ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: 27ನೇ ಶತಕ ಸಿಡಿಸಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ಸ್ಮಿತ್

India vs Australia: steve smith century against india equals with virat kohli

ಮೊದಲೆರಡು ಟೆಸ್ಟ್‌ಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸ್ಟೀವ್ ಸ್ಮಿತ್ ಟೀಮ್ ಇಂಡಿಯಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಭರ್ಜರಿ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್ ಶತಕಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಸಾಧನೆಗೆ ಸಮನಾದ ಸಾಧನೆ ಮಾಡಿದ್ದಾರೆ.

ಭಾರತದ ವಿರುದ್ಧ ಸಿಡ್ನಿಯಲ್ಲಿ ಸ್ಟೀವ್ ಸ್ಮಿತ್ ಸಿಡಿಸಿದ ಶತಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ 27ನೇ ಶತಕ ಸಾಧನೆಯಾಗಿದೆ. ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಕೂಡ 27 ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಪ್ರಸಕ್ತ ಆಡುತ್ತಿರುವ ಕ್ರಿಕೆಟರ್‌ಗಳ ಪೈಕಿ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಅತಿ ಹೆಚ್ಚು ಟೆಸ್ಟ್ ಶತಕವನ್ನು ಬಾರಿಸಿದ ಆಟಗಾರರಾಗಿದ್ದಾರೆ.

ನಾನು ಆರ್ ಅಶ್ವಿನ್‌ಗೆ ಒತ್ತಡ ತರಲು ನೋಡುತ್ತಿದ್ದೇನೆ: ಸ್ಟೀವ್ ಸ್ಮಿತ್ನಾನು ಆರ್ ಅಶ್ವಿನ್‌ಗೆ ಒತ್ತಡ ತರಲು ನೋಡುತ್ತಿದ್ದೇನೆ: ಸ್ಟೀವ್ ಸ್ಮಿತ್

ಮೊದಲ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ 10 ರನ್‌ಗಳನ್ನು ಮಾತ್ರವೇ ಸಿಡಿಸಿದ್ದರು. ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಮಿತ್ ತಾನು ಎದುರಿಸಿದ 201ನೇ ಎಸೆತದಲ್ಲಿ ಮೂರು ರನ್ ಗಳಿಸುವ ಮೂಲಕ ಶತಕವನ್ನು ಪೂರೈಸಿದರು.

2019ರ ಸೆಪ್ಟೆಂಬರ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಮಿತ್ ಸಿಡಿಸುತ್ತಿರುವ ಮೊದಲ ಶತಕ ಇದಾಗಿದೆ. ಅಂದು ಸ್ಟೀವ್ ಸ್ಮಿತ್ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 211 ರನ್ ಸಿಡಿಸಿದ್ದರು. ಮತ್ತೊಂದು ಸಂಗತಿಯೆಂದರೆ ಕಳೆದ ಏಳು ಟೆಸ್ಟ್ ಪಂದ್ಯಗಳ ಬಳಿಕ ಆಸ್ಟ್ರೇಲಿಯಾದ ಆಟಗಾರನೋರ್ವ ಸಿಡಿಸುತ್ತಿರುವ ಮೊದಲ ಶತಕ ಇದಾಗಿದೆ.

ಕ್ವಾರಂಟೈನ್ ನಿಯಮ ಸಡಿಲಿಸುವಂತೆ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಪತ್ರಕ್ವಾರಂಟೈನ್ ನಿಯಮ ಸಡಿಲಿಸುವಂತೆ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಪತ್ರ

ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ ಹಿನ್ನೆಲೆಯಲ್ಲಿ ಸ್ಮಿತ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಹೀಗಾಗಿ ಸ್ಮಿತ್ ಸಾಕಷ್ಟು ಒತ್ತಡದಲ್ಲಿದ್ದರು. ಆದರೆ ಮೂರನೇ ಟೆಸ್ಟ್‌ನಲ್ಲಿ ಕಣಕ್ಕಿಳಿದು ಆತ್ಮ ವಿಶ್ವಾಸದ ಪ್ರದರ್ಶನವನ್ನು ನೀಡಿ ಶತಕವನ್ನು ಪೂರೈಸಿದ್ದಾರೆ.

Story first published: Friday, January 8, 2021, 12:13 [IST]
Other articles published on Jan 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X