ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ವಿಭಿನ್ನ ನಡೆಗೆ ಆಸೀಸ್‌ನ ಲೀಸಾ ಸ್ಟಾಲೇಕರ್ ಪ್ರತಿಕ್ರಿಯೆ

India vs Australia: Lisa Sthalekar Appreciates Team Indias gesture

ಸಿಡ್ನಿ: ಪ್ರತೀ ಪಂದ್ಯ ಅಥವಾ ಸರಣಿ ಗೆಲುವಿನ ವೇಳೆಯೂ ಟೀಮ್ ಇಂಡಿಯಾ ತೋರುವ ವಿಭಿನ್ನ ನಡೆಗೆ ಆಸ್ಟ್ರೇಲಿಯಾದ ಮಾಜಿ ನಾಯಕಿ, ಕಾಮೆಂಟೇಟರ್ ಲೀಸಾ ಸ್ಟಾಲೇಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ತಂಡ ಪಂದ್ಯ ಅಥವಾ ಸರಣಿ ಗೆದ್ದ ಬಳಿಕ ಟ್ರೋಫಿಯನ್ನು ತಂಡದ ನಾಯಕ ಹಿಡಿದುಕೊಳ್ಳದೆ ಯುವ ಆಟಗಾರ ಅಥವಾ ಉತ್ತಮ ಪ್ರದರ್ಶನ ನೀಡಿದ ಆಟಗಾರ ಟ್ರೋಫಿ ಹಿಡಿದುಕೊಳ್ಳವ ಟ್ರೆಂಡ್‌ ಅನ್ನು ಲೀಸಾ ಶ್ಲಾಘಿಸಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಅಭಿಮಾನಿಗಳ ಹೃದಯ ಗೆದ್ದ ಸರಣಿ ಶ್ರೇಷ್ಠ ಹಾರ್ದಿಕ್ ಪಾಂಡ್ಯ ನಡೆಭಾರತ vs ಆಸ್ಟ್ರೇಲಿಯಾ: ಅಭಿಮಾನಿಗಳ ಹೃದಯ ಗೆದ್ದ ಸರಣಿ ಶ್ರೇಷ್ಠ ಹಾರ್ದಿಕ್ ಪಾಂಡ್ಯ ನಡೆ

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಮಂಗಳವಾರ (ಡಿಸೆಂಬರ್ 9) ನಡೆದ ಭಾರತ vs ಆಸ್ಟ್ರೇಲಿಯಾ ನಡುವಿನ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ 12 ರನ್‌ನಿಂದ ಗೆದ್ದಿತ್ತು. ಆದರೆ ಸರಣಿ 2-1ರಿಂದ ಭಾರತದ ವಶವಾಗಿತ್ತು.

ಟ್ವಿಟರ್‌ನಲ್ಲಿ ಹೆಚ್ಚು ಟ್ರೆಂಡ್ ಆದ ಸ್ಪೋರ್ಟ್ಸ್‌ ಹ್ಯಾಷ್‌ಟ್ಯಾಗ್‌ಗಳಿವುಟ್ವಿಟರ್‌ನಲ್ಲಿ ಹೆಚ್ಚು ಟ್ರೆಂಡ್ ಆದ ಸ್ಪೋರ್ಟ್ಸ್‌ ಹ್ಯಾಷ್‌ಟ್ಯಾಗ್‌ಗಳಿವು

ಪ್ರಶಸ್ತಿ ವಿತರಣಾ ಸಮಾರಂಭದ ಬಳಿಕ ಫೋಟೋ ತೆಗೆಸಿಕೊಳ್ಳುವಾಗ ಸರಣಿ ಜಯದ ಟ್ರೋಫಿಯನ್ನು ನಾಯಕ ವಿರಾಟ್ ಕೊಹ್ಲಿ ತಾನು ಹಿಡಿದುಕೊಳ್ಳದೆ ಅದನ್ನು ವೇಗಿ ಟಿ ನಟರಾಜನ್ ಕೈಗೆ ನೀಡಿದ್ದರು.

ಟಿ ನಟರಾಜನ್ ಉತ್ತಮ ಪ್ರದರ್ಶನ

ಟಿ ನಟರಾಜನ್ ಉತ್ತಮ ಪ್ರದರ್ಶನ

ಭಾರತ-ಆಸ್ಟ್ರೇಲಿಯಾ ಏಕದಿನ ಮತ್ತು ಟಿ20ಐ ಸರಣಿಯಲ್ಲಿ ಯಾರ್ಕರ್ ಸ್ಪೆಷಾಲಿಸ್ಟ್ ಟಿ ನಟರಾಜನ್ ಉತ್ತಮ ಪ್ರದರ್ಶನ ನೀಡಿದ್ದರು. ಏಕದಿನ ಸರಣಿಯ ಕೊನೇ ಪಂದ್ಯದಲ್ಲಿ 3 ವಿಕೆಟ್, ಟಿ20ಐ ಸರಣಿಯ 3 ಇನ್ನಿಂಗ್ಸ್‌ಗಳಲ್ಲಿ 5 ವಿಕೆಟ್ ಲಭಿಸಿತ್ತು. ಹೀಗಾಗಿ ಕೊಹ್ಲಿ ಸಹಜವಾಗೇ ನಟರಾಜನ್‌ ಪ್ರದರ್ಶನದ ಬಗ್ಗೆ ಖುಷಿಗೊಂಡಿದ್ದರು.

ಭಾರತೀಯ ತಂಡದಲ್ಲಿ ಎಂಥಾ ಪ್ರೀತಿ

ಭಾರತೀಯ ತಂಡದಲ್ಲಿ ಎಂಥಾ ಪ್ರೀತಿ

ಟ್ವೀಟ್ ಮಾಡಿರುವ ಲೀಸಾ, 'ಪುರುಷರ ಮತ್ತು ಮಹಿಳಾ ಭಾರತೀಯ ತಂಡಗಳಲ್ಲಿ ಎಂಥಾ ಪ್ರೀತಿ. ಒಂದು ವೇಳೆ ತಂಡ ಪ್ರಶಸ್ತಿ ಗೆದ್ದರೆ ಫೋಟೋ ವೇಳೆ ಟ್ರೋಫಿಯನ್ನು ನಾಯಕ ಹಿಡಿದುಕೊಳ್ಳುವುದಿಲ್ಲ. ಬದಲಿಗೆ ಯುವ ಆಟಗಾರನಿಗೆ ಅಥವಾ ಉತ್ತಮ ಪ್ರದರ್ಶನ ನೀಡಿದವರಿಗೆ ಟ್ರೋಫಿ ನೀಡಲಾಗುತ್ತದೆ. ಈ ಬಾರಿ ಟ್ರೋಫಿ ಕೈಯಲ್ಲಿ ಹಿಡಿದು ಟಿ ನಟರಾಜನ್ ಮಧ್ಯದಲ್ಲಿ ನಿಂತಿದ್ದಾರೆ,' ಎಂದು ಲೀಸಾ ಬರೆದುಕೊಂಡಿದ್ದಾರೆ.

ಧೋನಿ ಶುರು ಮಾಡಿದ ಟ್ರೆಂಡ್ ಇದು

ಧೋನಿ ಶುರು ಮಾಡಿದ ಟ್ರೆಂಡ್ ಇದು

ಭಾರತೀಯ ತಂಡ ಪಂದ್ಯ ಅಥವಾ ಸರಣಿ ಗೆದ್ದಾಗ ಟ್ರೋಫಿಯನ್ನು ನಾಯಕ ಹಿಡಿದುಕೊಳ್ಳದೆ ಅದನ್ನು ಯುವ ಆಟಗಾರ ಅಥವಾ ಉತ್ತಮ ಪ್ರದರ್ಶನ ನೀಡಿದ ಆಟಗಾರನ ಕೈಯಲ್ಲಿ ಕೊಟ್ಟು ತಂಡದ ಫೋಟೋ ತೆಗೆಸಿಕೊಳ್ಳುವ ಈ ಟ್ರೆಂಡ್ ಶುರು ಮಾಡಿದ್ದು ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ. ಆ ಬಳಿಕ ಇದನ್ನು ಉಳಿದ ನಾಯಕರೂ ಪಾಲಿಸುತ್ತಿದ್ದಾರೆ. ಲೀಸಾ ಶ್ಲಾಘನೆ ವೇಳೆ ನೆಟ್ಟಿಗರು ಧೋನಿಯನ್ನು ಸ್ಮರಿಸಿ ಲೀಸಾಗೆ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

Story first published: Wednesday, December 9, 2020, 9:54 [IST]
Other articles published on Dec 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X