಮೂಡುವಂತೆ ಮಾಡಿತು

Story first published: Friday, January 8, 2021, 12:13 [IST]
Other articles published on Jan 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X