ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧದ ಈ ಸರಣಿ ನಿಜಕ್ಕೂ ಸವಾಲಿನದ್ದು: ನಥನ್ ಲಿಯಾನ್

India vs australia: Nathan lyon says Indian batsmans have comeup with good plans

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯಾದ ಸ್ಪಿನ್ ಅಸ್ತ್ರವಾಗಿರುವ ಅನುಭವಿ ಬೌಲರ್ ನಥನ್ ಲಿಯಾನ್ ಅವರನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. 2018-19ರ ಸರಣಿಯಲ್ಲಿ ನಥನ್ ಲಿಯಾನ್ 21 ವಿಕೆಟ್ ಪಡೆದು ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂದು ಭಾರತೀಯ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರೊಂದಿಗೆ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರು.

ಆದರೆ ಈ ಬಾರಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಲಿಯಾನ್ ಎಸೆತಗಳಿಗೆ ಅದ್ಭುತವಾಗಿ ಪ್ರತ್ಯುತ್ತರ ನೀಡಲು ಸಫಲರಾಗಿದ್ದಾರೆ. ಮೂರು ಪಂದ್ಯಗಳ ಆರು ಇನ್ನಿಂಗ್ಸ್‌ನಲ್ಲಿ ಲಿಯಾನ್ ಕೇವಲ 6 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ. ಬುಧವಾರ ಈ ಬಗ್ಗೆ ಮಾತನಾಡಿದ ನಥನ್ ಲಿಯಾನ್ ಭಾರತೀಯ ಆಟಗಾರರು ತನ್ನನ್ನು ಎದುರಿಸಲು ನಿಜಕ್ಕೂ ಉತ್ತಮ ಯೋಜನೆಯನ್ನು ರೂಪಿಸಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಭಾರತೀಯ ಆಟಗಾರರಿಗೆ ಗಾಯ, ತರ್ಲೆ ಮಾಡಿದ ವೀರೇಂದ್ರ ಸೆಹ್ವಾಗ್!ಭಾರತೀಯ ಆಟಗಾರರಿಗೆ ಗಾಯ, ತರ್ಲೆ ಮಾಡಿದ ವೀರೇಂದ್ರ ಸೆಹ್ವಾಗ್!

"ಈ ಬೇಸಿಗೆ ನಿಜಕ್ಕೂ ಸವಾಲಿನದ್ದಾಗಿದೆ. ಅವರು ನನ್ನ ವಿರುದ್ಧದ ಕದನಕ್ಕೆ ಉತ್ತಮ ಯೋಜನೆಯನ್ನು ರೂಪಿಸಿಕೊಂಡಿದ್ದಾರೆ. ಆದರೆ ನಿಜಕ್ಕೂ ನಾನು ನನ್ನ ಬೌಲಿಂಗ್ ವಿಚಾರವಾಗಿ ಸಂತಸಗೊಂಡಿದ್ದೇನೆ. ನಾನು ವಿಕೆಟ್ ಪಡೆಯಲು ಬೇಕಾದ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದೆ ಎಂಬುದು ಸಕಾರಾತ್ಮಕವಾದ ಸಂಗತಿ" ಎಂದಿದ್ದಾರೆ ಆಸಿಸ್ ಸ್ಪಿನ್ ಬೌಲರ್ ನಥನ್ ಲಿಯಾನ್.

ಆಸ್ಟ್ರೇಲಿಯಾದ ಈ ಅನುಭವಿ ಸ್ಪಿನ್ ಬೌಲರ್ ಸದ್ಯ 396 ವಿಕೆಟ್‌ಗಳನ್ನು ಪಡೆದಿದ್ದು 400 ವಿಕೆಟ್‌ಗಳ ಸರದಾರನಾಗಲು ಕೇವಲ 4 ವಿಕೆಟ್‌ಗಳ ಕೊರತೆಯಿದೆ. ಆಸ್ಟ್ರೇಲಿಯಾ ಕ್ರಿಕೆಟ್ತಂಡದ ಪರವಾಗಿ ಮೆಕ್‌ಗ್ರಾಥ್ ಮತ್ತು ಶೇನ್ ವಾರ್ನ್ ಮಾತ್ರವೇ ಈ ಮಹತ್ವದ ಸಾಧನೆಯನ್ನು ಮಾಡಿದ ಬೌಲರ್‌ಗಳು ಎನಿಸಿದ್ದಾರೆ.

ಗಾಯದ ಸಮಸ್ಯೆಗೆ ಐಪಿಎಲ್ ದೂರಿದ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ಗಾಯದ ಸಮಸ್ಯೆಗೆ ಐಪಿಎಲ್ ದೂರಿದ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್

ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದ ಪಿಚ್ ಸಿಡ್ನಿ ಕ್ರಿಕೆಟ್ ಅಂಗಳದ ಫ್ಲ್ಯಾಟ್ ಪಿಚ್‌ಗಿಂತ ಹೆಚ್ಚಿನ ಬೌನ್ಸಿ ಪಿಚ್ ಆಗಿದ್ದು ಅಲ್ಲಿ ಹೆಚ್ಚಿನ ಯಶಸ್ಸು ಪಡೆಯುವ ವಿಶ್ವಾಸದಲ್ಲಿ ಅನುಭವಿ ಸ್ಪಿನ್ನರ್ ಇದ್ದಾರೆ. ಗಾಬಾ ಅಂಗಳದಲ್ಲಿ ನಾನು ಕಣಕ್ಕಿಳಿಯಲು ಹೆಚ್ಚು ಉತ್ಸುಕನಾಗಿದ್ದೇನೆ ಎಂದು ನಥನ್ ಲಿಯಾನ್ ಹೇಳಿಕೊಂಡಿದ್ದಾರೆ.

Story first published: Wednesday, January 13, 2021, 17:40 [IST]
Other articles published on Jan 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X