ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಮೂರನೇ ಟೆಸ್ಟ್‌ಗೆ ವೀಕ್ಷಕರ ಸಂಖ್ಯೆ ಕಡಿತ

India vs Australia: SCG capacity reduced to 25 percent for third Test
ಭಾರತ vs ಆಸ್ಟ್ರೇಲಿಯಾ: ಮೂರನೇ ಟೆಸ್ಟ್‌ಗೆ ವೀಕ್ಷಕರ ಸಂಖ್ಯೆ ಕಡಿತ | Oneindia Kannada

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ಗೆ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ವೀಕ್ಷಕರ ಅಂಖ್ಯೆಯನ್ನು ಕಡಿತ ಗೊಳಿಸಲಾಗಿದೆ. ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ಕೊರೊನಾವೈರಸ್ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಿರುವುದರಿಂದ 3ನೇ ಟೆಸ್ಟ್‌ಗೆ ಮೈದಾನದಲ್ಲಿ ವೀಕ್ಷಕರ ಸಂಖ್ಯೆ ಕಡಿತಗೊಳಿಸಲಾಗಿದೆ.

ಇಂಗ್ಲೆಂಡ್ ಆಲ್ ರೌಂಡರ್ ಮೊಯೀನ್ ಅಲಿಗೆ ಕೊರೊನಾ ಪಾಸಿಟಿವ್ಇಂಗ್ಲೆಂಡ್ ಆಲ್ ರೌಂಡರ್ ಮೊಯೀನ್ ಅಲಿಗೆ ಕೊರೊನಾ ಪಾಸಿಟಿವ್

ಭಾರತ ಮತ್ತು ಆಸ್ಟ್ರೇಲಿಯಾ ತೃತೀಯ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಜನವರಿ 7ರಿಂದ ಆರಂಭಗೊಳ್ಳಲಿದೆ. ಈ ಮೈದಾನದಲ್ಲಿನ ಒಟ್ಟು ಸಾಮರ್ಥ್ಯಕ್ಕಿಂತ ಕೇವಲ 25 ಶೇ. ಮಂದಿಗೆ ಮಾತ್ರ ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.

ಜನವರಿ 5-19ಕ್ಕೆ ನಡೆಯುವ ಇತ್ತಂಡಗಳ ನಾಲ್ಕನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ಗೆ ಬದಲಾಗಿ ಸಿಡ್ನಿಗೆ ಸ್ಥಳಾಂತರಿಸಲಾಗುತ್ತದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ ಟೀಮ್ ಇಂಡಿಯಾ ಕಠಿಣ ಕ್ವಾರಂಟೈನ್‌ಗೆ ಒಳಗಾಗಬೇಕಾಗಿರುವುದರಿಂದ ಪಂದ್ಯ ಸ್ಥಳಾಂತರಿಸಲು ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಾತರಿಯಾಗಿಲ್ಲ.

ತೆಂಡೂಲ್ಕರ್ ಅವರಷ್ಟೇ ರಾಹುಲ್ ದ್ರಾವಿಡ್ ಕೂಡ ಪ್ರಾಮುಖ್ಯರು: ಸ್ಟೀವ್ ವಾತೆಂಡೂಲ್ಕರ್ ಅವರಷ್ಟೇ ರಾಹುಲ್ ದ್ರಾವಿಡ್ ಕೂಡ ಪ್ರಾಮುಖ್ಯರು: ಸ್ಟೀವ್ ವಾ

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಈಗಾಗಲೇ ವೀಕ್ಷಕರ ಸಂಖ್ಯೆಯನ್ನು ಶೇ. 50ಕ್ಕೆ ಕಡಿತಗೊಳಿಸಲಾಗಿತ್ತು. ಅದನ್ನು ಮತ್ತೆ 25 ಶೇ.ಕ್ಕೆ ಇಳಿಸಲಾಗಿದೆ. ಅಂದರೆ ಈಗ ಪಂದ್ಯಗಳು ನಡೆಯುವಾಗ ಪ್ರತೀ ದಿನ ಕೇವಲ 10000ಕ್ಕೂ ಕಡಿಮೆ ವೀಕ್ಷಕರು ಮೈದಾನದಲ್ಲಿದ್ದು ಪಂದ್ಯ ವೀಕ್ಷಿಸಲಿದ್ದಾರೆ. ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನ ಅಸಲಿ ಸಾಮರ್ಥ್ಯ 48,000.

Story first published: Monday, January 4, 2021, 21:11 [IST]
Other articles published on Jan 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X