ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನ ಅಲಭ್ಯತೆ ಟೀಮ್ ಇಂಡಿಯಾಗೆ ತುಂಬಾ ಕೆಟ್ಟದಾಗಿ ಕಾಡಲಿದೆ: ಸಂಜಯ್ ಮಂಜ್ರೇಕರ್

India vs Australia: Manjrekar feels India will miss pacer very badly

ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಟೀಮ್ ಇಂಡಿಯಾ ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಓರ್ವ ಆಟಗಾರನನ್ನು ತುಂಬಾ ಮಿಸ್ ಮಾಡಿಕೊಳ್ಳಲಿದೆ. ಆತನ ಅಲಭ್ಯತೆ ಭಾರತ ತಂಡವನ್ನು ಕೆಟ್ಟದಾಗಿ ಕಾಡಲಿದೆ ಎಂದು ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡಿದ್ದು ಬಳಿಕ ನಡೆದ ಟಿ20 ಸರಣಿಯಲ್ಲಿ ತಿರುಗಿ ಬಿದ್ದು ಭರ್ಜರಿ ಗೆಲುವು ಸಾಧಿಸಿದೆ. ಈಗ ಟೆಸ್ಟ್ ಸರಣಿಯ ಮೇಲೆ ದೊಡ್ಡ ನಿರೀಕ್ಷೆಯಿದೆ. ಕಳೆದ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಸರಣಿ ಗೆದ್ದ ಸಾಧನೆ ಮಾಡಿತ್ತು. ಈ ಬಾರಿಯೂ ಅದೇ ಸಾಧನೆ ಪುನರಾವರ್ತಿಸುವ ಉತ್ಸಾಹದಲ್ಲಿ ಭಾರತ ಇದೆ.

ಆಸೀಸ್‌ಗೆ ಮತ್ತೊಂದು ಗಾಯದ ಭೀತಿ, ಮೈದಾನ ತೊರೆದ ಆಲ್ ರೌಂಡರ್ಆಸೀಸ್‌ಗೆ ಮತ್ತೊಂದು ಗಾಯದ ಭೀತಿ, ಮೈದಾನ ತೊರೆದ ಆಲ್ ರೌಂಡರ್

ಆದರೆ ಭಾರತದ ಈ ಕನಸಿಗೆ ಓರ್ವ ಆಟಗಾರನ ಅಲಭ್ಯತೆ ಬಹುವಾಗಿ ಕಾಡಲಿದೆ ಎಂಬುದು ಸಂಜಯ್ ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಾರು ಆ ಆಟಗಾರ?

ಯಾರು ಆ ಆಟಗಾರ?

ಸಂಜಯ್ ಮಂಜ್ರೇಕರ್ ಈ ರೀತಿಯ ಅಭಿಪ್ರಾಯ ಪಟ್ಟಿದ್ದು ಓರ್ವ ವೇಗಿಯ ಬಗ್ಗೆ.ಈ ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ತನ್ನ ಅನುಭವದ ಮೂಲಕ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ತಂಡಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದರು. ಈ ಮೂಲಕ ಭಾರತ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವಿಗೆ ಕಾರಣರಾಗಿದ್ದರು. ಆದರೆ ಆ ಆಟಗಾರ ಈ ಬಾರಿ ಆಸ್ಟ್ರೇಲಿಯಾ ಪ್ರವಾಸವನ್ನು ತಪ್ಪಿಸಿಕೊಂಡಿದ್ದಾರೆ.

ಇಶಾಂತ್ ಶರ್ಮಾ ಬಗ್ಗೆ ಹೇಳಿದ ಮಂಜ್ರೇಕರ್

ಇಶಾಂತ್ ಶರ್ಮಾ ಬಗ್ಗೆ ಹೇಳಿದ ಮಂಜ್ರೇಕರ್

ಸಂಜಯ್ ಮಂಕ್ರೇಕರ್ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಬಗ್ಗೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಐಪಿಎಲ್ ಸಂದರ್ಭದಲ್ಲಿ ಗಾಯಗೊಂಡ ಇಶಾಂತ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಫಿಟ್‌ನೆಸ್ ಕೊರತೆಯ ಕಾರಣ ಅಲಭ್ಯರಾಗಿದ್ದಾರೆ.

ಸತತವಾಗಿ ಒತ್ತಡ ಹೇರಬಲ್ಲ ಬೌಲರ್

ಸತತವಾಗಿ ಒತ್ತಡ ಹೇರಬಲ್ಲ ಬೌಲರ್

ಟೀಮ್ ಇಂಡಿಯಾದ ಬೌಲರ್‌ಗಳ ಪೈಕಿ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ಜೊತೆಗೆ ಇಶಾಂತ್ ಎದುರಾಳಿ ಬ್ಯಾಟ್ಸ್‌ಮನ್‌ ಮೇಲೆ ಸತತವಾಗಿ ಒತ್ತಡ ಹೇರಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ವಿರಾಮ ದೊರೆಯದಂತೆ ಮಾಡಬಲ್ಲವರಾಗಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಇಶಾಂತ್ ಕಂಡರಾದರೂ ಕಳೆದ ಮೂರ್ನಾಲ್ಕು ವರ್ಷಗಳಿಂದ ಅದ್ಭುತವಾದ ದಾಳಿಯನ್ನು ಇಶಾಂತ್ ಸಂಘಟಿಸುತ್ತಿದ್ದಾರೆ ಎಂದು ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಶಾಂತ್ ಶರ್ಮಾ ಟೆಸ್ಟ್ ಸಾಧನೆ

ಇಶಾಂತ್ ಶರ್ಮಾ ಟೆಸ್ಟ್ ಸಾಧನೆ

ಇಶಾಂತ್ ಶರ್ಮಾ ಭಾರತದ ಪರವಾಗಿ 97 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 297 ವಿಕೆಟ್ ಪಡೆದುಕೊಂಡಿದ್ದಾರೆ. 2017ರ ಬಳಿಕ ಇಶಾಂತ್ ಅದ್ಭುತ ಲಯವನ್ನು ಕಂಡುಕೊಂಡಿದ್ದು 24 ಟೆಸ್ಟ್ ಪಂದ್ಯಗಳಿಂದ ಅವರು 85 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 22.20 ಸರಾಸರಿಯಲ್ಲಿ ಈ ಸಾಧನೆ ಮಾಡಿದ್ದಾರೆ ಶರ್ಮಾ.

Story first published: Sunday, December 13, 2020, 15:36 [IST]
Other articles published on Dec 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X