ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಿಮ ಏಕದಿನಕ್ಕೆ ರೋಹಿತ್ ಶರ್ಮಾ, ಶಿಖರ್ ಧವನ್ ಕಣಕ್ಕಿಳಿಯುತ್ತಾರಾ?!

India vs Australia: Rohit Sharma and Shikhar Dhawan recovering well

ಬೆಂಗಳೂರು, ಜನವರಿ 18: ಗಾಯಾಳಾಗಿರುವ ಟೀಮ್ ಇಂಡಿಯಾ ಓಪನರ್ಸ್ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಬೆಂಗಳೂರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ-ಭಾರತ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಾರಾ? ಈ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಭಾನುವಾರ (ಜನವರಿ 19) ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ.

ಎಲ್ಲೂ ಸಲ್ಲುತ್ತಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ನೆನಪಿಸಿದ ಕೆಎಲ್ ರಾಹುಲ್!ಎಲ್ಲೂ ಸಲ್ಲುತ್ತಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ನೆನಪಿಸಿದ ಕೆಎಲ್ ರಾಹುಲ್!

ರಾಜ್‌ಕೋಟ್‌ನಲ್ಲಿ ಶುಕ್ರವಾರ (ಜನವರಿ 17) ನಡೆದಿದ್ದ ದ್ವಿತೀಯ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಗಾಯಗೊಂಡು ಮೈದಾನದಿಂದ ಹೊರಗುಳಿದಿದ್ದರು. ಅಂದರೆ ಧವನ್ ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಮೈದಾನಕ್ಕಿಳಿಯಲೇ ಇಲ್ಲ. ರೋಹಿತ್ ಆಸೀಸ್ ಇನ್ನಿಂಗ್ಸ್‌ನ 43ನೇ ಓವರ್‌ ವೇಳೆ ಮೈದಾನದಿಂದ ಹೊರ ನಡೆದಿದ್ದರು.

ಹರ್ಭಜನ್ ಸಿಂಗ್ ದಾಖಲೆ ಮುರಿದು ಮಿನುಗಿದ ಕುಲದೀಪ್ ಯಾದವ್ಹರ್ಭಜನ್ ಸಿಂಗ್ ದಾಖಲೆ ಮುರಿದು ಮಿನುಗಿದ ಕುಲದೀಪ್ ಯಾದವ್

ಭಾರತದ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಧವನ್‌ಗೆ ಚೆಂಡಿನೇಟು ತಗಲಿ ಗಾಯಗೊಂಡಿದ್ದರು. ಇತ್ತ ರೋಹಿತ್ ಶರ್ಮಾ ಆಸೀಸ್ ಇನ್ನಿಂಗ್ಸ್‌ನಲ್ಲಿ ಬೌಂಡರಿ ತಡೆಯಲೆತ್ನಿಸಿ ಕೈಗೆ ಗಾಯ ಮಾಡಿಕೊಂಡಿದ್ದರು. ಮೂರು ಪಂದ್ಯಗಳ ಏಕದಿನ ಸರಣಿ ಈಗ 1-1ರಿಂದ ಸಮಬಲಗೊಂಡಿದ್ದು ನಿರ್ಣಾಯಕ ಪಂದ್ಯದಲ್ಲೇ ಇಬ್ಬರು ಆಟಗಾರರ ಗಾಯ ತಂಡವನ್ನು ಚಿಂತೆಗೀಡು ಮಾಡಿದೆ.

ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!

ರೋಹಿತ್ ಚೇತರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕ ವಿರಾಟ್ ಕೊಹ್ಲಿ, 'ರೋಹಿತ್ ಅವರನ್ನು ಈಗತಾನೇ ವಿಚಾರಿಸಿದೆ. ಅವರ ಎಡಗೈಗೆ ಸಣ್ಣಮಟ್ಟಿನ ಗಾಯವಾಗಿದೆ. ಇಲ್ಲಿ ಗಾಬರಿಪಡುವಂತದ್ದೇನಿಲ್ಲ. ಶರ್ಮಾ ಮುಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ,' ಎಂದಿದ್ದಾರೆ. ಮಾಹಿತಿಯ ಪ್ರಕಾರ ರೋಹಿತ್ ಧವನ್ ಇಬ್ಬರೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

Story first published: Saturday, January 18, 2020, 18:27 [IST]
Other articles published on Jan 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X