ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಆಲ್ ರೌಂಡರ್ ಮಾರ್ಕಸ್‌ ಸ್ಟೋಯ್ನಿಸ್‌ಗೆ ಗಾಯ

India vs Australia: Marcus Stoinis suffers side injury

ಸಿಡ್ನಿ: ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್‌ ಗಾಯಕ್ಕೀಡಾಗಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಕ್ರವಾರ ನಡೆದ ಭಾರತ ವಿರುದ್ಧದ ಮೊದಲನೇ ಏಕದಿನ ಪಂದ್ಯದ ವೇಳೆ ಸ್ಟೋಯ್ನಿಸ್ ಸೈಡ್ ಸ್ಟ್ರೇನ್‌ಗೆ (ಹೊಟ್ಟೆ, ಸೊಂಟದ ಬದಿಯಲ್ಲಿ ನೋವು) ಒಳಗಾಗಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಸೋತರೂ ವಿಶೇಷ ದಾಖಲೆ ಬರೆದ ಭಾರತಭಾರತ vs ಆಸ್ಟ್ರೇಲಿಯಾ: ಸೋತರೂ ವಿಶೇಷ ದಾಖಲೆ ಬರೆದ ಭಾರತ

ಮೂರು ಏಕದಿನ ಪಂದ್ಯಗಳ ಸರಣಿಯ ಆರಂಭಿಕ ಪಂದ್ಯದ ವೇಳೆ ಭಾರತ ಚೇಸಿಂಗ್‌ಗೆ ಇಳಿದಿದ್ದಾಗ ತನ್ನ 7ನೇ ಓವರ್‌ 2ನೇ ಎಸೆತ ಎಸೆಯುತ್ತಿದ್ದಾಗ ಮಾರ್ಕಸ್ ಸ್ಟೋಯ್ನಿಸ್‌ಗೆ ನೋವು ಕಾಡಿತ್ತು. ಆ ಬಳಿಕ ಸ್ಟೋಯ್ನಿಸ್ ಮೈದಾನದಿಂದ ಹೊರ ನಡೆದರು. ಸ್ಟೋಯ್ನಿಸ್ ಓವರ್‌ ಅನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಪೂರ್ಣಗೊಳಿಸಿದ್ದರು.

ಕ್ರಿಕೆಟ್ ಡಾಟ್ ಕಾಮ್ ಕಾಟ್ ಎಯು ಪ್ರಕಾರ, 31ರ ಹರೆಯದ ಸ್ಟೋಯ್ನಿಸ್ ದೇಹದ ಎಡಭಾಗದಲ್ಲಿ ಗಾಯಕ್ಕೀಡಾಗಿದ್ದಾರೆ. ಗಾಯದ ಸ್ಥಿತಿ ಪರೀಕ್ಷೆಗೆ ಸ್ಕ್ಯಾನ್ ಮಾಡಿಕೊಳ್ಳಲಿದ್ದಾರೆ. ಹೀಗಾಗಿ ನವೆಂಬರ್ 29ರಂದು ನಡೆಯುವ ಎರಡನೇ ಏಕದಿನ ಪಂದ್ಯದ ವೇಳೆ ಸ್ಟೋಯ್ನಿಸ್ ಮೈದಾನಕ್ಕಿಳಿಯೋದು ಅನುಮಾನ.

ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕಕ್ಕೆ ಸಾಕಷ್ಟು ಸ್ಪಷ್ಟತೆಯನ್ನು ನೀಡಿದ್ದಾರೆ: ಸಂಜಯ್ ಮಂಜ್ರೆಕರ್ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕಕ್ಕೆ ಸಾಕಷ್ಟು ಸ್ಪಷ್ಟತೆಯನ್ನು ನೀಡಿದ್ದಾರೆ: ಸಂಜಯ್ ಮಂಜ್ರೆಕರ್

ಇತ್ತಂಡಗಳ ಮೊದಲನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 66 ರನ್‌ನಿಂದ ಗೆದ್ದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ, 50 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 374 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ವಿರಾಟ್ ಕೊಹ್ಲಿ ಪಡೆ, 50 ಓವರ್‌ಗೆ 8 ವಿಕೆಟ್‌ ಕಳೆದು 308 ರನ್ ಗಳಿಸಿತು.

Story first published: Saturday, November 28, 2020, 9:39 [IST]
Other articles published on Nov 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X