ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಕಂಡು-ಕಾಣದೆ ಉಳಿದ ಸ್ವಾರಸ್ಯಕರ ಸಂಗತಿಗಳು!

India vs Australia: Noticed, unnoticed Surprising things

ನವದೆಹಲಿ, ಮಾರ್ಚ್ 15: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 5ನೇ ಏಕದಿನ ಪಂದ್ಯದಲ್ಲಿ ಸೋಲುವ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯನ್ನು ಟೀಮ್ ಇಂಡಿಯಾ ಸೋತಿದ್ದಾಗಿದೆ. ಆದರೆ ಭಾರತ vs ಆಸ್ಟ್ರೇಲಿಯಾ ಸರಣಿಯ ವೇಳೆ ಕಂಡೂ ಕಾಣದಂತೆ ಉಳಿದ ಕೆಲವು ಅಚ್ಚರಿಯ ಸಂಗತಿಗಳಿವೆ.

ಧೋನೀನಾ-ಕೊಹ್ಲೀನಾ?: ಅದ್ದೂರಿ ಐಪಿಎಲ್‌ಗೊಂದು ಕಲರ್‌ಫುಲ್ ವಿಡಿಯೋಧೋನೀನಾ-ಕೊಹ್ಲೀನಾ?: ಅದ್ದೂರಿ ಐಪಿಎಲ್‌ಗೊಂದು ಕಲರ್‌ಫುಲ್ ವಿಡಿಯೋ

ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ 2-0ಯ ಮುನ್ನಡೆಯಲ್ಲಿದ್ದ ವಿರಾಟ್ ಕೊಹ್ಲಿ ಬಳಗ ಅಂತಿಮವಾಗಿ ಸರಣಿಯನ್ನು 2-3ರಿಂದ ಕಳೆದುಕೊಂಡು ಮುಖಭಂಗ ಅನುಭವಿಸಿತ್ತು. ಈ ಸರಣಿ ಸೋಲು ಟೀಮ್ ಇಂಡಿಯಾದಿಂದ ಅನಗತ್ಯ ದಾಖಲೆ ಸೃಷ್ಟಿಯಾಗಲೂ ಕಾರಣವಾಗಿತ್ತು.

ವಿಶ್ವಕಪ್ ಗೆಲ್ಲುವ ತಂಡ ಯಾವುದೆಂಬುದನ್ನು ಹೇಳಲಾಗದು: ವಿರಾಟ್ ಕೊಹ್ಲಿವಿಶ್ವಕಪ್ ಗೆಲ್ಲುವ ತಂಡ ಯಾವುದೆಂಬುದನ್ನು ಹೇಳಲಾಗದು: ವಿರಾಟ್ ಕೊಹ್ಲಿ

ಸರಣಿ ಆರಂಭಕ್ಕೂ ಮುನ್ನ ಗೆದ್ದೇ ತೀರುತ್ತೇವೆ ಎಂಬಂತಿದ್ದ ಭಾರತ ಟಿ20 ಮತ್ತು ಏಕದಿನ ಎರಡೂ ಸರಣಿಗಳನ್ನು ಸೋತಿತು. ಈ ಸರಣಿ ವೇಳೆ ಒಂದಿಷ್ಟು ಸ್ವಾರಸ್ಯಕರ ಸಂಗತಿಗಳು ಗಮನ ಸೆಳೆದಿದ್ದವು. ಅವುಗಳನ್ನು ನಿಮ್ಮೆದುರು ತಂದಿದ್ದೇವೆ.

ಅಲ್ಲಿ ನಾವು ಇಲ್ಲಿ ಅವ್ರು ಗೆದ್ರು!

ಅಲ್ಲಿ ನಾವು ಇಲ್ಲಿ ಅವ್ರು ಗೆದ್ರು!

ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿದ್ದಾಗ ಭಾರತ ತಂಡ ಟೆಸ್ಟ್ ಮತ್ತು ಐತಿಹಾಸಿಕ ಏಕದಿನ ಸರಣಿಯನ್ನು 2-1ರಿಂದ ಜಯಿಸಿತ್ತು. ಟಿ20 ಪಂದ್ಯ 1-1ರಿಂದ ಸಮಬಲಗೊಂಡಿತ್ತು. ಭಾರತಕ್ಕೆ ಪ್ರವಾಸ ಬಂದಿದ್ದ ಆಸ್ಟ್ರೇಲಿಯಾ ಟಿ20ಯನ್ನು 2-0ಯಿಂದ, ಏಕದಿನ ಸರಣಿಯನ್ನು 3-2ರಿಂದ ಗೆದ್ದುಕೊಂಡಿತು. ಅಲ್ಲಿ ನಾವು ಗೆದ್ದು ಬೀಗಿದ್ದರೆ, ಇಲ್ಲಿ ಕಾಂಗರೂ ಪಡೆ ಟ್ರೋಫಿ ಎತ್ತಿ ಸಂಭ್ರಮಿಸಿತು.

ರಿವರ್ಸ್ ಅನ್ನಿಸಿದ ಪ್ರಬಲ-ದುರ್ಬಲ ಸ್ಥಿತಿ

ರಿವರ್ಸ್ ಅನ್ನಿಸಿದ ಪ್ರಬಲ-ದುರ್ಬಲ ಸ್ಥಿತಿ

ಆಸ್ಟ್ರೇಲಿಯಾದಲ್ಲಿ ಬ್ಲ್ಯೂ ಬಾಯ್ಸ್ ತಂಡ ಪಾರಮ್ಯ ಮೆರೆದಿದ್ದರಿಂದ ಭಾರತದ ಕ್ರಿಕೆಟ್ ಅಭಿಮಾನಿಗಳೂ ಭಾರೀ ಹುಮ್ಮಸ್ಸಿನಲ್ಲಿದ್ದರು. ಕಹಿ ಸತ್ಯವೆಂದರೆ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಚೆಂಡು ವಿರೂಪ ಪ್ರಕರಣದಲ್ಲಿ ವರ್ಷದ ನಿಷೇಧಕ್ಕೆ ಒಳಗಾದ ಬಳಿಕ ಆಸೀಸ್ ಸಹಜವಾಗೇ ಮಂಕಾಗಿತ್ತು. ಆಡಿದ ಸರಣಿಗಳಲ್ಲೂ ಹೀನಾಯ ಸೋಲು ಕಂಡು ದುರ್ಬಲ ತಂಡವೆಂದ ಹೀಗಳೆಗೂ ಒಳಗಾಗಿತ್ತು. ಆದರೆ ಭಾರತಕ್ಕೆ ಪ್ರವಾಸ ಬಂದ ಆಸೀಸ್ ದುರ್ಬಲ ತಂಡ ಎಂಬ ಹಣೆಪಟ್ಟಿಯನ್ನು ಕಳಚಿಟ್ಟಿತ್ತು. ಸೋತ ಭಾರತ 'ನಮ್ಮದು ಪ್ರಬಲ ತಂಡ' ಎಂಬ ಹೆಗ್ಗಳಿಕೆಗೆ ಮಸಿ ಬಳಿಯಲು ಯತ್ನಿಸಿತು.

ಬೇಬಿ ಸಿಟ್ಟಿಂಗ್ ಜೋಕು

ಬೇಬಿ ಸಿಟ್ಟಿಂಗ್ ಜೋಕು

ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿದ್ದಾಗ ಟೆಸ್ಟ್ ಸರಣಿ ವೇಳೆ ರಿಷಬ್ ಪಂತ್ ಮತ್ತು ಟಿಮ್ ಪೈನೆ ಪರಸ್ಪರ ತಮಾಷೆ ಮಾಡಿ ಗಮನ ಸೆಳೆದಿದ್ದರು. ಈ ವೇಳೆ ಪೈನೆ, ಪಂತ್ ಅವರನ್ನು ಗೇಲಿ ಮಾಡಿ ಬೇಬಿ ಸಿಟ್ಟರ್ ಎಂಬಂತೆ ಬಿಂಬಿಸಿದ್ದರು. ಭಾರತಕ್ಕೆ ಆಸೀಸ್ ಪ್ರವಾಸದ ವೇಳೆ ಭಾರತದ ಕ್ರೀಡಾ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಇದನ್ನೇ ದಾಳವಾಗಿ ಬಳಸಿತ್ತು. ವೀರೇಂದ್ರ ಸೆಹ್ವಾಗ್ ಕಾಣಿಸಿಕೊಂಡಿದ್ದ ಈ ಆ್ಯಡ್‌ನಲ್ಲಿ ಪುಟಾಣಿಗಳಿಗೆ ಆಸೀಸ್ ಜರ್ಸಿ ತೊಡಿಸಿ ಒಂದರ್ಥದಲ್ಲಿ ವ್ಯಂಗ್ಯವೇ ಮಾಡಲಾಗಿತ್ತು. ಇದಕ್ಕೆ ಆಸೀಸ್ ಮಾಜಿ ಕ್ರಿಕೆಟಿಗರಿಂದ ಅಸಮಾಧಾನವೂ ವ್ಯಕ್ತವಾಗಿತ್ತು. ಆದರೆ ಆಸ್ಟ್ರೇಲಿಯಾದ ಭಾರತ ಪ್ರವಾಸ ಸರಣಿಯ ಬಳಿಕ ಈ ಬೇಬಿ ಸಿಟ್ಟರ್ ಜೋಕು ಭಾರತದತ್ತಲೇ ಬೊಟ್ಟು ಮಾಡಿ ಗೇಲಿ ಮಾಡಿದೆ.

ಅಚ್ಚರಿಗೆ ಕಾರಣವಾದ ಓವರ್

ಅಚ್ಚರಿಗೆ ಕಾರಣವಾದ ಓವರ್

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಭಾರತ ಇನ್ನಿಂಗ್ಸ್‌ ಮುಗಿಸಿದ ಓವರ್ ಅಚ್ಚರಿಗೀಡುಮಾಡಿತ್ತು. ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 48.2 ಓವರ್‌ಗೆ 4 ವಿಕೆಟ್ ಕಳೆದು 240 ರನ್ ಗಳಿಸಿತ್ತು. ನಾಗ್ಪುರದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಭಾರತ 48.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 250 ರನ್ ಬಾರಿಸಿತ್ತು. ಅಚ್ಚರಿಯೆಂದರೆ ರಾಂಚಿ ಪಂದ್ಯದಲ್ಲೂ ಭಾರತ 48.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 280 ರನ್ ಪೇರಿಸಿತ್ತು. ಒಟ್ಟಿನಲ್ಲಿ ಭಾರತ ಆರಂಭದ ಮೂರೂ ಪಂದ್ಯಗಳಲ್ಲೂ 48.2 ಓವರ್‌ನಲ್ಲಿ ಇನ್ನಿಂಗ್ಸ್‌ ಮುಗಿಸಿದ್ದು ಅಚ್ಚರಿಗೆ ಕಾರಣವಾಗಿತ್ತು.

ಪ್ಲಸ್ಸು-ಮೈನಸ್ಸುಗಳು

ಪ್ಲಸ್ಸು-ಮೈನಸ್ಸುಗಳು

ಉಸ್ಮಾನ್ ಖವಾಜಾ ಶತಕದ (100) ನೆರವಿನಿಂದ ಅಂತಿಮ ಪಂದ್ಯ ಗೆದ್ದು ಏಕದಿನ ಸರಣಿ ವಶಪಡಿಸಿಕೊಂಡ ಆಸ್ಟ್ರೇಲಿಯಾ ಸಕಾರಾತ್ಮಕವಾಗಿ ಗುರುತಿಸಿಕೊಂಡಿತು. ಯಾಕೆಂದರೆ ಭಾರತದ ವಿರುದ್ಧ ಆಸ್ಟ್ರೇಲಿಯಾ ಏಕದಿನ ಸರಣಿ ಗೆದ್ದಿದ್ದು 2009ರಲ್ಲಿ ಕಡೆಯಸಾರಿ. ಆದರೆ ಭಾರತ ನಕಾರಾತ್ಮಕವಾಗಿ ಗಮನ ಸೆಳೆಯಿತು. ಮುನ್ನಡೆಯಲ್ಲಿದ್ದ ಏಕದಿನ ಸರಣಿಯನ್ನು ಭಾರತ ಸೋತಿದ್ದು 2005ಕ್ಕೆ ಕೊನೆಯಾಗಿತ್ತು. ಅಂದು ಪಾಕಿಸ್ತಾನ ವಿರುದ್ಧ ಭಾರತ ಆರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆಯಲ್ಲಿತ್ತು. ಆದರೆ ಕೊನೆಗೆ 2-4ರಿಂದ ಪಾಕ್‌ಗೆ ಸರಣಿ ಒಪ್ಪಿಸಿತ್ತು!

Story first published: Friday, March 15, 2019, 20:20 [IST]
Other articles published on Mar 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X