ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟಿ20: ಭಾರತ ವಿರುದ್ಧ ಆಸ್ಟ್ರೇಲಿಯಾಕ್ಕೆ 3 ವಿಕೆಟ್ ರೋಚಕ ಗೆಲುವು!

India vs Australia, Live Cricket Score, 1st T20I

ವಿಶಾಖಪಟ್ನಂ, ಫೆಬ್ರವರಿ 24: ವಿಶಾಖಪಟ್ನಂನಲ್ಲಿರುವ ಡಾ. ವೈಎಸ್ ರಾಜಶೇಖರ್‌ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಫೆಬ್ರವರಿ 24) ನಡೆದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ಧ ಪ್ರವಾಸಿ ಆಸ್ಟ್ರೇಲಿಯಾ 3 ವಿಕೆಟ್ ರೋಚಕ ಗೆಲುವನ್ನಾಚರಿಸಿದೆ. ಮ್ಯಾಕ್ಸ್‌ ವೆಲ್ ಸಿಡಿಸಿದ ಅರ್ಧಶತಕ ನೆರವಿನೊಂದಿಗೆ ಆಸೀಸ್ ಪಂದ್ಯ ಗೆದ್ದು ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ.

ಹುತಾತ್ಮ ಯೋಧರ ಕುಟುಂಬಗಳ ನೆರವಿಗಾಗಿ ದೇಹ ದಂಡಿಸಿಕೊಂಡ ಸಚಿನ್ಹುತಾತ್ಮ ಯೋಧರ ಕುಟುಂಬಗಳ ನೆರವಿಗಾಗಿ ದೇಹ ದಂಡಿಸಿಕೊಂಡ ಸಚಿನ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ರೋಹಿತ್ ಶರ್ಮಾ 5 ರನ್‌ಗೆ ಔಟ್ ಆದಾಗ ಆಘಾತವನ್ನು ಅನುಭವಿಸಿತು. ವಿರಾಟ್ ಕೊಹ್ಲಿ 24, ರಿಷಬ್ ಪಂತ್ 3, ದಿನೇಶ್ ಕಾರ್ತಿಕ್ 1 ರನ್‌ಗೆ ವಿಕೆಟ್ ಒಪ್ಪಿಸಿದಾಗ ಇನ್ನಷ್ಟು ಒತ್ತಡಕ್ಕೆ ಸಿಲುಕಿತು. ಆದರೆ ಕೆಎಲ್ ರಾಹುಲ್ ಅವರ ಅರ್ಧಶತಕದ ಬೆಂಬಲ ತಂಡಕ್ಕೆ ಲಭಿಸಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್‌ಕ್ಲಿಕ್ ಮಾಡಿ

1
45583

ಭರ್ತಿ 50 ರನ್ ಬಾರಿಸಿದ ರಾಹುಲ್ ಕೂಡ ನಾಥನ್ ಕೌಲ್ಟರ್-ನೈಲ್ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಆದರೆ ಎಂಎಸ್ ಧೋನಿ 29 ರನ್ ಸೇರಿಸಿ ಸಣ್ಣಮಟ್ಟಿನಲ್ಲಿ ತಂಡವನ್ನು ರನ್ ಕುಸಿತದಿಂದ ಪಾರು ಮಾಡಿದರು. ಭಾರತ 20 ಓವರ್‌ಗೆ 7 ವಿಕೆಟ್ ಕಳೆದು 126 ರನ್ ಮಾಡಿತು. ಆಸೀಸ್ ಪರ ನಾಥನ್ ಕೌಲ್ಟರ್-ನೈಲ್ 3 ವಿಕೆಟ್ ಪಡೆದು ಮಿಂಚಿದರು.

ಮನೀಶ್ ಸ್ಫೋಟಕ ಶತಕ, ಅರುಣಾಚಲ ಪ್ರದೇಶ ಮಣಿಸಿದ ಕರ್ನಾಟಕಮನೀಶ್ ಸ್ಫೋಟಕ ಶತಕ, ಅರುಣಾಚಲ ಪ್ರದೇಶ ಮಣಿಸಿದ ಕರ್ನಾಟಕ

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ (0), ಮಾರ್ಕಸ್ ಸ್ಟೋಯ್ನಿಸ್ (1) ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತಾದರೂ ಗ್ಲೆನ್ ಮ್ಯಾಕ್ಸ್‌ವೆಲ್ 56 ರನ್ ಸೇರಿಸಿ ತಂಡಕ್ಕೆ ಬಲ ತುಂಬಿದರು. ಡಿ ಆರ್ಚಿ ಶಾರ್ಟ್ 37 ರನ್ ಕೊಡುಗೆ ಕೂಡ ಆಸೀಸ್ ಗೆಲುವಿಗೆ ಕಾರಣವಾಯ್ತು.

ಆಡದೆ ಕೂತು ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಗೆಲ್ಲಿಸುತ್ತೀರಾ?: ಸಚಿನ್ ಪ್ರಶ್ನೆ!ಆಡದೆ ಕೂತು ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಗೆಲ್ಲಿಸುತ್ತೀರಾ?: ಸಚಿನ್ ಪ್ರಶ್ನೆ!

ಭಾರತ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಜಸ್‌ಪ್ರೀತ್ ಬೂಮ್ರಾ 3 ವಿಕೆಟ್ ಉರುಳಿಸಿ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಲು ಯತ್ನಿಸಿದರಾದರೂ ಅಂತಿಮ ಕ್ಷಣದಲ್ಲಿ ಆಸ್ಟ್ರೇಲಿಯಾ 20 ಓವರ್‌ಗೆ 127 ರನ್ ಸೇರಿಸಿ ಗೆಲುವಿನ ನಗು ಬೀರಿತು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾದ ನಾಥನ್ ಕೌಲ್ಟರ್-ನೈಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಪಂದ್ಯ ಆರಂಭಕ್ಕೂ ಮುನ್ನ ಎರಡೂ ತಂಡದ ಆಟಗಾರರು ಪುಲ್ವಾಮಾ ಉಗ್ರರ ದಾಳಿಯಲ್ಲಿ ಮಡಿದ ಭಾರತೀಯ ಸೈನಿಕರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಿದರು. ಭಾರತೀಯ ಆಟಗಾರರು ಕೈಗೆ ಕಪ್ಪುಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದರು. ಮಯಾಂಕ್ ಮಾರ್ಕಂಡೆ ಈ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಟಿ20ಗೆ ಪಾದಾರ್ಪಣೆ ಮಾಡಿದ್ದಾರೆ.

ಆಮ್ಲಾ ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ ಲಂಕಾ ವೇಗಿ ವಿಶ್ವ ಫರ್ನಾಂಡೋ!ಆಮ್ಲಾ ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ ಲಂಕಾ ವೇಗಿ ವಿಶ್ವ ಫರ್ನಾಂಡೋ!

ಭಾರತ ತಂಡ: ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ (ಸಿ), ರಿಷಬ್ ಪಂತ್, ಎಂಎಸ್ ಧೋನಿ (ವಿ.ಕೆ), ದಿನೇಶ್ ಕಾರ್ತಿಕ್, ಕೃನಾಲ್ ಪಾಂಡ್ಯ, ಉಮೇಶ್ ಯಾದವ್, ಮಯಾಂಕ್ ಮಾರ್ಕಾಂಡೆ, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ.

ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಡಿ ಅರ್ಚಿ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಪೀಟರ್ ಹ್ಯಾಂಡ್ಸ್ಕಾಂಬ್ (ವಿ.ಕೆ.), ಆಷ್ಟನ್ ಟರ್ನರ್, ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ಜೀಯೆ ರಿಚರ್ಡ್ಸನ್, ಜಾಸನ್ ಬೆಹೆರೆನ್ಡಾಫ್, ಆಡಮ್ ಝಂಪಾ.

Story first published: Sunday, February 24, 2019, 23:25 [IST]
Other articles published on Feb 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X