ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಗಬ್ಬಾ'ದಲ್ಲಿ ಮನಗೆದ್ದ ಭಾರತೀಯ ಬಡ ಆಟಗಾರರ ಮನಮುಟ್ಟುವ ಕತೆ!

India vs Australia: Story of poor cricketers beating Australia at Gabba

ಬ್ರಿಸ್ಬೇನ್: ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಭಾರತ ತಂಡ ಅಪರೂಪದ ಮೈಲಿಗಲ್ಲು ಸ್ಥಾಪಿಸಿದೆ. ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 3 ವಿಕೆಟ್ ರೋಚಕ ಗೆಲುವನ್ನಾಚರಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದಿರುವ ಅಜಿಂಕ್ಯ ರಹಾನೆ ಪಡೆ ಇತಿಹಾಸ ನಿರ್ಮಿಸಿದೆ. ಗಬ್ಬಾ ಸ್ಟೇಡಿಯಂನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದು ಭಾರತದ ಯುವ ತಂಡ.

 ಭಾರತ vs ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ ಐದು ಅಂಶಗಳು ಭಾರತ vs ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ ಐದು ಅಂಶಗಳು

ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಒಂದಿಷ್ಟು ಯುವ ಆಟಗಾರರು ಬಡ ಕುಟುಂಬವರು ಅನ್ನೋದು ಗೊತ್ತೇ? ಟಿ ನಟರಾಜನ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಶಾರ್ದೂಲ್ ಠಾಕೂರ್ ಇವರೆಲ್ಲ ಯುವ ತಂಡದ ಆಟಗಾರರು ಅನ್ನೋದಷ್ಟೇ ಅಲ್ಲ, ಬಡ ಕುಟುಂಬದಿಂದ ಬಂದವರು ಕೂಡ.

'ಭಾರತದೆದುರು ಸರಣಿ ಡ್ರಾಗೊಂಡರೆ ಅದು ಸೋಲಿಗಿಂತಲೂ ಕೆಟ್ಟದ್ದು!''ಭಾರತದೆದುರು ಸರಣಿ ಡ್ರಾಗೊಂಡರೆ ಅದು ಸೋಲಿಗಿಂತಲೂ ಕೆಟ್ಟದ್ದು!'

ಮೇಲೆ ಹೆಸರಿಸಿದವರೆಲ್ಲ ಒಂದು ಕಾಲದಲ್ಲಿ ಟಿವಿಯಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಕಂಡು ಖುಷಿ ಪಡುತ್ತಿದ್ದವರು, ಅಥವಾ ಸಯ್ಯದ್ ಮುಷ್ತಾಕ್ ಅಲಿಯಂಥ ದೇಸಿ ಕ್ರಿಕೆಟ್‌ನಲ್ಲಿ ಖಾಲಿ ಮೈದಾನದಲ್ಲಿ ಆಡುತ್ತಿದ್ದವರು. ಆದರೆ ಈಗ ದೇಶವೇ ಹೆಮ್ಮೆ ಪಡುವಂತ ಸಾಧನೆಗೆ ಕಾರಣರಾಗಿದ್ದಾರೆ.

ಟಿ ನಟರಾಜನ್

ಟಿ ನಟರಾಜನ್

ತಮಿಳುನಾಡಿನ ಸೇಲಂನಲ್ಲಿರುವ ಚಿನ್ನಪಂಪಟ್ಟಿಯವರಾದ ವೇಗಿ ಟಿ ನಟರಾಜನ್ ಮತ್ತು ಬ್ರಿಸ್ಬೇನ್‌ನ ಗಬ್ಬಾದಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮಧ್ಯಮ ವರ್ಗದ ಕುಟುಂಬದ ನಟರಾಜನ್‌ಗೆ ಯುಎಇಯಲ್ಲಿ ನಡೆದಿದ್ದ ಐಪಿಎಲ್ ವೇಳೆ ಹೆಣ್ಣು ಮಗು ಜನಿಸಿತ್ತು. ಆದರೆ ಬಯೋಬಬಲ್ ನಿಯಮದಿಂದಾಗಿ ನಟರಾಜನ್‌ಗೆ ಭಾರತಕ್ಕೆ ಜವಜಾತ ಮಗುವಿನ ಮುಖ ನೋಡಲಾಗಿರಲಿಲ್ಲ. ಇದಕ್ಕೆ ಬದುಕಿನ ಅನಿವಾರ್ಯತೆಯೂ ಕಾರಣ ಅನ್ನೋದು ನಾವು ನೆನಪಿಡಬೇಕು.

ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್

ಭಾರತದ ವೇಗಿ ಮೊಹಮ್ಮದ್ ಸಿರಾಜ್ ಒಬ್ಬ ಆಟೋ ಡ್ರೈವರ್‌ನ ಮಗ. ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ಸಿರಾಜ್ ಅವರ ತಂದೆ ಅನಾರೋಗ್ಯದಿಂದ ಅಸುನೀಗಿದ್ದರು. ಸಿರಾಜ್‌ ಭಾರತಕ್ಕೆ ವಾಪಸ್ಸಾಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಆದರೆ, ದೇಶಕ್ಕಾಗಿ ಸಾಧನೆ ಮಾಡು ಎನ್ನುವ ತಂದೆಯ ಆಸೆಯನ್ನು ಸಾಕಾರಗೊಳಿಸುವ ಕಾರಣಕ್ಕಾಗಿ ಸಿರಾಜ್ ಆಸ್ಟ್ರೇಲಿಯಾದಲ್ಲೇ ಇದ್ದು ತಂಡಕ್ಕೆ ನೆರವಾಗುವ ನಿರ್ಧಾರ ತಾಳಿದರು. ಸಿರಾಜ್‌ ವಿರುದ್ಧ ಆಸ್ಟ್ರೇಲಿಯಾ ಪ್ರೇಕ್ಷಕರು ಜನಾಂಗೀಯ ನಿಂದನೆಯೂ ಮಾಡಿದ್ದರು. ಆದರೆ ಸಿರಾಜ್ ಅವೆಲ್ಲವನ್ನೂ ಸಹಿಸಿ ಪ್ರವಾಸ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪಾದಾರ್ಪಣೆ ಟೆಸ್ಟ್ ಸರಣಿಯಲ್ಲೇ ಒಟ್ಟು 13 ವಿಕೆಟ್ ಉರುಳಿಸಿ ದಾಖಲೆ ನಿರ್ಮಿಸಿದ್ದಾರೆ.

ವಾಷಿಂಗ್ಟನ್ ಸುಂದರ್

ವಾಷಿಂಗ್ಟನ್ ಸುಂದರ್

ತಮಿಳುನಾಡಿನವರೇ ಆದ ಯುವ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಗಬ್ಬಾದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಸುಂದರ್ ಆಲ್‌ ರೌಂಡರ್‌ ಆಟಗಾರನಾಗಿ ಉತ್ತಮ ಪ್ರದರ್ಶನವನ್ನೂ ನೀಡಿದರು. ಅಂದ್ಹಾಗೆ ವಾಷಿಂಗ್ಟನ್ ಸುಂದರ್‌ಗೆ ಒಂದು ಕಿವಿ ಕೇಳಿಸುವುದಿಲ್ಲ ಅನ್ನೋ ಸಂಗತಿ ಗೊತ್ತೇ? ಬಾಲ್ಯದಿಂದಲೂ ಸುಂದರ್‌ಗೆ ಈ ಸಮಸ್ಯೆಯಿತ್ತಂತೆ. 4-5 ವರ್ಷದವರಿದ್ದಾಗ ಸುಂದರ್ ತನಗೆ ಒಂದು ಕಿವಿ ಕೇಳಿಸುವುದಿಲ್ಲ ಎಂದು ಹೆತ್ತವರಿಗೆ ತಿಳಿಸಿದರಂತೆ. ಹೆತ್ತವರು ವೈದ್ಯರ ಹತ್ತಿರ ಕರೆದೊಯ್ದರಂತೆ. ಆದರೂ ಸಮಸ್ಯೆ ಪರಿಹಾರ ಕಾಣಲಿಲ್ಲವಂತೆ.

ಶಾರ್ದೂಲ್ ಠಾಕೂರ್

ಶಾರ್ದೂಲ್ ಠಾಕೂರ್

ಗಬ್ಬಾ ಸ್ಟೇಡಿಯಂನಲ್ಲಿ ಮಿನುಗಿದ ಮತ್ತೊಬ್ಬ ಆಟಗಾರನೆಂದರೆ ಅದು ಶಾರ್ದೂಲ್ ಠಾಕೂರ್. ದೇಸಿ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುವ ಠಾಕೂರ್ ಸ್ಟೋರಿ ಕೂಡ ಕಡಿಮೆಯೇನಿಲ್ಲ. ಬಾಲ್ಯದಲ್ಲಿ ಶಾರ್ದೂಲ್ ಬೊಜ್ಜಿನ ಖಾಯಿಲೆಯಿಂದ ಬಳಲಿದ್ದರು. ಆ ಸಮಯದಲ್ಲಿ ಠಾಕೂರ್‌ಗೆ ಸಚಿನ್ ತೆಂಡೂಲ್ಕರ್ ಸಲಹೆ ನೀಡಿದ್ದರು. ಫೈನ್ ಆರ್ಟ್ಸ್‌ ಮತ್ತು ವೇಗದ ಬೌಲಿಂಗ್‌ನತ್ತ ಠಾಕೂರ್ ಅವರು ತೊಡಗಿಸಿಕೊಳ್ಳುವಂತೆ ಸಚಿನ್ಮಾಡಿದರು. ಅದೇ ಠಾಕೂರ್ ಇಂದು ಗಬ್ಬಾದಲ್ಲಿ ಸಾಧನೆ ಮಾಡಿದ್ದಾರೆ.

ನವದೀಪ್ ಸೈನಿ

ನವದೀಪ್ ಸೈನಿ

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ವೇಗಿ ನವದೀಪ್ ಸೈನಿ ಕೂಡ ಮಾಧ್ಯಮ ಕುಟುಂಬದವರು. ಅವರ ತಂದೆ ಸರ್ಕಾರಿ ಚಾಲಕ. ಕ್ರಿಕೆಟ್ ಪ್ರಯಾಣದ ಆರಂಭದಲ್ಲಿ ಸೈನಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯವೊಂದರಲ್ಲಿ 300 ರೂ.ನಂತೆ ಆಡುತ್ತಿದ್ದರು. ಸೈನಿ ಪ್ರತಿಭೆ ಗಮನಿಸಿದ ಮಾಜಿ ಬ್ಯಾಟ್ಸ್‌ಮನ್‌ ಗೌತಮ್ ಗಂಭೀರ್ ಸೈನಿಗೆ ಪ್ರೋತ್ಸಾಹಿಸಿದರು. ಆ ಬಳಿಕ ಸೈನಿ ದೆಹಲಿ ದೇಸಿ ತಂಡದಲ್ಲಿ ಆಡತೊಡಗಿದರು. ಗಬ್ಬಾದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ 12.5 ಓವರ್‌ ಎಸೆದು ಗಾಯಕ್ಕೀಡಾಗಿ ಸೈನಿ ಆ ಬಳಿಕ ಹೊರಬಿದ್ದರಾದರೂ ತಂಡಕ್ಕೆ ಅವರ ಕೊಡುಗೆಯನ್ನು ಸ್ಮರಿಸಲೇ ಬೇಕು.

Story first published: Tuesday, January 19, 2021, 19:12 [IST]
Other articles published on Jan 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X