ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯನ್ನು ಜಂಪಾ ಔಟ್ ಮಾಡಿದ್ದು ಭಾರತದ ಮಾಜಿ ಕ್ರಿಕೆಟಿಗನ ನೆರವಿನಿಂದ!

India vs Australia: This former India player helped Zampa dismiss Kohli

ನವದೆಹಲಿ, ಮಾರ್ಚ್ 4: ಹೈದರಾಬಾದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪ್ರವಾಸಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಆಸೀಸ್ ಸ್ಪಿನ್ನರ್ ಆದಂ ಜಂಪಾ ಔಟ್ ಮಾಡಿದ್ದು ಭಾರತದ ಮಾಜಿ ಕ್ರಿಕೆಟಿಗರೊಬ್ಬರ ನೆರವಿನಿಂದ. ಇದನ್ನು ಸ್ವತಃ ಜಂಪಾ ಅವರೇ ಹೇಳಿಕೊಂಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ದ್ವಿತೀಯ ಏಕದಿನಕ್ಕೆ ಸಂಭಾವ್ಯ XI ಭಾರತ ತಂಡಭಾರತ vs ಆಸ್ಟ್ರೇಲಿಯಾ: ದ್ವಿತೀಯ ಏಕದಿನಕ್ಕೆ ಸಂಭಾವ್ಯ XI ಭಾರತ ತಂಡ

ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ (ಮಾರ್ಚ್ 2) ನಡದಿದ್ದ ಪಂದ್ಯದಲ್ಲಿ ಕೊಹ್ಲಿ ಅವರನ್ನು ಜಂಪಾ ಎಲ್‌ಬಿಡಬ್ಲ್ಯೂ ಮೂಲಕ ಪೆವಿಲಿಯನ್‌ಗೆ ಅಟ್ಟಿದ್ದರು. ಜಂಪಾ ಎಸೆತವನ್ನು ನಿರ್ಧರಿಸುವಲ್ಲಿ ಎಡವಿದ್ದ ಕೊಹ್ಲಿ 44 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಪರಿಣಾಮ ಭಾರತ ಗೆಲುವಿಗಾಗಿ ಹೆಣಗಾಡಬೇಕಾಯ್ತು ಕೂಡ!

ಹೈದರಾಬಾದ್ ಪಂದ್ಯವನ್ನು ಆಸೀಸ್ 6 ವಿಕೆಟ್‌ಗಳಿಂದ ಸೋತಿತ್ತಾದರೂ ಭಾರತವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಹೇಗೆ ಸಾಧ್ಯವಾಯಿತು ಎಂಬ ಗುಟ್ಟನ್ನು ಆದಂ 'ಕ್ರಿಕೆಟ್ ಡಾಟ್ ಕಾಮ್' ಜೊತೆ ಹೇಳಿಕೊಂಡಿದ್ದಾರೆ. ಮುಖ್ಯವಾಗಿ ಕೊಹ್ಲಿಯನ್ನು ಔಟಾಗಿಸಿದ್ದು ಹೇಗೆಂಬುದನ್ನು ತಿಳಿಸಿದ್ದಾರೆ.

'ಅಭ್ಯಾಸದ ವೇಳೆ ನನಗೆ ಭಾರತದ ಮಾಜಿ ಆಟಗಾರ, ಸ್ಪಿನ್ ಕೋಚ್ ಶ್ರೀಧರನ್ ಶ್ರೀರಾಮ್ ಹೊಸ ಸ್ಟೈಲೊಂದನ್ನು ಕಲಿಸಿಕೊಟ್ಟರು. ಅದರಂತೆ ನಾನು ಆಸ್ಟ್ರೇಲಿಯಾದಲ್ಲಿ ಎಸೆಯುತ್ತಿದ್ದ ಸ್ಪಿನ್‌ಗೆ ಕೊಂಚ ಬದಲಾವಣೆ ಮಾಡಿಕೊಂಡೆ. ಇಲ್ಲಿ ನಾನು ಸ್ಲೈಡರ್ ಮತ್ತು ಲೆಗ್ ಸ್ಪಿನ್ ಶೈಲಿಯನ್ನು ಪ್ರಯೋಗಿಸಿದೆ. ಅದು ಕೆಲಸಕ್ಕೆ ಬಂತು ಎಂದು ಜಂಪಾ ವಿವರಿಸಿದರು (ಮೇಲಿನ ಟ್ವಿಟರ್ ನಲ್ಲಿ ಶ್ರೀಧರನ್ ಶ್ರೀರಾಮ್ ಅವರನ್ನು ಕಾಣಬಹುದು)

Story first published: Monday, March 4, 2019, 19:05 [IST]
Other articles published on Mar 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X