ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದನ್ನು ನಂಬುವುದು ಕಠಿಣ : ಪಂದ್ಯ ಡ್ರಾ ಬಳಿಕ ಆಸಿಸ್ ನಾಯಕನ ಪ್ರತಿಕ್ರಿಯೆ

India vs australia: Tim Paine reaction for sydney drawn

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಪಂದ್ರ ಡ್ರಾ ಫಲಿತಾಂಶ ಕಂಡಿದೆ. ಪಂದ್ಯದ ಮುಕ್ತಾಯದ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಐದನೇ ದಿನ ನಡೆದಿರುವುದನ್ನು ನಂಬುವುದು ಕಠಿಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಫಲಿತಾಂಶದ ಬಗ್ಗೆ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಬೌಲರ್‌ಗಳನ್ನು ಹೊಗಳಿದ್ದಾರೆ. ಆಸ್ಟ್ರೇಲಿಯಾ ಬೌಲರ್‌ಗಳು ವಿಕೆಟ್ ಪಡೆಯುವಂತಾ ಅವಕಾಶವನ್ನು ಸೃಷ್ಟಿಸಿದ್ದಾರೆ. ಆದರೆ ಫೀಲ್ಡಿಂಗ್ ಗುಂಪು ಬಂದ ಕ್ಯಾಚ್‌ಗಳನ್ನು ಪಡೆಯಲು ವಿಫಲರಾಗಿರುವುದನ್ನು ಬೊಟ್ಟು ಮಾಡಿದರು.

ಬರ್ತ್‌ಡೇ ಖುಷಿಯಲ್ಲಿರುವ ದ್ರಾವಿಡ್‌ಗೆ ಟೀಮ್ ಇಂಡಿಯಾದಿಂದ ಸ್ಪೆಷಲ್ ಗಿಫ್ಟ್ಬರ್ತ್‌ಡೇ ಖುಷಿಯಲ್ಲಿರುವ ದ್ರಾವಿಡ್‌ಗೆ ಟೀಮ್ ಇಂಡಿಯಾದಿಂದ ಸ್ಪೆಷಲ್ ಗಿಫ್ಟ್

ಅರಗಿಸಿಕೊಳ್ಳುವುದು ಕಷ್ಟ

ಅರಗಿಸಿಕೊಳ್ಳುವುದು ಕಷ್ಟ

"ನನ್ನ ಪ್ರಕಾರ ನಾವು ಗೆಲ್ಲಲು ಪೂರಕವಾದ ಸಾಕಷ್ಟು ಸಂದರ್ಭಗಳನ್ನು ಸೃಷ್ಟಿಸಿಕೊಂಡಿದ್ದೆವು. ಆದರೆ ಈ ವಿಚಾರವನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ನಮ್ಮ ಬೌಲರ್‌ಗಳು ಅದ್ಭುತವಾಗಿದ್ದರು. ವಿಶೇಷವಾಗಿ ಲಿಯಾನ್ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದರು . ಆದರೆ ನಾವು ವಿಶೇಷವಾಗಿ ನಾನು ಕ್ಯಾಚ್‌ಗಳನ್ನು ಪಡೆಯುವಲ್ಲಿ ವಿಫಲರಾದೆವು" ಎಂದು ಟಿಮ್ ಪೈನ್ ಪ್ರತಿಕ್ರಿಯಿಸಿದ್ದಾರೆ.

ಕಳೆದೆರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿಲ್ಲ

ಕಳೆದೆರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿಲ್ಲ

"ನಾವು ಈಗ ಬ್ರಿಸ್ಬೇನ್ ಪಂದ್ಯದತ್ತ ಚಿತ್ತವನ್ನು ಹರಿಸಿದ್ದೇವೆ. ಕಳೆದ ಎರಡು ಪಂದ್ಯಗಳಲ್ಲಿ ನಾವು ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿಲ್ಲ. ಆದರೆ ಈ ಪಂದ್ಯದಲ್ಲಿ ನಾವು ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆವು" ಎಂದು ಟಿಮ್ ಪೈನ್ ಪಂದ್ಯದ ಮುಕ್ತಾಯದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

ಸಾಕಷ್ಟು ಸಕಾರಾತ್ಮಕ ಸಂಗತಿಗಳು ಇದೆ

ಸಾಕಷ್ಟು ಸಕಾರಾತ್ಮಕ ಸಂಗತಿಗಳು ಇದೆ

"ಈ ಪಂದ್ಯದಲ್ಲಿ ಕೆಲ ಸಕಾರಾತ್ಮಕ ಸಂಗತಿಗಳೂ ಇದೆ. ನಮ್ಮ ಬೌಲ್‌ಗಳು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿದ್ದಾರೆ. ಇಂದು ನಮ್ಮ ಹುಡುಗರು ಪೂರ್ಣ ಪ್ರಮಾಣದ ಪ್ರಯತ್ನವನ್ನು ನಡೆಸಿದ್ದರು. ಆದರೆ ಅದು ನಮಗೆ ಪೂರಕವಾಗಿ ಫಲಿತಾಂಶ ನೀಡಿಲ್ಲ" ಎಂದು ಟಿಮ್ ಪೈನ್ ಹೇಳಿದ್ದಾರೆ.

ಬ್ರಿಸ್ಬೇನ್ ಪಂದ್ಯ ನಿರ್ಣಾಯಕ

ಬ್ರಿಸ್ಬೇನ್ ಪಂದ್ಯ ನಿರ್ಣಾಯಕ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಾಲೆ ಕ್ರೀಡಾಂಗಣದಲ್ಲಿ ಜನವರಿ 15ನೇ ತಾರೀಕಿನಿಂದ ಆರಂಭವಾಗಲಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿರುವುದರಿಂದ ಈ ಪಂದ್ಯ ಸರಣಿಯ ನಿರ್ಣಾಯಕ ಪಂದ್ಯವಾಗಿರಲಿದೆ.

Story first published: Tuesday, January 12, 2021, 10:17 [IST]
Other articles published on Jan 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X