ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: 7 ವರ್ಷಗಳ ಹಿಂದಿನ ವಿಶ್ವದಾಖಲೆ ಮುರಿದ ಶೆಫಾಲಿ ವರ್ಮಾ!

India vs Australia: Shafali Verma breaks world record

ಮೆಲ್ಬರ್ನ್, ಮಾರ್ಚ್ 8: ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 8) ನಡೆದ ಮಹಿಳಾ ಟಿ20 ವಿಶ್ವಕಪ್ ಫೈನಲ್ ಫೈನಲ್ ಪಂದ್ಯದಲ್ಲಿ ಭಾರತದ ಎರಡನೇ ವೀರೇಂದ್ರ ಸೆಹ್ವಾಗ್ ಎಂದು ಕರೆಸಿಕೊಳ್ಳುತ್ತಿರುವ ಶೆಫಾಲಿ ವರ್ಮಾ ವಿಶ್ವದಾಖಲೆಯೊಂದನ್ನು ಮುರಿದಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಭಾರತ ಸೋತು ಹತಾಶೆ ಅನುಭವಿಸಿತಾದರೂ ಪ್ರತಿಭಾನ್ವಿತ ಆಟಗಾರ್ತಿ ಶೆಫಾಲಿ ದಾಖಲೆಗಾಗಿ ಗಮನ ಸೆಳೆದರು.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ

ಅಸ್ಟ್ರೇಲಿಯಾ ಮಹಿಳಾ ತಂಡ ಇದು ಆರನೇ ಬಾರಿಗೆ ವಿಶ್ವಕಪ್‌ ಫೈನಲ್‌ಗೆ ಪ್ರವೇಶಿಸಿತ್ತು. ಅದರಲ್ಲಿ ಆಸೀಸ್ ಐದು ಟ್ರೋಫಿಗಳನ್ನು ಗೆದ್ದಂತಾಗಿದೆ. ಇದೇ ಚೊಚ್ಚಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದ್ದ ಭಾರತಕ್ಕೆ ಕಪ್‌ ಗೆಲ್ಲುವ ಅಪೂರ್ವ ಅವಕಾಶ ಇತ್ತಾದರೂ ಆಸೆ ಕೈಗೂಡಲಿಲ್ಲ.

ಸೆಹ್ವಾಗ್, ಸಚಿನ್ ಆಕರ್ಷಕ ಆಟಕ್ಕೆ ಶರಣಾದ ವೆಸ್ಟ್ ಇಂಡೀಸ್ ಲೆಜೆಂಡ್ಸ್ಸೆಹ್ವಾಗ್, ಸಚಿನ್ ಆಕರ್ಷಕ ಆಟಕ್ಕೆ ಶರಣಾದ ವೆಸ್ಟ್ ಇಂಡೀಸ್ ಲೆಜೆಂಡ್ಸ್

ಭಾರತದ ವನಿತೆಯರು ಅಸಲಿಗೆ ಕಳಪೆ ಪ್ರದರ್ಶನ ನೀಡಿದ್ದು ಫೈನಲ್‌ನಲ್ಲೇ. ಇದಕ್ಕೂ ಹಿಂದಿನ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದ ಭಾರತ, ಪ್ರಶಸ್ತಿ ಸುತ್ತಿನಲ್ಲೇ ಎಡವಿ ನಿರಾಶೆ ಮೂಡಿಸಿದೆ.

ಪಂದ್ಯದ ಸಾರಾಂಶ

ಪಂದ್ಯದ ಸಾರಾಂಶ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ ವನಿತಾ ತಂಡ, ಅಲಿಸಾ ಹೀಲಿ 75 (39 ಎಸೆತ), ಬೆತ್ ಮೂನಿ 78 (54 ಎಸೆತ) ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್‌ ಕಳೆದು 184 ರನ್ ಮಾಡಿತ್ತು. ಗುರಿ ಬೆನ್ನತ್ತಿದ ಭಾರತದ ವನಿತೆಯರು 19.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 99 ರನ್ ಬಾರಿಸಲಷ್ಟೇ ಶಕ್ತರಾದರು.

ಶೆಫಾಲಿ ವಿಶ್ವದಾಖಲೆ

ಶೆಫಾಲಿ ವಿಶ್ವದಾಖಲೆ

ಕೇವಲ 16 ವರ್ಷ, 40 ದಿನ ವಯಸ್ಸಿನವರಾಗಿರುವ ಹರ್ಯಾಣದ ಶೆಫಾಲಿ ವರ್ಮಾ, ವಿಶ್ವಕಪ್‌ ಫೈನಲ್‌ನಲ್ಲಿ ಪಾಲ್ಗೊಂಡ ಅತೀ ಕಿರಿಯ ಆಟಗಾರ್ತಿಯಾಗಿ ವಿಶ್ವದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲ ಪುರುಷರು ಮತ್ತು ಮಹಿಳಾ ವಿಭಾಗದಲ್ಲಿ ಸೃಷ್ಠಿಯಾಗಿದ್ದ ಈ ಹಿಂದಿನ ದಾಖಲೆಗಳನ್ನೂ ಸರಿಗಟ್ಟಿದ್ದಾರೆ. ಬರೀ ಕಿರಿಯ ಆಟಗಾರ್ತಿಯಷ್ಟೇ ಅಲ್ಲ, ಟೂರ್ನಿಯ ಅತ್ಯಧಿಕ ರನ್ ಪಟ್ಟಿಯಲ್ಲಿ 5ನೇ ಸ್ಥಾನ (163 ರನ್) ಕೂಡ ಪಡೆದಿದ್ದಾರೆ.

ಎರಡರಲ್ಲೂ ಶೆಫಾಲಿ ನಂ.1

ಎರಡರಲ್ಲೂ ಶೆಫಾಲಿ ನಂ.1

ಪುರುಷರು ಮತ್ತು ಮಹಿಳೆಯರು ಅಷ್ಟೇ ಅಲ್ಲ, ಏಕದಿನ-ಟಿ20 ಎರಡೂ ಮಾದರಿಯಲ್ಲೂ ವಿಶ್ವಕಪ್ ಫೈನಲ್‌ನಲ್ಲಿ ಆಡಿದ ಅತೀ ಕಿರಿಯ ಆಟಗಾರ್ತಿಯಾಗಿ ಶೆಫಾಲಿ ಗಮನ ಸೆಳೆದಿದ್ದಾರೆ. ಈ ದಾಖಲೆ ಸಾಲಿನಲ್ಲಿ ದ್ವಿತೀಯ ಸ್ಥಾನದಲ್ಲಿ ವೆಸ್ಟ್ ಇಂಡೀಸ್‌ನ ಶಕ್ವಾನಾ ಕ್ವಿಂಟೈನ್ ಇದ್ದಾರೆ.

ದಾಖಲೆ ಪಟ್ಟಿಯ ಹೆಸರುಗಳು

ದಾಖಲೆ ಪಟ್ಟಿಯ ಹೆಸರುಗಳು

ವಿಶ್ವಕಪ್‌ನಲ್ಲಿ ಅತೀ ಕಿರಿಯ ಆಟಗಾರರೆಂಬ ದಾಖಲೆ ಬರೆದವರೆಂದರೆ, ಭಾರತದ ಶೆಫಾಲಿ ವರ್ಮಾ (16 ವರ್ಷ, 40 ದಿನ, ಮಹಿಳಾ ಟಿ20, 2020), ವೆಸ್ಟ್ ಇಂಡೀಸ್‌ನ ಶಕ್ವಾನಾ ಕ್ವಿಂಟೈನ್ (17 ವರ್ಷ, 45 ದಿನ, ಮಹಿಳಾ ಏಕದಿ, 2013), ಪಾಕಿಸ್ತಾನದ ಮೊಹಮ್ಮದ್ ಅಮೀರ್ (17 ವರ್ಷ, 69 ದಿನ, ಪುರುಷರ ಟಿ20, 2009), ವೆಸ್ಟ್ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್ (18 ವರ್ಷ, 15 ದಿನ, ಮಹಿಳಾ ಟಿ20, 2016).

Story first published: Sunday, March 8, 2020, 18:16 [IST]
Other articles published on Mar 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X