ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ನಲ್ಲಿ ಶುಬ್ಮನ್ ಗಿಲ್ ನಂ.6ರಲ್ಲಿ ಬರಬೇಕು: ಅಜಿತ್ ಅಗರ್ಕರ್

India vs Australia: Shubman Gill should bat at No. 6 in Tests: Ajit Agarkar

ಸಿಡ್ನಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ 6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರಬೇಕು ಎಂದು ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ಹೇಳಿದ್ದಾರೆ. ಭಾರತದ ನಾಯಕ ಕೊಹ್ಲಿ ಟೆಸ್ಟ್ ಸರಣಿಯುದ್ದಕ್ಕೂ ಆಡುತ್ತಿಲ್ಲವಾದ್ದರಿಂದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಬೇಕು ಎಂದು ಅಜಿತ್ ಅಭಿಪ್ರಾಯಪಟ್ಟಿದ್ದಾರೆ.

ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾಗೆ ದೊಡ್ಡ ಆಘಾತವನ್ನು ನೀಡಿದ್ದರು: ಹೇಡನ್ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾಗೆ ದೊಡ್ಡ ಆಘಾತವನ್ನು ನೀಡಿದ್ದರು: ಹೇಡನ್

ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆದ ಎರಡು ಅಭ್ಯಾಸ ಪಂದ್ಯಗಳಲ್ಲಿ ಶುಬ್ಮನ್ ಗಿಲ್ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದರು. ದ್ವಿತೀಯ ಅಭ್ಯಾಸವಾಗಿ ನಡೆದ ಪಿಂಕ್‌ಬಾಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ ಗಿಲ್ ಕ್ರಮವಾಗಿ 43 ಮತ್ತು 65 ರನ್ ಬಾರಿಸಿದ್ದರು.

'ಈ ಹೊತ್ತಿನಲ್ಲಿ ತಂಡದಲ್ಲಿ ಎಲ್ಲರೂ ಆರಂಭಿಕ ಬ್ಯಾಟ್ಸ್‌ಮನ್‌ಗಳಂತೆ ಕಾಣುತ್ತಾರೆ ಅಲ್ವಾ? ಯಾಕೆಂದರೆ ಹನುಮ ವಿಹಾರಿ ಮತ್ತು ಅಜಿಂಕ್ಯ ರಹಾನೆ ಸಾಮಾನ್ಯವಾಗಿ ಚೇತೇಶ್ವರ ಪೂಜಾರ ಜೊತೆ ಮಧ್ಯಮ ಕ್ರಮಾಂಕದಲ್ಲಿ ಆಡಲು ಹೋಗುತ್ತಾರೆ. ಹೀಗಾಗಿ 6ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ನನ್ನ ಆಯ್ಕೆ ಶುಬ್ಮನ್ ಗಿಲ್. ಆದರೆ ಹೆಚ್ಚಿನವರು ಗಿಲ್‌ನನ್ನು ಆರಂಭಿಕನಾಗಿ ಆರಿಸ್ತಾರೆ,' ಎಂದು ಸೋನಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಅಗರ್ಕರ್ ಹೇಳಿದ್ದಾರೆ.

ಅಮೆರಿಕನ್ ಪವರ್‌ಬಾಲ್ ಜಾಕ್‌ಪಾಟ್ ಆಡಿ: 520 ಮಿಲಿಯನ್ ಡಾಲರ್ ಗೆಲ್ಲಿಅಮೆರಿಕನ್ ಪವರ್‌ಬಾಲ್ ಜಾಕ್‌ಪಾಟ್ ಆಡಿ: 520 ಮಿಲಿಯನ್ ಡಾಲರ್ ಗೆಲ್ಲಿ

ಟೆಸ್ಟ್ ಸರಣಿಯ ಆರಂಭದಲ್ಲಿ ನಡೆಯುವ ಪಿಂಕ್‌ ಬಾಲ್ ಟೆಸ್ಟ್ ಬಳಿಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಪಡೆಯಲಿದ್ದಾರೆ. ಆ ಬಳಿಕ ಬಹುಶಃ ಅಜಿಂಕ್ಯ ರಹಾನೆ ತಂಡದ ನಾಯಕತ್ವ ತೆಗೆದುಕೊಳ್ಳಲಿದ್ದಾರೆ. ಕೊಹ್ಲಿ ಆಡುವ 4ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ರಹಾನೆ ಬರುವ ಸಾಧ್ಯತೆಯಿದೆ. ಇನ್ನು 5ನೇ ಕ್ರಮಾಂಕದಲ್ಲಿ ಹನುಮ ವಿಹಾರಿ ಬರುವ ನಿರೀಕ್ಷೆಯಿದೆ. ಡಿಸೆಂಬರ್‌ 17ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.

Story first published: Tuesday, December 15, 2020, 0:19 [IST]
Other articles published on Dec 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X