ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Aus: ರೋಹಿತ್ ಶರ್ಮಾ ಆಡುವ ಬಗ್ಗೆ ಇನ್ನೂ ಮುಗಿದಿಲ್ಲ ಗೊಂದಲ!

India vs Australia: The dilemma of vice-captain Rohit Sharmas batting spot at Sydney

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸ ಸರಣಿಗಾಗಿ ಟೀಮ್ ಇಂಡಿಯಾ ಸೇರಿಕೊಂಡಿರುವ ಭಾರತದ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾಗೆ ಉಪನಾಯಕನ ಸ್ಥಾನ ಲಭಿಸಿದೆ. ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಬದಲಿಗೆ ಉಪನಾಯಕ ಜವಾಬ್ದಾರಿ ಶರ್ಮಾ ವಹಿಸಿಕೊಳ್ಳಲಿದ್ದಾರೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿರುವುದರಿಂದ ಆಸ್ಟ್ರೇಲಿಯಾ-ಭಾರತ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಇನ್ನಷ್ಟು ಕುತೂಹಲ ಮೂಡಿಸಿದೆ.

ಐತಿಹಾಸಿಕ ದಾಖಲೆ ನಿರ್ಮಿಸಿದ ಪಾಕಿಸ್ತಾನ ಕ್ರಿಕೆಟರ್ ಫವಾದ್ ಆಲಂ!ಐತಿಹಾಸಿಕ ದಾಖಲೆ ನಿರ್ಮಿಸಿದ ಪಾಕಿಸ್ತಾನ ಕ್ರಿಕೆಟರ್ ಫವಾದ್ ಆಲಂ!

'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಸೇರಿಕೊಂಡಿರುವುದು ಭಾರತ ತಂಡಕ್ಕೆ ಆನೆ ಬಲ ತಂದಿದೆ. ಹಾಗಂತ ರೋಹಿತ್ ಬ್ಯಾಟಿಂಗ್‌ ಮಾಡುವ ಬಗ್ಗೆ ಹೊಸದೊಂದು ಗೊಂದಲ ಶುರುವಾಗಿದೆ. ಅದು ಶರ್ಮಾ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ. ರೋಹಿತ್ ಆರಂಭಿಕರಾಗಿ ಆಡಬೇಕೋ ಬೇಡವೋ ಎನ್ನುವ ಬಗ್ಗೆ.

ಆಸೀಸ್ ವಿರುದ್ಧದ 3ನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳು ಪ್ರಕಟ!ಆಸೀಸ್ ವಿರುದ್ಧದ 3ನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳು ಪ್ರಕಟ!

ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಡಿಸೆಂಬರ್ 7ರ ಗುರುವಾರ 5 AMಗೆ ಆರಂಭಗೊಳ್ಳಲಿದೆ.

ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್

ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್

ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿಶ್ವದ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ರೋಹಿತ್ ಕೂಡ ಒಬ್ಬರು. ಸದ್ಯ ಅಲ್ಲದಿದ್ದರೂ, ರೋಹಿತ್ ಆರಂಭಿಕರಾಗಿದ್ದುಕೊಂಡೇ ಸ್ಫೋಟಕ ಬ್ಯಾಟಿಂಗ್ ನಡೆಸಿದಿದೆ. ಆದರೆ ಟೆಸ್ಟ್‌ನಲ್ಲಿ ರೋಹಿತ್ ಪಂದ್ಯಗಳನ್ನಾಡಿದ್ದು ಕಡಿಮೆ. ಅದರಲ್ಲೂ ಆರಂಭಿಕರಾಗಿ ಆಡಿದ್ದು ಇನ್ನೂ ಕಡಿಮೆ. ಆದರೆ ಆರಂಭಿಕರಾಗಿ ಆಡಿದ ಮೂರೇ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ 3 ಶತಕ

ದಕ್ಷಿಣ ಆಫ್ರಿಕಾ ವಿರುದ್ಧ 3 ಶತಕ

2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್‌ ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿದ್ದ ಶರ್ಮಾ 132.25ರ ಸರಾಸರಿಯಂತೆ 529 ರನ್ ಬಾರಿಸಿದ್ದರು. ಇದರಲ್ಲಿ 3 ಶತಕಗಳಲ್ಲದೆ 212 ವೈಯಕ್ತಿಕ ಅತ್ಯಧಿಕ ರನ್ ಕೂಡ ಸೇರಿತ್ತು. ಆದರೆ ರೋಹಿತ್ ಟೆಸ್ಟ್‌ ಆಡಿ ಬಹಳಷ್ಟು ಅಂತರವಾಗಿರುವುದರಿಂದ ಆಸ್ಟ್ರೇಲಿಯಾ ವಿರುದ್ಧ ಮೂರನೇ ಪಂದ್ಯದಲ್ಲಿ ಆರಂಭಿಕರಾಗಿ ಆಡಿಸಬೇಕೋ ಬೇಡವೋ ಎಂಬ ಗೊಂದಲ ಶುರುವಾಗಿದೆ.

ಓಪನರ್ ಆಗಿ ಬರ್ತಾರ ರೋಹಿತ್?

ಓಪನರ್ ಆಗಿ ಬರ್ತಾರ ರೋಹಿತ್?

ರೋಹಿತ್ ಟೆಸ್ಟ್‌ನಲ್ಲಿ ಆರಂಭಿಕರಾಗಿ ಬ್ಯಾಟಿಂಗ್‌ ಆಡಿದ್ದು ಕಡಿಮೆ. 7 ಅಥವಾ 5ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಡಿದ್ದೇ ಹೆಚ್ಚು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ತೃತೀಯ ಟೆಸ್ಟ್‌ನಲ್ಲಿ ರೋಹಿತ್ ಯಾವ ಕ್ರಮಾಂಕದಲ್ಲಿ ಬರಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ. ರೋಹಿತ್ ಆರಂಭಿಕರಾಗಿ ಇಳಿದರೆ ಅವರಿಗೆ ಜೊತೆಯಾಗಿ ಯಾರು ಬರಲಿದ್ದಾರೆ ಅನ್ನೋದು ಕಾದು ನೋಡಬೇಕಾಗಿದೆ.

Story first published: Saturday, January 2, 2021, 12:54 [IST]
Other articles published on Jan 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X