ರೋಹಿತ್‌ ಸ್ಥಾನವನ್ನು ತುಂಬಬಲ್ಲ ಆಟಗಾರನನ್ನು ಹೆಸರಿಸಿದ ಆರೋನ್ ಫಿಂಚ್

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಟೀಮ್ ಇಂಡಿಯಾದ ಖಾಯಂ ಉಪನಾಯಕ ರೋಹಿತ್ ಶರ್ಮಾ ಸ್ಥಾನವನ್ನು ಪಡೆದುಕೊಂಡಿಲ್ಲ. ಹೀಗಾಗಿ ಆ ಸ್ಥಾನವನ್ನು ಯಾರು ಭರ್ತಿ ಮಾಡಬಲ್ಲರು ಎಂಬುದು ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ ಉತ್ತರವನ್ನು ನೀಡಿದ್ದಾರೆ.

ಯುವ ಆಟಗಾರ ಮಯಾಂಕ್ ಅಗರ್ವಾಲ್ ಅದ್ಭುತವಾದ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಮಯಾಂಕ್ ರೋಹಿತ್ ಶರ್ಮಾ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲರು ಎಂದು ಆರೋನ್ ಫಿಂಚ್ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಗಾಯಗೊಂಡ ಕಾರಣ ಆಸಿಸ್ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ಇಂಡೋ-ಆಸಿಸ್ 1st ODI: ಸಂಭಾವ್ಯ ತಂಡ, ನೇರಪ್ರಸಾರ, ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್

ಮೂರು ಮಾದರಿಗೂ ಮಯಾಂಕ್ ಆಯ್ಕೆ

ಮೂರು ಮಾದರಿಗೂ ಮಯಾಂಕ್ ಆಯ್ಕೆ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನದ ಕಾರಣದಿಂದ ಮೊದಲಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಾನವನ್ನು ಪಡೆದು ಮಿಂಚಿದ್ದ ಮಯಾಂಕ್ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಹೀಗಾಗಿ ಮೊದಲ ಬಾರಿಗೆ ಮೂರು ಮಾದರಿಯ ಸರಣಿಗೂ ಮಯಾಂಕ್ ಆಯ್ಕೆಯಾಗಿದ್ದು ನಿರೀಕ್ಷೆ ಹೆಚ್ಚಾಗಿದೆ.

ರೋಹಿತ್ ಆಡದಿರುವುದು ದುರದೃಷ್ಟಕರ

ರೋಹಿತ್ ಆಡದಿರುವುದು ದುರದೃಷ್ಟಕರ

ರೋಹಿತ್ ಶರ್ಮಾ ಓರ್ವ ಶ್ರೇಷ್ಠವಾದ ಆಟಗಾರ. ಈ ಹಿಂದೆ ನಮ್ಮ ವಿರುದ್ಧ ಆತ ಉತ್ತಮ ಯಶಸ್ಸನ್ನು ಸಾಧಿಸಿದ್ದರು. ಆತ ಸೀಮಿತ ವರ್‌ಗಳ ಸರಣಿಯಲ್ಲಿ ಪಾಲ್ಗೊಳ್ಳಿದಿರುವುದು ದುರದೃಷ್ಟಕರ ಎಂದು ಅರೋನ್ ಫಿಂಚ್ ರೋಹಿತ್ ಶರ್ಮಾ ಅಲಭ್ಯತೆಯ ಬಗ್ಗೆ ಪ್ರತಿಕ್ರಿಯಿಸಿದರು.

ರೋಹಿತ್ ಅನುಭವವನ್ನು ಕಳೆದುಕೊಳ್ಳಲಿದೆ

ರೋಹಿತ್ ಅನುಭವವನ್ನು ಕಳೆದುಕೊಳ್ಳಲಿದೆ

"ನಾವು ಯಾವಾಗಲೂ ಶ್ರೇಷ್ಠ ಆಟಗಾರರ ವಿರುದ್ಧ ಆಡಲು ಬಯಸುತ್ತೇವೆ. ಆದರೆ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಗಾಯಗೊಂಡಿರುವುದು ಉತ್ತಮವಾದ ಸಂಗತಿಯಲ್ಲ. ಆದರೆ ಮಯಾಂಕ್ ಅಗರ್ವಾಲ್ ಆತನ ಸ್ಥಾನವನ್ನು ಚೆನ್ನಾಗಿ ತುಂಬಬಲ್ಲರು. ಆತ ಅದ್ಭುತವಾದ ಫಾರ್ಮ್‌ನಲ್ಲಿದ್ದಾರೆ. ಭಾರತ ರೋಹಿತ್ ಶರ್ಮಾ ಅವರ ಅನುಭವವನ್ನು ಕಳೆದುಕೊಳ್ಳಲಿದೆ. ಆದರೆ ಅವರು ಗುಣಮಟ್ಟದ ಆಟಗಾರರನ್ನು ಹೊಂದಿದ್ದಾರೆ" ಎಂದು ಫಿಂಚ್‌ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, November 26, 2020, 13:54 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X