ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: 32 ವರ್ಷಗಳ ಹಿಂದಿನ ದಾಖಲೆ ಮುರಿದ ಧೋನಿ!

32 ವರ್ಷಗಳ ಹಿಂದಿನ ದಾಖಲೆ ಮುರಿದ ಧೋನಿ! | Oneindia Kannada
India vs Australia: MS Dhoni creates history, breaks 32-year-old record

ಮೆಲ್ಬರ್ನ್, ಜನವರಿ 19: ಎಂಎಸ್ ಧೋನಿ ಅವರ ಅಮೋಘ ಅರ್ಧ ಶತಕದ ಬೆಂಬಲದಿಂದ ಶುಕ್ರವಾರ (ಜನವರಿ 18) ನಡೆದ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಜಯಿಸುವುದರೊಂದಿಗೆ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದುಕೊಂಡಿತ್ತು. ಪಂದ್ಯದಲ್ಲಿ ಬ್ಯಾಟ್‌ ಬೀಸಿದ್ದ ಧೋನಿ ಹೊಸ ದಾಖಲೆಯನ್ನೂ ಬರೆದಿದ್ದರು.

ಆಸೀಸ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ, ಏಕದಿನ ಸರಣಿಯೂ ವಶಕ್ಕೆಆಸೀಸ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ, ಏಕದಿನ ಸರಣಿಯೂ ವಶಕ್ಕೆ

ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌ ನಲ್ಲಿ ನಡೆದ ಪಂದ್ಯದಲ್ಲಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ 114 ಎಸೆತಗಳಿಗೆ 87 ರನ್ ಗಳಿಸಿದ್ದರು. ಇದಕ್ಕೂ ಹಿಂದಿನ ಪಂದ್ಯದಲ್ಲೂ ಧೋನಿ ಅರ್ಧಶತಕ (55 ರನ್) ಗಳಿಸಿದ್ದರು. ವಿಕೆಟ್ ಕೀಪರ್‌ ಆಗಿಯೂ ತಂಡದ ಬಲವಾಗಿ ನಿಲ್ಲುವ ಧೋನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

ಹದಿಹರೆಯದ ಮುಂಬೈ ಕ್ರಿಕೆಟರ್ ಮುಷೀರ್ ಖಾನ್‌ಗೆ 3 ವರ್ಷಗಳ ನಿಷೇಧ!ಹದಿಹರೆಯದ ಮುಂಬೈ ಕ್ರಿಕೆಟರ್ ಮುಷೀರ್ ಖಾನ್‌ಗೆ 3 ವರ್ಷಗಳ ನಿಷೇಧ!

ಒಬ್ಬ ಅನುಭವಿ ಆಟಗಾರರಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿರುವ ಧೋನಿ ಅಪೂರ್ವ ಧಾಖಲೆಗೂ ಕಾರಣರಾಗಿದ್ದಾರೆ. 37 ವರ್ಷ 195 ದಿನ ಹರೆಯದ ಧೋನಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆಲ್ಲುವ ಮೂಲಕ 32 ವರ್ಷಗಳ ಹಿಂದಿನ ದಾಖಲೆಯನ್ನು ಸರಿಗಟ್ಟಿದ್ದಾರೆ. ಹಿಂದಿನ ದಾಖಲೆ ಭಾರತದವರೇ ಆದ ಸುನಿಲ್ ಗವಾಸ್ಕರ್ ಹೆಸರಿಲ್ಲಿತ್ತು.

ಗವಾಸ್ಕರ್ ದಾಖಲೆ ಬದಿಗೆ

ಗವಾಸ್ಕರ್ ದಾಖಲೆ ಬದಿಗೆ

37 ವರ್ಷ 191 ದಿನ ಹರೆಯದವರಾಗಿದ್ದ ಗವಾಸ್ಕರ್ 1987ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು. ಆದರೆ ಭಾರತ ಪರ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದ ಅತೀ ಹಿರಿಯ ಆಟಗಾರ ಎಂಬ ಅಪರೂಪದ ದಾಖಲೆಯೀಗ ಧೋನಿ ಹೆಸರಿನಲ್ಲಿದೆ.

7ನೇ ಸರಣಿ ಶ್ರೇಷ್ಠ ಪ್ರಶಸ್ತಿ

7ನೇ ಸರಣಿ ಶ್ರೇಷ್ಠ ಪ್ರಶಸ್ತಿ

ಇದು ಧೋನಿಗೆ ಲಭಿಸುತ್ತಿರುವ 7ನೇ ಸರಣಿಶ್ರೇಷ್ಠ ಪ್ರಶಸ್ತಿಯೂ ಹೌದು. ಈ ಸಾಧನೆಗಾಗಿ ಧೋನಿ ಅವರು ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಹಾಶಿಮ್ ಆಮ್ಲಾ (ದಕ್ಷಿಣ ಆಫ್ರಿಕಾ), ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್) ಮತ್ತು ಎಬಿಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ) ಜೊತೆ ಸಮಾನ ಸ್ಥಾನ ಹಂಚಿಕೊಂಡಿದ್ದಾರೆ.

8 ವರ್ಷಗಳ ಬಳಿಕ ಸರಣಿ ಶ್ರೇಷ್ಠ

8 ವರ್ಷಗಳ ಬಳಿಕ ಸರಣಿ ಶ್ರೇಷ್ಠ

ಧೋನಿ ಸರಣಿ ಶ್ರೇಷ್ಠನಾಗಿ ಗುರುತಿಸಿಕೊಂಡಿದ್ದು ಸುಮಾರು 8 ವರ್ಷಗಳ ಬಳಿಕ. ಕೊಂಚ ಕಾಲ ಫಾರ್ಮ್ ಕಳೆದುಕೊಂಡು ಕ್ರಿಕೆಟ್ ಅಭಿಮಾನಿಗಳಿಂದ ಟೀಕಿಸಲ್ಪಟ್ಟಿದ್ದ ಧೋನಿ ಮತ್ತೀಗ ಲಯಕ್ಕೆ ಮರಳುವ ಸೂಚನೆ ನೀಡುತ್ತಿದ್ದಾರೆ. ಅದ್ಹಾಂಗೆ ಧೋನಿಗೆ ಕಡೆಯಸಾರಿ ಮ್ಯಾನ್ ಆಫ್‌ ದ ಸೀರೀಸ್ ಲಭಿಸಿದ್ದು 2011ರಲ್ಲಿ!

ಮ್ಯಾಚ್ ಫಿನಿಷರ್

ಮ್ಯಾಚ್ ಫಿನಿಷರ್

ಎಂಸಿಜಿಯಲ್ಲಿ ನಡೆದ ಭಾರತ-ಆಸೀಸ್ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ 231 ರನ್ ಗುರಿ ನೀಡಿತ್ತು. ಭಾರತ 49.2 ಓವರ್‌ನಲ್ಲಿ 3 ವಿಕೆಟ್ ಕಳೆದು 234 ರನ್ ಪೇರಿಸಿ ಗೆಲುವನ್ನಾಚರಿಸಿತು. ಪಂದ್ಯದ ಕೊನೆಯವರೆಗೂ ಕ್ರೀಸ್‌ಗೆ ಅಂಟಿ ನಿಂತಿದ್ದ ಧೋನಿ ಮತ್ತೊಮ್ಮೆ ಮ್ಯಾಚ್ ಫಿನಿಷರ್ ಅನ್ನಿಸಿಕೊಂಡಿದ್ದರು.

Story first published: Saturday, January 19, 2019, 12:25 [IST]
Other articles published on Jan 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X