ಭಾರತ vs ಆಸ್ಟ್ರೇಲಿಯಾ: ಬಾಕ್ಸಿಂಗ್ ಡೇ ಪಂದ್ಯ ಎಂಸಿಜಿಯಲ್ಲೇ ನಡೆಯಲಿದೆ: ಸಿಎ

ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಬಾಕ್ಸಿಂಗ್ ಡೇ ಪಂದ್ಯವನ್ನು ಪ್ರೇಕ್ಷಕರ ಸಮ್ಮುಖದಲ್ಲಿ ನಡೆಸಲು ಸಾಧ್ಯವಾದರೆ ಐಕಾನಿಕ್ ಕ್ರೀಡಾಂಗಣ ಎಂಸಿಜಿಯಲ್ಲೇ ನಡೆಸಲಾಗುತ್ತದೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ನಿಲುವು ಸ್ಪಷ್ಟವಾಗಿ ಹೊಂದಿದೆ ಎಂದು ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲೇ ಹೇಳಿದ್ದಾರೆ.

ಈಗಾಗಲೇ ಎಂಸಿಜಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಈ ಪಂದ್ಯದ ಸ್ಥಳ ಬದಲಾವಣೆಯಾಗಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿದೆ. ವಿಕ್ಟೋರಿಯಾ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಂಸಿಜಿ ಆತಿಥ್ಯ ಕೈತಪ್ಪುವ ಸಾಧ್ಯತೆಗಳ ಬಗ್ಗೆ ಸುದ್ಧಿಗಳು ಬರುತ್ತಿದೆ. ಇದಕ್ಕೆ ಸ್ವತಃ ನಿಕ್ ಹಾಕ್ಲೆ ಈ ಹೇಳಿಕೆಯನ್ನು ನೀಡಿದ್ದಾರೆ.

ಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳು

ಬಾಕ್ಸಿಂಗ್ ಡೇ ಪಂದ್ಯಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಸಾಕಷ್ಟು ಮಹತ್ವವಿದೆ. ಹೀಗಾಗಿ ಈ ಟೆಸ್ಟ್ ಪಂದ್ಯ ಅಡಿಲೇಡ್ ಅಥವಾ ಸಿಡ್ನಿ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ವೀಕ್ಷಕರ ಸಮ್ಮುಖದಲ್ಲೇ ಎಂಸಿಜಿಯಲ್ಲಿ ಪಂದ್ಯ ನಡೆಸುವ ಸಾಧ್ಯೆತೆಯಿದ್ದರೆ ಅಲ್ಲೇ ನಡೆಸುತ್ತೇವೆ ಎಂದು ಹಾಕ್ಲೇ ಹೇಳಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಯೋಜನೆಗಳೊಂದಿಗೆ ಸಂಪೂರ್ಣವಾಗಿ ಸಿದ್ಧವಾಗಿದೆ. ಆ ಸಂದರ್ಭದಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ನಿಕ್ ಹಾಕ್ಲೇ ಕ್ರಿಕೆಟ್.ಕಾಮ್.ಎಯು ಹೇಳಿಕೆಯನ್ನು ನೀಡಿದ್ದಾರೆ.

ಇದು ಆಸ್ಟ್ರೇಲಿಯಾ ಕ್ರೀಡಾ ಕ್ಯಾಲೆಂಡರ್‌ನ ಮಹತ್ವದ ಕಾರ್ಯಕ್ರಮದಲ್ಲಿ ಒಂದಾಗಿದೆ. ಈ ಹಂತದಲ್ಲಿ ಈ ಬಗ್ಗೆ ನಾವು ಸಂಪೂರ್ಣವಾಗಿ ಯೋಜನೆಯನ್ನು ರೂಪಿಸುತ್ತೇವೆ. ಬಿಸಿಸಿಐ ಹಾಗೂ ಸರ್ಕಾರದೊಂದಿಗೆ ರಚನಾತ್ಮಕ ಚರ್ಚೆಯಲ್ಲಿದ್ದೇವೆ. ಭಾರತದ ಪ್ರವಾಸಕ್ಕೆ ಸರ್ಕಾರದಿಂದ ವಿನಾಯಿತಿಯನ್ನು ಪಡೆದುಕೊಳ್ಳುವ ಭರವಸೆಯಲ್ಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ ನಿಕ್ ಹ್ಯಾಕ್ಲೇ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, August 8, 2020, 17:11 [IST]
Other articles published on Aug 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X