ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಭ್ ಪಂತ್ ವಿಕೆಟ್ ಕೀಪಿಂಗ್‌ಗೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ ಟೀಕೆ

India vs Australia: Ricky Ponting unimpressed with Rishabh Pant as a keeper

ಸಿಡ್ನಿ: ಭಾರತ vs ಆಸ್ಟ್ರೇಲಿಯಾ ಮೂರನೇ ಟೆಸ್ಟ್‌ನ ಮೊದಲನೇ ದಿನದಾಟದಲ್ಲಿ ಭಾರತ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್‌ ರಿಷಭ್ ಪಂತ್ ಒಂದೆರಡು ಕ್ಯಾಚ್ ಕೈ ಚೆಲ್ಲಿದ ಬಳಿಕ ಪಂತ್ ಕೀಪಿಂಗ್‌ ಸಾಮರ್ಥ್ಯವನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಪ್ರಶ್ನಿಸಿದ್ದಾರೆ.

ಐಪಿಎಲ್ 2021: ಆಟಗಾರರ ಉಳಿಸಿಕೊಳ್ಳಲು ಜನವರಿ 21 ಕಡೇ ದಿನಐಪಿಎಲ್ 2021: ಆಟಗಾರರ ಉಳಿಸಿಕೊಳ್ಳಲು ಜನವರಿ 21 ಕಡೇ ದಿನ

21ರ ಹರೆಯದ ರಿಷಭ್ ಪಂತ್ ಮೊದಲನೇ ದಿನದಾಟದ ವೇಳೆ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್ ವಿಲ್ ಪುಕೊವ್‌ಸ್ಕಿ ಅವರಿಗೆ ಎರಡು ಬಾರಿ ಜೀವದಾನ ನೀಡಿದ್ದರು. ಎರಡು ಬಾರಿಯೂ ಪಂತ್‌ಗೆ ಕ್ಯಾಚ್ ಅವಕಾಶ ಲಭಿಸಿತ್ತು. ಆದರೆ ಕೀಪಿಂಗ್‌ನಲ್ಲಿ ಪಂತ್ ಮತ್ತೆ ಎಡವಿದ್ದು ಕಾಣಿಸಿತ್ತು.

ವಿಲ್ ಪುಕೋವ್‌ಸ್ಕಿ ಅವರು 26 ರನ್ ಗಳಿಸಿದ್ದಾಗ ಆರ್ ಅಶ್ವಿನ್ ಓವರ್‌ನಲ್ಲಿ ಪಂತ್‌ಗೆ ಕ್ಯಾಚ್ ಲಭಿಸಿತ್ತು. ಆದರೆ ಆ ಕ್ಯಾಚನ್ನು ಪಂತ್ ಕೈ ಚೆಲ್ಲಿದ್ದರು. ಮತ್ತೆ ಮೊಹಮ್ಮದ್ ಸಿರಾಜ್ ಓವರ್‌ನಲ್ಲೂ ಪುಕೊವ್‌ಸ್ಕಿ ಪುಲ್‌ ಶಾಟ್‌ಗೆ ಯತ್ನಿಸಿದಾಗ ಗ್ಲೌಸ್‌ಗೆ ತಾಗಿದ ಚೆಂಡು ಕೀಪರ್ ಇದ್ದ ಹಿಂಬಾಕ್ಕೆ ಚಲಿಸಿತ್ತು. ಪಂತ್‌ ಆ ಕ್ಯಾಚನ್ನು ಒಮ್ಮೆ ಮಿಸ್ ಮಾಡಿ ಆಮೇಲೆ ಹಿಡಿದಿದ್ದರು. ಆದರೆ ರಿವ್ಯೂನಲ್ಲಿ ಚೆಂಡು ಮೊದಲೇ ನೆಲಕ್ಕೆ ತಾಗಿದ್ದು ಕಾಣಿಸಿತ್ತು. ಹೀಗಾಗಿ ಪುಕೊವ್‌ಸ್ಕಿ ಅವರನ್ನು ನಾಟ್‌ಔಟ್ ಎಂದು ತೀರ್ಮಾನಿಸಲಾಗಿತ್ತು.

ನಾನು ಆರ್ ಅಶ್ವಿನ್‌ಗೆ ಒತ್ತಡ ತರಲು ನೋಡುತ್ತಿದ್ದೇನೆ: ಸ್ಟೀವ್ ಸ್ಮಿತ್ನಾನು ಆರ್ ಅಶ್ವಿನ್‌ಗೆ ಒತ್ತಡ ತರಲು ನೋಡುತ್ತಿದ್ದೇನೆ: ಸ್ಟೀವ್ ಸ್ಮಿತ್

ಐಪಿಎಲ್‌ನಲ್ಲಿ ಪಂತ್‌ ಆಡುವ ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಕೂಡ ಆಗಿರುವ ರಿಕಿ ಪಾಂಟಿಂಗ್‌, 'ಇವತ್ತು ಪಂತ್ ಡ್ರಾಪ್ ಮಾಡಿದ ಕ್ಯಾಚ್‌ಗಳು ಹಿಡಿಯುವಂತದ್ದು. ಆತ ಪಾದಾರ್ಪಣೆ ಮಾಡಿದಾಗಿನಿಂದ ವಿಶ್ವದಲ್ಲಿ ಯಾವುದೇ ಕೀಪರ್‌ಗಳು ಬಿಡದಷ್ಟು ಕ್ಯಾಚ್‌ಗಳನ್ನುಬಿಟ್ಟಿದ್ದಾನೆ,' ಎಂದು ಟೀಕಿಸಿದ್ದಾರೆ.

Story first published: Thursday, January 7, 2021, 23:03 [IST]
Other articles published on Jan 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X