ಟೀಕೆಗಳನ್ನು ಸ್ಟೀವ್ ಸ್ಮಿತ್ ಸಮರ್ಥವಾಗಿ ಎದುರಿಸುತ್ತಾನೆ: ಸ್ಮಿತ್ ಬೆಂಬಲಕ್ಕೆ ನಿಂತ ನಾಯಕ ಟಿಮ್ ಪೈನ್

ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರ ಸ್ಟೀವ್ ಸ್ಮಿತ್ ವಿವಾದವೊಂದಕ್ಕೆ ಸಿಲುಕಿ ನೆಟ್ಟಿಗರು ಹಾಗೂ ಮಾಜಿ ಆಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಭಾರತೀಯ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಬ್ಯಾಟಿಂಗ್ ಗಾರ್ಡ್ ಗೆರೆಯನ್ನು ಅಳಿಸಿರುವುದು ವಿಕೆಟ್ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಸ್ಟೀವ್ ಸ್ಮಿತ್ ಈ ರೀತಿಯಲ್ಲಿ ವರ್ತನೆ ಮಾಡಿರುವುದು ದೊಡ್ಡ ಮಟ್ಟದಲ್ಲಿ ಟೀಕೆಗೆ ಗುರಿಯಾಗುತ್ತಲೇ ಸ್ವತಃ ಸ್ಮಿತ್ ಈ ಬಗ್ಗೆ ಪ್ರತಿಕ್ರಿಯಿಸಿ ತನ್ನನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ನಾನು ಶ್ಯಾಡೋ ಬ್ಯಾಟಿಂಗ್ ನಡೆಸುತ್ತಾ ಅಭ್ಯಾಸ ಬಲದಿಂದ ಮಧ್ಯದ ರೇಖೆಯನ್ನು ಎಳೆದಿದ್ದೇನೆ ಎಂದು ಸ್ಮಿತ್ ಹೇಳಿಕೊಂಡಿದ್ದರು. ಇದೀಗ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ಆಸಿಸ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಬೆಂಬಲಕ್ಕೆ ಬಂದಿದ್ದಾರೆ.

ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 640 ಮಿಲಿಯನ್‌ ಡಾಲರ್‌

ತಾನು ಅಂಗಳದಲ್ಲಿ ಸಾಮಾನ್ಯವಾಗಿ ಮಾಡುವ ವರ್ತನೆ ಬೇರೆಯದ್ದೇ ರೀತಿಯಲ್ಲಿ ಬಿಂಬಿತವಾಗಿರುವುದರಿಂದ ಸ್ಟೀವ್ ಸ್ಮಿತ್ ಸಾಕಷ್ಟು ಅಸಮಾಧಾನಗೊಂಡಿದ್ದಾರೆ ಎಂದು ಆಸಿಸ್ ನಾಯಕ ಟಿಮ್ ಪೈನ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತನ್ನ ವಿರುದ್ಧ ಬಂದಿರುವ ಟೀಕೆಗಳಿಗೆ ಸೂಕ್ತವಾದ ರೀತಿಯಲ್ಲಿ ಉತ್ತರವನ್ನು ನೀಡಲಿದ್ದಾರೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

"ಸ್ಟೀವ್ ಸ್ಮಿತ್ ಉತ್ತಮ ಮಾನಸಿಕ ಚೌಕಟ್ಟನ್ನು ಹೊಂದಿರುವವರು. ಕಳೆದ ಮೂರು ವರ್ಷಗಳಲ್ಲಿ ಅವರು ಯಾವ ರೀಗಿ ಸಾಗಿ ಬಂದಿದ್ದಾರೆ ಎಂದು ನಾವೆಲ್ಲಾ ಕಂಡಿದ್ದೇವೆ. ಆತ ಈಗ ಮಾನಸಿಕವಾಗಿ ಸಾಕಷ್ಟು ದೃಢವಾಗಿದ್ದು ತುಂಬಾ ಕಠಿಣರಾಗಿದ್ದಾರೆ. ಕೆಲ ಬಾರಿ ತಾನು ಟೀಕೆಗಳಿಗೆ ಗುರಿಯಾಗುತ್ತೇನೆ ಎಂದು ಅವರು ಅರಿತುಕೊಂಡಿದ್ದಾರೆ ಮತ್ತು ಅದನ್ನು ಅವರು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಲಿದ್ದಾರೆ" ಎಂದು ಟಿಮ್ ಐನ್ ಹೇಳಿಕೆಯನ್ನು ನೀಡಿದ್ದಾರೆ.

ಗಾಬಾ ಟೆಸ್ಟ್: ಆಸ್ಟ್ರೇಲಿಯಾದ 32 ವರ್ಷಗಳ ಸೋಲಿಲ್ಲದ ದಾಖಲೆಗೆ ಅಡ್ಡಿಯಾಗುತ್ತಾ ರಹಾನೆ ಪಡೆ

ಆರಂಭದ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ ಕೇವಲ 10 ರನ್ ಗಳಿಸಲು ಮಾತ್ರವೇ ಶಕ್ತರಾಗಿದ್ದು ತನ್ನ ಫಾರ್ಮ್ ಬಗ್ಗೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಆದರೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ ಮೊದಲ ಇನ್ನಿಂಗ್ಸ್‌ನಲ್ಲಿ 131 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 81 ರನ್ ಗಳಿಸುವ ಮೂಲಕ ಬ್ಯಾಟ್‌ನ ಮೂಲಕ ಟೀಕಾಕಾರರಿಗೆ ಪ್ರತಿಕ್ರಿಯಿಸಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, January 14, 2021, 14:31 [IST]
Other articles published on Jan 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X