ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಯಸ್ಸು ಬರೀ ನಂಬರ್ ಅಷ್ಟೇ ಎಂಬುದನ್ನು ಧೋನಿ ತೋರಿಸಿಕೊಟ್ಟಿದ್ದು ಹೀಗೆ!

India vs Australia: MS Dhoni shows why age is just a number for him - Watch

ನವದೆಹಲಿ, ಮಾರ್ಚ್ 1: ಸರಣಿಯೊಂದಕ್ಕೆ ತಂಡದಲ್ಲಿ ಆಟಗಾರನನ್ನು ಸೇರಿಸಿಕೊಳ್ಳಲು ಅಥವಾ ಕೈಬಿಡಲು ವಯಸ್ಸು ಮುಖ್ಯವಲ್ಲ, ಬದಲಿಗೆ ಫಿಟ್‌ನೆಸ್ ಮುಖ್ಯ ಎಂಬುದನ್ನು ಕ್ಯೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಭಾರತ vs ಆಸ್ಟ್ರೇಲಿಯಾ ದ್ವಿತೀಯ ಟಿ20 ಪಂದ್ಯದಲ್ಲಿ ಧೋನಿ ತಾನು ಫಿಟ್‌ ಆಗಿರುವುದಕ್ಕೆ ಸಾಕ್ಷಿ ಹೇಳಿದರು.

ಭರ್ಜರಿ ಬ್ಯಾಟಿಂಗ್ ಮಾಡಲು ದ್ರಾವಿಡ್ ಕಾರಣ: ಕೆಎಲ್ ರಾಹುಲ್ಭರ್ಜರಿ ಬ್ಯಾಟಿಂಗ್ ಮಾಡಲು ದ್ರಾವಿಡ್ ಕಾರಣ: ಕೆಎಲ್ ರಾಹುಲ್

ಬೆಂಗಳೂರಿನ ಚೆನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ (ಫೆಬ್ರವರಿ 27) ನಡೆದ ದ್ವಿತೀಯ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಆಸೀಸ್ ಸ್ಪಿನ್ನರ್ ಆದಂ ಝಂಪಾ ಎಸೆತದ ವೇಳೆ ವಿಕೆಟ್ ಕೀಪರ್ ಪೀಟರ್ ಹ್ಯಾಂಡ್ಸ್‌ಕಾಂಬ್ ಧೋನಿ ಅವರನ್ನು ಸ್ಟಂಪ್ಡ್ ಮಾಡಲು ಯತ್ನಿಸಿದರು. ಆಗ ಧೋನಿ ಪಾರಾಗಿದ್ದ ಪರಿ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೀಡು ಮಾಡಿತ್ತು.

ಧೋನಿ ಕ್ರೀಸ್ ಬಿಟ್ಟಿರುವುದನ್ನು ಗಮನಿಸಿದ ಹ್ಯಾಂಡ್ಸ್‌ಕಾಂಬ್ ಸ್ಟಂಪ್ಡ್ ಔಟ್ ಮಾಡೋಕೆ ಪ್ರಯತ್ನಿಸಿದರು. ಪೀಟರ್ ಬೆಲ್ಸ್ ಉರುಳಿಸೋಕೂ ಮುನ್ನ ಧೋನಿ 2.14 ಮೀಟರ್ ವರೆಗೂ ಕಾಲು ಹಿಗ್ಗಿಸಿ ಕ್ರೀಸ್ ಮುಟ್ಟಿದ್ದರು. 37ರ ಹರೆಯದ ಉಳಿದ ಆಟಗಾರರಿಗಾದರೆ ಇದು ಸಾಧ್ಯವಿರಲಿಲ್ಲ. ಆದರೆ ನಿರಂತರ ಜಿಮ್‌ ಮೂಲಕ ಫಿಟ್‌ ಆಗಿರುವ ಧೋನಿ ಇದನ್ನು ಸಾಧ್ಯವಾಗಿಸಿದ್ದರು!

ಟಿ20 ಸರಣಿ ಸೋಲಿನ ಬಗ್ಗೆ ಕೊಹ್ಲಿ ಅಷ್ಟು ತಲೆಕೆಡಿಸಿಕೊಂಡಿಲ್ಲವೇಕೆ?ಟಿ20 ಸರಣಿ ಸೋಲಿನ ಬಗ್ಗೆ ಕೊಹ್ಲಿ ಅಷ್ಟು ತಲೆಕೆಡಿಸಿಕೊಂಡಿಲ್ಲವೇಕೆ?

ಈ ಪಂದ್ಯದಲ್ಲಿ 23 ಎಸೆತಗಳಿಗೆ 40 ರನ್ ಸಿಡಿಸಿದ್ದ ಧೋನಿ 3 ಬೌಂಡರಿ, 3 ಸಿಕ್ಸರ್‌ಗಳನ್ನೂ ಬಾರಿಸಿದ್ದರು. ವಿರಾಟ್ ಕೊಹ್ಲಿ 72, ಕೆಎಲ್ ರಾಹುಲ್ 47 ರನ್ ಕೊಡುಗೆಯಿಂದ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 190 ರನ್ ಪೇರಿಸಿತ್ತು. ಆದರೆ ಆಸೀಸ್ ಪರ ಗ್ಲೆನ್ ಮ್ಯಾಕ್ಸ್‌ವೆಲ್ ಅಜೇಯ 113 ರನ್ ಚಚ್ಚಿ ತಂಡಕ್ಕೆ 7 ವಿಕೆಟ್ ಗೆಲುವು ತಂದುಕೊಟ್ಟಿದ್ದರು. ಟಿ20 ಸರಣಿ 2-0ಯಿಂದ ಆಸೀಸ್ ವಶವಾಗಿತ್ತು.

Story first published: Friday, March 1, 2019, 12:16 [IST]
Other articles published on Mar 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X