ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಆಸೀಸ್ ತಂಡಕ್ಕೆ ಪ್ರಮುಖ ಸ್ಪಿನ್ನರ್ ಸೇರ್ಪಡೆ

India vs Australia: Nathan Lyon added to Australia’s T20 squad

ಸಿಡ್ನಿ: ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಗಳಿಸಿದ ಬಳಿಕ ಆತಿಥೇಯ ಆಸ್ಟ್ರೇಲಿಯಾ ಕೂಡ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಅನುಭವಿ ಆಫ್‌ ಬ್ರೇಕ್ ಬೌಲರ್ ನೇಥನ್ ಲಿಯಾನ್ ಅವರನ್ನು ಟಿ20ಐ ತಂಡಕ್ಕೆ ಆಸ್ಟ್ರೇಲಿಯಾ ಸೇರಿಸಿಕೊಂಡಿದ್ದು, ಆಲ್ ರೌಂಡರ್ ಕ್ಯಾಮರಾನ್ ಗ್ರೀನ್ ಅವರನ್ನು ಹೊರಗಿಟ್ಟಿದೆ.

2021ರ ಐಪಿಎಲ್‌ಗೆ ಹೊಸ ಮಾದರಿ, ಮಹತ್ವದ ಬದಲಾವಣೆಗಳು!2021ರ ಐಪಿಎಲ್‌ಗೆ ಹೊಸ ಮಾದರಿ, ಮಹತ್ವದ ಬದಲಾವಣೆಗಳು!

ಕ್ಯಾನ್ಬೆರಾ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡಾಗ ಅವರ ಬದಲಿಗೆ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮೈದಾನಕ್ಕಿಳಿದಿದ್ದರು. ಚಾಹಲ್‌ಗೆ ಆಸ್ಟ್ರೇಲಿಯಾದ ಪ್ರಮುಖ ವಿಕೆಟ್‌ಗಳು ಲಭಿಸಿತ್ತಲ್ಲದೆ, ತಂಡದ ಗೆಲುವಿಗೂ ಚಾಹಲ್ ಕಾರಣರಾಗಿದ್ದರು.

ಮೊದಲ ಪಂದ್ಯದಲ್ಲಿ ಭಾರತದ ಗೆಲುವಿನ ಬಳಿಕ ಟಿ20ಐನಲ್ಲಿ ಸ್ಪಿನ್ನರ್‌ಗಳ ಮಹತ್ವ ಮನಗಂಡಿರುವ ಆಸೀಸ್, ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಆಲ್ ರೌಂಡರ್‌ಗೆ ಬದಲಾಗಿ 33ರ ಹರೆಯದ ಅನುಭವಿ ನೇಥನ್ ಲಿಯಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ದ್ವಿತೀಯ ಟಿ20ಐ ಪಂದ್ಯ ಡಿಸೆಂಬರ್ 6ರಂದು ಸಿಡ್ನಿಯಲ್ಲಿ ನಡೆಯಲಿದೆ.

ಭಾರತ vs ಆಸ್ಟ್ರೇಲಿಯಾ: 2 ತಾಣ, 2 ತಂಡಗಳ ಕುತೂಹಲಕಾರಿ ಕದನಭಾರತ vs ಆಸ್ಟ್ರೇಲಿಯಾ: 2 ತಾಣ, 2 ತಂಡಗಳ ಕುತೂಹಲಕಾರಿ ಕದನ

21ರ ಹರೆಯದ ಕ್ಯಾಮರಾನ್ ಗ್ರೀನ್ ಅವರು ಆಸ್ಟ್ರೇಲಿಯಾ ಟಿ20ಐ ತಂಡದಲ್ಲಿ ಇದ್ದರಾದರೂ ಹಿಂದಿನ ಪಂದ್ಯದಲ್ಲಿ ಆಡಿರಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ. 2 ಟಿ20ಐ ಪಂದ್ಯಗಳನ್ನಾಡಿರುವ ಲಿಯಾನ್ 1 ವಿಕೆಟ್ ಪಡೆದಿದ್ದಾರೆ. ಲಿನ್ ಬಿಟ್ಟರೆ ಆಸೀಸ್ ತಂಡದಲ್ಲಿ ಮತ್ತೊಬ್ಬ ಸ್ಪಿನ್ನರ್ ಆ್ಯಡಂ ಝಂಪಾ ಕೂಡ ಇದ್ದಾರೆ.

Story first published: Saturday, December 5, 2020, 16:08 [IST]
Other articles published on Dec 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X