ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ 2020-21ರ ಕ್ರಿಕೆಟ್ ಸರಣಿ: ಟೆಸ್ಟ್‌, ಏಕದಿನ, ಟಿ20 ಸಂಪೂರ್ಣ ವೇಳಾಪಟ್ಟಿ

India vs Australia series: Tests, ODIs, T20Is schedule, Venues, Pink Ball Test Details in Kannada

ಬಹುನಿರೀಕ್ಷಿತ ಭಾರತದ ಆಸ್ಟ್ರೇಲಿಯಾ ಪ್ರವಾಸವು ನವೆಂಬರ್ 27 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಏಕದಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಮೊದಲ ಟಿ 20 ಪಂದ್ಯ ಡಿಸೆಂಬರ್ 4 ರಂದು ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಡೆಯಲಿದ್ದು, ಮೊದಲ ಟೆಸ್ಟ್ ಡಿಸೆಂಬರ್ 17 ರಂದು ಅಡಿಲೇಡ್ ಓವಲ್‌ನಲ್ಲಿ ಪ್ರಾರಂಭವಾಗಲಿದೆ.

ನವೆಂಬರ್ 10 ರ ಐಪಿಎಲ್ 2020 ಫೈನಲ್ ನಂತರ ಭಾರತ ತಂಡವು ದುಬೈನಿಂದ ಹೊರಡಲಿದೆ ಎಂದು ಇಎಸ್‌ಪಿಎನ್‌ ಕ್ರಿಕ್‌ ಇನ್ಫೋ ವರದಿ ಮಾಡಿದೆ. ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಮತ್ತು ಹನುಮಾ ವಿಹಾರಿ ಕೂಡ ನವೆಂಬರ್ ಮೊದಲ ವಾರದಲ್ಲಿ ದುಬೈಗೆ ಆಗಮಿಸಲಿದ್ದು, ಆರು ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ.

ಸಿಡ್ನಿಯಲ್ಲಿ ಕ್ವಾರಂಟೈನ್ ಆಗಲಿದ್ದಾರೆ ಆಟಗಾರರು

ಸಿಡ್ನಿಯಲ್ಲಿ ಕ್ವಾರಂಟೈನ್ ಆಗಲಿದ್ದಾರೆ ಆಟಗಾರರು

ಇದೇ ಮೊದಲ ಬಾರಿಗೆ ಭಾರತೀಯರು ಆಸ್ಟ್ರೇಲಿಯಾ ಪ್ರವಾಸವನ್ನು ಬಿಳಿ-ಚೆಂಡು(ಟೆಸ್ಟ್‌ ಕ್ರಿಕೆಟ್) ಸ್ವರೂಪಗಳೊಂದಿಗೆ ಪ್ರಾರಂಭಿಸುತ್ತಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರು ಸಿಡ್ನಿಗೆ ತೆರಳಲಿದ್ದು, ಅಭ್ಯಾಸಗಳ ಸೌಲಭ್ಯದೊಂದಿಗೆ ಅಲ್ಲೇ ಕ್ವಾರಂಟೈನ್ ಆಗಲಿದ್ದಾರೆ. ಈ ವಿಷಯದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್ ಸರ್ಕಾರ ಒಪ್ಪಂದಕ್ಕೆ ಬಂದಿವೆ. ಅಡಿಲೇಡ್ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಅನ್ನು ಆಯೋಜಿಸುತ್ತದೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಸದ್ಯದಲ್ಲೇ ಟೀಮ್ ಇಂಡಿಯಾ ಆಟಗಾರರ ಆಯ್ಕೆ

ಐಪಿಎಲ್‌ನಲ್ಲಿ ಆಡುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟಿಗರು

ಐಪಿಎಲ್‌ನಲ್ಲಿ ಆಡುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟಿಗರು

ಐಪಿಎಲ್ 2020 ರಲ್ಲಿ ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್, ಆರೋನ್ ಫಿಂಚ್, ಜೋಶ್ ಹೇಜಲ್‌ವುಡ್ ಮುಂತಾದ ಆಸ್ಟ್ರೇಲಿಯಾದ ಕ್ರಿಕೆಟಿಗರು ಯುಎಇನಲ್ಲಿ ಆಡುತ್ತಿದ್ದಾರೆ. ಈ ಎಲ್ಲ ಕ್ರಿಕೆಟಿಗರು ಮತ್ತು ಭಾರತೀಯ ಸಹ ಆಟಗಾರರು ಪೂರ್ಣ ಪ್ರಮಾಣದ ಸರಣಿಗಾಗಿ ದುಬೈನಿಂದ ಸಿಡ್ನಿಗೆ ತೆರಳಲಿದ್ದಾರೆ.

ಕಳೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿದ್ದ ಭಾರತ

ಕಳೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿದ್ದ ಭಾರತ

ಕಳೆದ ಬಾರಿ ವಿರಾಟ್ ಕೊಹ್ಲಿ ನೇತೃತ್ವದ ಭಾರತವು 2018-19ರಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಜೊತೆಗೆ ಐತಿಹಾಸಿಕ ಸಾಧನೆ ಮಾಡುವ ಮೂಲಕ ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾದ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದಿತು.

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಕೆ.ಎಲ್ ರಾಹುಲ್‌ರನ್ನ ಆಯ್ಕೆ ಮಾಡಿ: ದೊಡ್ಡ ಗಣೇಶ್

ಟೀಮ್ ಇಂಡಿಯಾ ಹಿರಿಯ ಆಟಗಾರರ ಆಯ್ಕೆ ಸಮಿತಿ ಅಧ್ಯಕ್ಷ ಸುನಿಲ್ ಜೋಶಿ ನೇತೃತ್ವದ ಆಯ್ಕೆ ಸಮಿತಿಯು ಈ ವಾರಾಂತ್ಯದಲ್ಲಿ ಪ್ರವಾಸಕ್ಕಾಗಿ ಭಾರತ ತಂಡವನ್ನು ಆಯ್ಕೆ ಮಾಡುತ್ತದೆ ಮತ್ತು ಇದು ಎಲ್ಲಾ ಸ್ವರೂಪಗಳಿಗೆ 23 ರಿಂದ 25 ​​ಆಟಗಾರರ ತಂಡವಾಗಲಿದೆ.

ಮೂರು ಸರಣಿಯ ಸಂಪೂರ್ಣ ವೇಳಾಪಟ್ಟಿ

ಮೂರು ಸರಣಿಯ ಸಂಪೂರ್ಣ ವೇಳಾಪಟ್ಟಿ

1 ನೇ ಏಕದಿನ: ನವೆಂಬರ್ 27: ಸಿಡ್ನಿ
2 ನೇ ಏಕದಿನ: ನವೆಂಬರ್ 29: ಸಿಡ್ನಿ
3 ನೇ ಏಕದಿನ: ಡಿಸೆಂಬರ್ 1: ಮನುಕಾ ಓವಲ್, ಕ್ಯಾನ್ಬೆರಾ
1 ನೇ ಟಿ 20 : ಡಿಸೆಂಬರ್ 4: ಮನುಕಾ ಓವಲ್: ಕ್ಯಾನ್ಬೆರಾ
2 ನೇ ಟಿ 20 : ಡಿಸೆಂಬರ್ 6: ಸಿಡ್ನಿ
3 ನೇ ಟಿ 20 : ಡಿಸೆಂಬರ್ 8: ಸಿಡ್ನಿ
1 ನೇ ಟೆಸ್ಟ್: ಡಿಸೆಂಬರ್ 17-21: ಅಡಿಲೇಡ್ ಓವಲ್
2 ನೇ ಟೆಸ್ಟ್: ಡಿಸೆಂಬರ್ 26-31: ಮೆಲ್ಬರ್ನ್
3 ನೇ ಟೆಸ್ಟ್: ಜನವರಿ 7- 11: ಸಿಡ್ನಿ

Story first published: Wednesday, October 28, 2020, 10:46 [IST]
Other articles published on Oct 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X