ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿರ್ಣಾಯಕ ಟೆಸ್ಟ್‌ಗೆ ಅಶ್ವಿನ್, ಬೂಮ್ರಾ ಇಲ್ಲ: ಬೌಲಿಂಗ್ ವಿಭಾಗದ ಒಟ್ಟು ಅನುಭವ 4 ಟೆಸ್ಟ್

India vs Australia:No Bumrah no Ashwin, 4 test experienced bowling side face Australia

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಶುಕ್ರವಾರ ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಸರಣಿಯ ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ಭಾರತದ ಅನನುಭವಿ ಬೌಲಿಂಗ್ ವಿಭಾಗ ಅಚ್ಚರಿ ಮೂಡಿಸುವಂತಿದೆ. ಈ ಯುವ ಪಡೆ ಟೀಮ್ ಇಂಡಿಯಾಗೆ ಮೊದಲ ಎರಡು ಸೆಶನ್‌ಗಳಲ್ಲಿ ಆಶಾದಾಯಕ ಮೇಲುಗೈ ನೀಡುವಲ್ಲಿ ಯಶಸ್ವಿಯಾಗಿದ್ದು ಆಸ್ಟ್ರೇಲಿಯಾದ ಮೂರು ವಿಕೆಟ್‌ಗಳನ್ನು ಆರಂಭಿಕ ಎರಡು ಸೆಶನ್‌ಗಳಲ್ಲಿ ಕಬಳಿಸಿ ಆಸಿಸ್ ಪಡೆಗೆ ಆಘಾತ ನೀಡಿದೆ.

ಆಸ್ಟ್ರೇಲಿಯಾದಂತಾ ಬಲಿಷ್ಠ ತಂಡದ ವಿರುದ್ಧ ನಿರ್ಣಾಯಕ ಪಂದ್ಯವನ್ನಾಡುತ್ತಿರುವ ಟೀಮ್ ಇಂಡಿಯಾ ಸಂಪೂರ್ಣ ಹೊಸ ಬೌಲಿಂಗ್ ಪಡೆಯೊಂದಿಗೆ ಕಣಕ್ಕಿಳಿದಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಉಂಟಾಗಿರುವ ಗಾಯದ ಸಮಸ್ಯೆಯಿಂದಾಗಿ ಇಂತಾ ಸಂದಿಗ್ಧತೆಯಲ್ಲಿ ಟೀಮ್ ಇಂಡಿಯಾ ಸಿಲುಕಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಹಾಗೂ ಟಿ ನಟರಾಜನ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.

ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 640 ಮಿಲಿಯನ್‌ ಡಾಲರ್‌ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 640 ಮಿಲಿಯನ್‌ ಡಾಲರ್‌

ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರಾ ಸಿಡ್ನಿ ಪಂದ್ಯದ ಬಳಿಕ ಗಾಯಗೊಂಡಿದ್ದರು. ಮತ್ತೊಂದೆಡೆ ಅನುಭವಿ ಆರ್ ಅಶ್ವಿನ್ ಕೂಡ ಬೆನ್ನುನೋವಿಗೆ ಒಳಗಾಗಿದ್ದು ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯುವುದು ಅಸಾಧ್ಯವಾಗಿದೆ. ಹೀಗಾಗಿ ಸಂಪೂರ್ಣ ಯುವ ಪಡೆಯೊಂದಿಗೆ ಭಾರತ ಬ್ರಿಸ್ಬೇನ್‌ನ ಗಾಲೆ ಕ್ರೀಡಾಂಗಣದಲ್ಲಿ ಕಣಕ್ಕಿಳಿದಿದೆ.

ಅಂತಿಮ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಟಿ ನಟರಾಜನ್, ಶಾರ್ದೂಲ್ ಠಾಕೂರ್ ಹಾಗೂ ನವ್‌ದೀಪ್ ಸೈನಿ ವೇಗಿಗಳಾಗಿ ಕಣಕ್ಕಿಳಿದಿದ್ದರೆ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಸ್ಪಿನ್ನರ್ ಆಗಿ ಕಣಕ್ಕಿಳಿದಿದ್ದಾರೆ. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿ ಕೇವಲ 10 ಎಸೆತ ಮಾತ್ರವೇ ಬೌಲಿಂಗ್ ಮಾಡಿದ್ದ ಠಾಕೂರ್ ಮತ್ತೆ ಟೆಸ್ಟ್‌ಗೆ ಎರಡು ವರ್ಷ ಗಳ ಬಳಿಕ ಮರಳಿದ್ದಾರೆ.

ಮೊಹಮದ್ ಸಿರಾಜ್ ಕೆಲ ವಾರಗಳ ಹಿಂದೆಯಷ್ಟೇ ಆಸ್ಟ್ರೇಲಿಯಾ ವಿರುದ್ಧ ಸರಣಿಯ ಎರಡನೇ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದಾರೆ. ಇನ್ನೋರ್ವ ವೇಗಿ ನವ್‌ದೀಪ್ ಸೈನಿ ಸಿಡ್ನಿ ಟೆಸ್ಟ್‌ನಲ್ಲಿ ಪದಾರ್ಪಣೆಯನ್ನು ಮಾಡಿದ್ದಾರೆ. ಇನ್ನೋರ್ವ ವೇಗಿ ನಟರಾಜನ್ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಭಾರತದ ಬೌಲಿಂಗ್ ವಿಭಾಗದ ಅನುಭವ
ಮೊಹಮ್ಮದ್ ಸಿರಾಜ್: ಮೂರನೇ ಪಂದ್ಯ
ನವ್‌ದೀಪ್ ಸೈನಿ : ಎರಡನೇ ಪಂದ್ಯ
ಶಾರ್ದೂಲ್ ಠಾಕೂರ್ : ಎರಡನೇ ಪಂದ್ಯ
ವಾಶಿಂಗ್ಟನ್ ಸುಂದರ್ : ಪದಾರ್ಪಣೆ
ಟಿ ನಟರಾಜನ್ : ಪದಾರ್ಪಣೆ

Story first published: Friday, January 15, 2021, 10:35 [IST]
Other articles published on Jan 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X