ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ ದಿಗ್ಗಜ ಇಯಾನ್ ಚಾಪೆಲ್‌ಗೆ ತಿರುಗೇಟು ನೀಡಿದ ಸ್ಟೀವ್ ಸ್ಮಿತ್

India vs Australia: Steve Smith reacted at Ian Chappell statement

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಇಯಾನ್ ಚಾಪೆಲ್ ಹೇಳಿಕೆಗಳು ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್‌ಗೆ ಕಿರಿಕಿರಿಯನ್ನುಂಟು ಮಾಡಿದೆ. ಹೀಗಾಗಿ ಇಯಾನ್ ಚಾಪೆಲ್ ಅವರ ಹೇಳಿಯ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಅಸಮಾಧಾನದಿಂದ ಸ್ಟೀವ್ ಸ್ಮಿತ್ ತಿರುಗೇಟು ನೀಡಿದ್ದಾರೆ.

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಶಾರ್ಟ್ ಪಿಚ್ ಎಸೆತಗಳಿಂದ ರಕ್ಷಿಸಿಕೊಳ್ಳಲು ನಿಯಮಗಳನ್ನು ರೂಪಿಸಬೇಕು ಎಂದಿದ್ದರು. ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಯ ಸಂದರ್ಭದಲ್ಲಿ ಕೆಲ ಆಟಗಾರರು ಶಾರ್ಟ್‌ಪಿಚ್ ಎಸೆತಗಳ ಏಟು ತಿಂದಿದ್ದು ಗಾಯಗೊಂಡು ಹೊರಗುಳಿದ ಸಂದರ್ಭಗಳೂ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಯಾನ್ ಚಾಪೆಲ್ ಪ್ರತಿಕ್ರಿಯಿಸಿದ್ದರು.

ಆಸಿಸ್ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ಇಯಾನ್ ಚಾಪೆಲ್ ಈ ಬಗ್ಗೆ ಯಾವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಚಾಪೆಲ್ ಅಭಿಪ್ರಾಯಕ್ಕೆ ಸ್ಮಿತ್ ಪ್ರತಿಕ್ರಿಯೆ ಏನಾಗಿದೆ? ಮುಂದೆ ಓದಿ.

ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಟೆಸ್ಟ್‌ ಕ್ಯಾಪ್‌ ಭರ್ಜರಿ ಬೆಲೆಗೆ ಮಾರಾಟಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಟೆಸ್ಟ್‌ ಕ್ಯಾಪ್‌ ಭರ್ಜರಿ ಬೆಲೆಗೆ ಮಾರಾಟ

ವಿಲಕ್ಷಣ ಅಭಿಪ್ರಾಯ

ವಿಲಕ್ಷಣ ಅಭಿಪ್ರಾಯ

ಆಸ್ಟ್ರೇಲಿಯಾದ ಮಾಜಿ ನಾಯಕನ ಈ ಅಭಿಪ್ರಾಯ ಸ್ಟೀವ್ ಸ್ಮಿತ್ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿ ಪಂದ್ಯದ ಬಳಿಕವೂ ಚಾಪೆಲ್ ಈ ರೀತಿಯಾಗಿ ಹೇಳಿಕೆಗಳನ್ನು ನೀಡುತ್ತಾರೆ. ಇದು ವಿಲಕ್ಷಣವಾದ ಅಭಿಪ್ರಾಯವಾಗಿದ್ದು ಶಾರ್ಟ್ ಪಿಚ್ ಎಸೆತಗಳು ಪಂದ್ಯದ ಒಂದು ಭಾಗವಾಗಿರುತ್ತದೆ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ರಕ್ಷಣೆ

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ರಕ್ಷಣೆ

ಕ್ರಿಕೆಟ್‌ನ ಅತ್ಯುತ್ತಮ ತಜ್ಞರಲ್ಲಿ ಇಯಾನ್ ಚಾಪೆಲ್ ಒಬ್ಬರಾಗಿದ್ದು ಬೌನ್ಸರ್‌ಗಳನ್ನು ನಿಷೇಧಿಸಬೇಕು ಎಂಬ ಅಭಿಪ್ರಾಯಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ ಪ್ರಸಕ್ತ ಸರಣಿಯಲ್ಲಿ ತಲೆಗೆ ಏಟು ಹಾಗೂ ಕನ್ಕುಶನ್ ಸಂಬಂಧಿತ ಘಟನೆಗಳ ಹಿನ್ನೆಲೆಯಲ್ಲಿ ಕೆಲ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ರಕ್ಷಣೆಗಾಗಿ ಕ್ರಿಕೆಟ್ ನಿಯಮಗಳನ್ನು ಬಲಪಡಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.

ಉತ್ತಮ ಕದನವಿದೆ

ಉತ್ತಮ ಕದನವಿದೆ

ಪ್ರತಿ ಪಂದ್ಯದ ಬಳಿಕವೂ ಇಯಾನ್ ಚಾಪೆಲ್ ಇತ್ತೀಚೆಗೆ ಈ ರೀತಿಯ ವಿಲಕ್ಷಣ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕೆಲ ಅತ್ಯುತ್ತಮ ಹೋರಾಟಗಳನ್ನು ಕಂಡಿದ್ದೇವೆ. ಹಾಗಾಗಿ ಅದನ್ನು ಕಾನೂನುಬಾಹಿರ ಎಸೆತವನ್ನಾಗಿ ಮಾಡಬೇಕು ಎಂದು ನನಗೆ ಅನಿಸುತ್ತಿಲ್ಲ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಸ್ವಿಚ್ ಹಿಟ್ ಬಗ್ಗೆಯೂ ಚರ್ಚೆಗೆ ಚಾಪೆಲ್ ನಾಂದಿ

ಸ್ವಿಚ್ ಹಿಟ್ ಬಗ್ಗೆಯೂ ಚರ್ಚೆಗೆ ಚಾಪೆಲ್ ನಾಂದಿ

ಇಯಾನ್ ಚಾಪೆಲ್ ಇತ್ತೀಚೆಗೆ ಸ್ವಿಚ್ ಹಿಟ್ ಬಗ್ಗೆಯೂ ಪ್ರತಿಕ್ರಿಯಿಸಿ ವಿರೋಧವನ್ನು ವ್ಯಕ್ತಪಡಿಸಿದ್ದರು. ಸ್ವಿಚ್ ಹಿಟ್ ಒಂದು ನ್ಯಾಯಯುತವಲ್ಲದ ತಂತ್ರವಾಗಿದ್ದು ಕೆಲ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಅದನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ ಎಂದಿದ್ದರು. ಗ್ಲೆನ್ ಮ್ಯಾಕ್ಸ್‌ವೆಲ್ ಭಾರತದ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಪರಿಣಾಮಕಾರಿಯಾಗಿ ಸ್ವಿಚ್ ಹಿಟ್ ಬಳಸಿಕೊಂಡ ಬಳಿಕ ಈ ಅಭಿಪ್ರಾಯವನ್ನು ಚಾಪೆಲ್ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿತ್ತು.

Story first published: Tuesday, December 22, 2020, 15:25 [IST]
Other articles published on Dec 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X