ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಂಡ್ಯ ಜಡೇಜಾ ಸಾಹಸ, ಆಸ್ಟ್ರೇಲಿಯಾಗೆ 303 ರನ್‌ಗಳ ಗುರಿ ನೀಡಿದ ಭಾರತ

India vs australia: Pandya-Jadeja record partnership takes India to 302 for 5

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಆತಿಥೇಯ ಆಸ್ಟ್ರೇಲಿಯಾಗೆ ಬೃಹತ್ ಗುರಿಯನ್ನು ನೀಡಿದೆ. 302 ರನ್ ಗಳಿಸಿರುವ ಭಾರತ ಗೆಲ್ಲುವ ವಿಶ್ವಾಸದಲ್ಲಿದೆ. ಈ ಪಂದ್ಯವವನ್ನು ಗೆದ್ದರೆ ಭಾರತ ಕ್ಲೀನ್ ಸ್ವೀಪ್ ಅವಮಾನದಿಂದ ತಪ್ಪಿಸಿಕೊಳ್ಳಲಿದೆ. ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂಡ್ರ ಜಡೇಜಾ ಅವರ ದಾಖಲೆಯ ಜೊಯೆತಾಟ ಟೀಮ್ ಇಂಡಿಯಾಗೆ ಆಸರೆಯಾಗಿದೆ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಅಗ್ರ ಕ್ರಮಾಂಕದಲ್ಲಿ ನಾಯಕ ಕೊಹ್ಲಿ ಹೊರತು ಪಡಿಸಿ ಉಳಿದ ಯಾವ ಬ್ಯಾಟ್ಸ್‌ಮನ್‌ನಿಂದ ಕೂಡ ಉತ್ತಮ ಆಟ ಪ್ರದರ್ಶನವಾಗಲಿಲ್ಲ. ಬ್ಯಾಟ್ಸ್‌ಮನ್‌ಗಳಿಗೆ ಸಹಕಾರಿಯಾಗುವ ಮನುಕಾ ಓವಲ್‌ನಲ್ಲಿ ಟೀಮ್ ಇಂಡಿಯಾ 152 ರನ್‌ಗಳಿಗೆ ಅಗ್ರ ಕ್ರಮಾಂಕದ ಐದು ವಿಕೆಟ್ ಕಳೆದುಕೊಂಡಿತ್ತು.

ಭಾರತ vs ಆಸ್ಟ್ರೇಲಿಯಾ: 3ನೇ ಏಕದಿನ ಪಂದ್ಯ, Live ಸ್ಕೋರ್ಭಾರತ vs ಆಸ್ಟ್ರೇಲಿಯಾ: 3ನೇ ಏಕದಿನ ಪಂದ್ಯ, Live ಸ್ಕೋರ್

ಜೊತೆಯಾದ ಪಾಂಡ್ಯ ಜಡೇಜಾ

ಜೊತೆಯಾದ ಪಾಂಡ್ಯ ಜಡೇಜಾ

ಕೊಹ್ಲಿ ವಿಕೆಟ್ ಕಳೆದುಕೊಂಡ ಬಳಿಕ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಅದ್ಭುತ ಆಟವನ್ನು ಪ್ರದರ್ಶಿಸಿದರು. ನಿಧಾನಗತಿಯಲ್ಲಿ ಇನ್ನಿಂಗ್ಸ್ ಬೆಳೆಸಿದ ಈ ಜೋಡಿ ಅಂತಿಮವಾಗಿ ಆರ್ಭಟದ ಆಟವನ್ನು ಪ್ರದರ್ಶಿಸಿದರು. ಶತಕದ ಜೊತೆಯಾಟವನ್ನು ನೀಡಿದ್ದಾರೆ.

ದಾಖಲೆಯ ಜೊತೆಯಾಟ

ದಾಖಲೆಯ ಜೊತೆಯಾಟ

ಪಾಂಡ್ಯ ಹಾಗೂ ಜಡೇಜಾ ಜೋಡಿ ಮುರಿಯದ ಆರನೇ ವಿಕೆಟ್‌ಗೆ ಬರ್ಜರಿ 150 ರನ್‌ಗಳ ಜೊತೆಯಾಟವನ್ನು ನೀಡಿದ್ದಾರೆ. ಇದು ಟೀಮ್ ಇಂಡಿಯಾ ಪರವಾಗಿ ಆರನೇ ವಿಕೆಟ್‌ಗೆ ದಾಖಲಾದ ಮೂರನೇ ಅತಿ ಹೆಚ್ಚಿನ ಜೊತೆಯಾಟವಾಗಿದೆ. 110 ಎಸೆತಗಳಲ್ಲಿ ಈ ಜೋಡಿ ಈ ಮೊತ್ತವನ್ನು ಕಲೆಹಾಕಿದೆ.

ಅರ್ಧ ಶತಕ ದಾಖಲು

ಅರ್ಧ ಶತಕ ದಾಖಲು

ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ 76 ಎಸೆತಗಳಲ್ಲಿ 92 ರನ್ ಬಾರಿಸಿದರೆ ಬಳಿಕ ಬಂದ ರವೀಂದ್ರ ಜಡೇಜಾ 50 ಎಸೆತಗಳಲ್ಲಿ 66 ರನ್ ಸಿಡಿಸಿ ಮಿಂಚಿದರು. ಹಾರ್ದಿಕ್ ಪಾಂಡ್ಯ ಈ ಸರಣಿಯಲ್ಲಿ ಎರಡನೇ ಬಾರಿಗೆ 90+ ರನ್ ಗಳಿಸಿದ್ದಾರೆ.

ಉತ್ತಮ ಇನ್ನಿಂಗ್ಸ್ ಆಡಿದ ನಾಯಕ

ಉತ್ತಮ ಇನ್ನಿಂಗ್ಸ್ ಆಡಿದ ನಾಯಕ

ಇದಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ ಕೂಡ ಆಸಿಸ್ ಬೌಲ್‌ಗಳ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು. 63 ರನ್ ಗಳಿಸಿದ ಕೊಹ್ಲಿ ಸರಣಿಯಲ್ಲಿ ಮೂರನೇ ಬಾರಿಯೂ ಹ್ಯಾಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಆಸಿಸ್ ಪರವಾಗಿ ಹ್ಯಾಜಲ್‌ವಿಡ್, ಸೀನ್ ಅಬಾಟ್ ಹಾಗೂ ಜಂಪಾ ತಲಾ ಒಂದು ವಿಕೆಟ್ ಪಡೆದರೆ ಆಷ್ಟನ್ ಅಗರ್ ಎರಡು ವಿಕೆಟ್ ಕಿತ್ತರು.

Story first published: Wednesday, December 2, 2020, 14:37 [IST]
Other articles published on Dec 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X