ಕ್ಯಾನ್ಬೆರಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲನೇ ಟಿ20ಐ ಪಂದ್ಯದ ವೇಳೆ ವಿವಾದವೊಂದು ಕಾಣಸಿಕ್ಕಿತ್ತು. ಗಾಯಗೊಂಡಿದ್ದ ರವೀಂದ್ರ ಜಡೇಜಾ ಬದಲಿಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮದ ಪ್ರಕಾರ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರನ್ನು ಮೈದಾನಕ್ಕಿಳಿಸಲಾಗಿತ್ತು.
ಜಡೇಜಾ ಬದಲಿಗೆ ಚಾಹಲ್-ವಿವಾದ, ಕನ್ಕಶನ್ ಸಬ್ ನಿಯಮವೇನು?!
ಜಡೇಜಾ ಬದಲು ಮೈದಾನಕ್ಕಿಳಿದ ಚಾಹಲ್ 4 ಓವರ್ಗಳನ್ನು ಎಸೆದು 25 ರನ್ ನೀಡಿ ಆಸ್ಟ್ರೇಲಿಯಾದ ಪ್ರಮುಖ ವಿಕೆಟ್ಗಳನ್ನು ಪಡೆದಿದ್ದರು. ಪರಿಣಾಮ, ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 11 ರನ್ನಿಂದ ಸೋತಿತು. ಈ ವಿವಾದಕ್ಕೆ ಸಂಬಂಧಿಸಿ ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಮೈಕಲ್ ವಾನ್ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಪ್ರತಿಕ್ರಿಯಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿರುವ ಮೂಡಿ, 'ಜಡೇಜಾ ಬದಲು ಚಾಹಲ್ ಬಂದಿದ್ದಕ್ಕೆ ನನಗೆ ತಕರಾರಿಲ್ಲ. ಆದರೆ ಜಡೇಜಾಗೆ ಚೆಂಡು ಬಡಿದಾಗ ಅಲ್ಲಿ ಯಾವುದೇ ಡಾಕ್ಟರ್ ಮತ್ತು ಫಿಸಿಯೋ ಇರಲಿಲ್ಲ. ಇದಕ್ಕೆ ನನ್ನ ತಕರಾರಿದೆ. ಇದೊಂದು ಮುನ್ನೆಚ್ಚರಿಕೆ ಕ್ರಮವೇ?,' ಎಂದು ಬರೆದುಕೊಂಡಿದ್ದಾರೆ.
ಜಡೇಜಾ ಬದಲು ಚಾಹಲ್ ಮೈದಾನಕ್ಕಿಳಿಸಿದ್ದಕ್ಕೆ ಲ್ಯಾಂಗರ್ ಗರಂ: ವಿಡಿಯೋ
ಮೈಕಲ್ ವಾನ್ ಮಾಡಿರುವ ಟ್ವೀಟ್ನಲ್ಲಿ, 'ಕನ್ಕಶನ್ ಚರ್ಚೆ ಜೋರಾಗಿದೆ ಹೌದು. ಆದರೆ ಪ್ರಮಾಣಿಕವಾಗಿ ಹೇಳೋದಾದ್ರೆ ಇವತ್ತು ಆಸ್ಟ್ರೇಲಿಯಾಕ್ಕಿಂತ ಭಾರತ ಕೊಂಚ ಉತ್ತಮ ಆಟ ನೀಡಿತು. ಭಾರತ ಉತ್ತಮ ಸ್ಥಿತಿಯಲ್ಲಿತ್ತು,' ಎಂದು ಬರೆದುಕೊಂಡಿದ್ದಾರೆ.
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ