ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್: ಕಾಮೆಂಟೇಟರ್ಸ್ ಪಟ್ಟಿಯಲ್ಲಿ ಸಂಜಯ್ ಮಂಜ್ರೇಕರ್

India vs Australia: Sony Sports included Sanjay Manjrekar in the commentary panel

ಸಿಡ್ನಿ: ಭಾರತದ ಮಾಜಿ ಬ್ಯಾಟ್ಸ್‌ಮನ್, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಅವರು ಕಾಮೆಂಟರಿ ಬಾಕ್ಸ್‌ಗೆ ಮತ್ತೆ ಮರಳಿದ್ದಾರೆ. ನವೆಂಬರ್ 27ರಿಂದ ಆರಂಭವಾಗಲಿರುವ ಭಾರತ vs ಆಸ್ಟ್ರೇಲಿಯಾ ಸರಣಿಯ ವೇಳೆ ಮಂಜ್ರೇಕರ್ ಮತ್ತೆ ಕಾಮೆಂಟರಿ ನೀಡಲಿದ್ದಾರೆ. ಈ ಹಿಂದೆ ಮಂಜ್ರೇಕರ್ ಅವರನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು (ಬಿಸಿಸಿಐ) ಕಾಮೆಂಟರಿ ಪ್ಯಾನೆಲ್‌ನಿಂದ ಕಿತ್ತು ಹಾಕಿತ್ತು.

ಭಾರತದ ವೇಗಿ ಮೊಹಮ್ಮದ್ ಸಿರಾಜ್ ತಂದೆ ಮೊಹಮ್ಮದ್ ಘೌಸ್ ನಿಧನಭಾರತದ ವೇಗಿ ಮೊಹಮ್ಮದ್ ಸಿರಾಜ್ ತಂದೆ ಮೊಹಮ್ಮದ್ ಘೌಸ್ ನಿಧನ

13ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಸಂಜಯ್ ಮಂಜ್ರೇಕರ್ ಅವರನ್ನು ಬಿಸಿಸಿಐ ಕಾಮೆಂಟರಿಯಿಂದ ತೆಗೆದು ಹಾಕಿತ್ತು. 2019ರ ವಿಶ್ವಕಪ್‌ ವೇಳೆ ರವೀಂದ್ರ ಜಡೇಜಾ ವಿರುದ್ಧ ಮಂಜ್ರೇಕರ್ ಕಾಮೆಂಟ್ ಮಾಡಿದ್ದರು.

ತಂಡಕ್ಕೆ ಸ್ಮಿತ್ ಮರಳಿದ್ದು ಭಾರತಕ್ಕೆ ದೊಡ್ಡ ತಲೆನೋವಾಗಿದೆ: ಮ್ಯಾಕ್ಸ್‌ವೆಲ್ತಂಡಕ್ಕೆ ಸ್ಮಿತ್ ಮರಳಿದ್ದು ಭಾರತಕ್ಕೆ ದೊಡ್ಡ ತಲೆನೋವಾಗಿದೆ: ಮ್ಯಾಕ್ಸ್‌ವೆಲ್

ಕೋಲ್ಕತ್ತಾದಲ್ಲಿ ನಡೆದಿದ್ದ ಬಾಂಗ್ಲಾ ವಿರುದ್ಧದ ಚೊಚ್ಚಲ ಡೇ-ನೈಟ್ ಟೆಸ್ಟ್ ವೇಳೆಯೂ ಮಂಜ್ರೇಕರ್, ಹರ್ಷ ಭೋಗ್ಲೆ ವಿರುದ್ಧ ವಾಗ್ವಾದ ನಡೆಸಿದ್ದರು.

ಕಾಮೆಂಟರಿಯಿಂದ ಹೊರಬಿದ್ದಿದ್ದು

ಕಾಮೆಂಟರಿಯಿಂದ ಹೊರಬಿದ್ದಿದ್ದು

ಮಂಜ್ರೇಕರ್ ಬೇಜಾವಾಬ್ದಾರಿಯ ಕಾಮೆಂಟ್ ಕೇಳಿ ಅಸಮಾಧಾನಗೊಂಡಿದ್ದ ನೆಟ್ಟಿಗರು ಮಂಜ್ರೇಕರ್ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದ ಕಿತ್ತು ಹಾಕುವಂತೆ ಬಿಸಿಸಿಐ ಒತ್ತಾಯಿಸಿದ್ದರು. ಹೀಗಾಗಿ ಮಂಜ್ರೇಕರ್ ಕಾಮೆಂಟರಿಯಿಂದ ಹೊರ ಬಿದ್ದಿದ್ದರು. ಈಗ ಮಂಜ್ರೇಕರ್ ಮತ್ತೆ ಕಾಮೆಂಟರಿ ಬಾಕ್ಸ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ.

ಕಾಮೆಂಟೇಟರ್ಸ್ ಪಟ್ಟಿಯಲ್ಲಿ ಮಂಜ್ರೇಕರ್

ಕಾಮೆಂಟೇಟರ್ಸ್ ಪಟ್ಟಿಯಲ್ಲಿ ಮಂಜ್ರೇಕರ್

ಸೋನಿ ಪಿಕ್ಚರ್ಸ್ ಸ್ಪೋರ್ಟ್ಸ್ ನೆಟ್ವರ್ಕ್ (ಎಸ್‌ಪಿಎಸ್‌ಎನ್), ಭಾರತ-ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಪ್ರಕಟಿಸಿರುವ 22 ಮಂದಿ ಕಾಮೆಂಟೇಟರ್ಸ್ ಪಟ್ಟಿಯಲ್ಲಿ ಮಂಜ್ರೇಕರ್ ಹೆಸರೂ ಸೇರಿದೆ. ಮುಂಬರುವ ಶುಕ್ರವಾರದಿಂದ ಟೀಮ್ ಇಂಡಿಯಾದ ಅಂತಾರಾಷ್ಟ್ರೀಯ ಸ್ಪರ್ಧೆ ಮತ್ತೆ ಚಾಲನೆಗೊಳ್ಳಲಿದೆ.

ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿ

ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿ

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿರುವ ಟೀಮ್ ಇಂಡಿಯಾ ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ, ಮೂರು ಪಂದ್ಯಗಳ ಟಿ20ಐ ಸರಣಿ ಮತ್ತು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ನವೆಂಬರ್ 27ರಿಂದ ಒಡಿಐ ಸರಣಿಯೊಂದಿಗೆ ಪ್ರವಾಸ ಸರಣಿಗಳು ಆರಂಭಗೊಳ್ಳಲಿವೆ.

ಕಾಮೆಂಟೇಟರ್ಸ್ ಪಟ್ಟಿ

ಕಾಮೆಂಟೇಟರ್ಸ್ ಪಟ್ಟಿ

* ಇಂಗ್ಲಿಷ್ ಮತ್ತು ಹಿಂದಿ: ಅಜಿತ್ ಅಗರ್ಕಾರ್, ಸಂಜಯ್ ಮಂಜ್ರೇಕರ್, ಹರ್ಷ ಭೋಗ್ಲೆ, ಮುರಳಿ ಕಾರ್ತಿಕ್, ಅಜಯ್ ಜಡೇಜಾ.
* ಹಿಂದಿ: ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ವಿಜಯ್ ದಹಿಯಾ, ವಿವೇಕ್ ರಜ್ದಾನ್, ಜಹೀರ್ ಖಾನ್.
* ಇಂಗ್ಲಿಷ್: ಗ್ಲೆನ್ ಮೆಕ್‌ಗ್ರಾತ್ ಮತ್ತು ನಿಕ್ ನೈಟ್.
* ತೆಲುಗು: ಆರ್‌ಜೆ ಹೇಮಂತ್, ವಿಜಯ್ ಮಹಾವದಿ, ಜ್ಞಾನೇಶ್ವರ ರಾವ್, ಸಿ ವೆಂಕಟೇಶ್, ಇಲ್ಲೇಂಡುಲ ರಾಂಪ್ರಸಾದ್.
* ತಮಿಳು: ಟಿ ಅರಸು, ಶೇಷಾದ್ರಿ ಶ್ರೀನಿವಾಸನ್, ವಿದ್ಯುತ್ ಶಿವರಾಮಕೃಷ್ಣ, ಆರ್ ಸತೀಶ್, ನವೀನ್ ಶೌರ್.

Story first published: Saturday, November 21, 2020, 10:31 [IST]
Other articles published on Nov 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X