ಭಾರತ vs ಆಸ್ಟ್ರೇಲಿಯಾ: ಮೊದಲ ವಿಕೆಟ್ ಪಡೆದ ನಟರಾಜನ್‌ಗೆ ಟ್ವಿಟ್ಟರ್‌ನಲ್ಲಿ ಶ್ಲಾಘನೆ

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಿ ನಟರಾಜನ್ ಭಾರತದ ಪರವಾಗಿ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ. ಐಪಿಎಲ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದ ಸಾಕಷ್ಟು ನಿರೀಕ್ಷೆ ಟಿ ನಟರಾಜನ್ ಮೇಲಿದ್ದು ಮೊದಲ ಪಂದ್ಯದಲ್ಲಿ ಈ ನಿರೀಕ್ಷೆಯನ್ನು ನಟರಾಜನ್ ಸುಳ್ಳಾಗಿಸಲಿಲ್ಲ. ಆರಂಭಿಕ ಆಟಗಾರ ಲ್ಯಾಬುಶೈನ್ ವಿಕೆಟನ್ನು ಬೌಲ್ಡ್ ಮಾಡುವ ಮೂಲಕ ಕಬಳಿಸಿದರು. ಈ ಮೂಲಕ ಭಾರತಕ್ಕೆ ಮೊದಲ ಯಶಸ್ಸು ನೀಡಿದರು.

ಬೂಮ್ರಾ ಅವರ ಈ ಪ್ರದರ್ಶನದ ಮೂಲಕ ಕಳೆದ ಐದು ಪಂದ್ಯಗಳಲ್ಲಿ ಭಾರತ ಮೊದಲ ಬಾರಿಗೆ ಪವರ್‌ಪ್ಲೇನಲ್ಲಿ ವಿಕೆಟ್ ಪಡೆದುಕೊಂಡಿತು. ಉತ್ತಮ ಬೌಲಿಂಗ್ ದಾಳಿ ನಡೆಸುತ್ತಿರುವ ನಟರಾಜನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

11 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿಯ ಶತಕದ ಸತತ ಸಾಧನೆ ಅಂತ್ಯ

ಹೊಸ ಚೆಂಡಿನೊಂದಿಗೆ ಬೂಮ್ರಾ ಜೊತೆಗೆ ನಟರಾಜನ್ ಬೌಲಿಂಗ್ ಆರಂಭಿಸಿದರು. ತನ್ನ ಮೂರನೇ ಓವರ್‌ನಲ್ಲಿ ನಟರಾಜನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ವಿಕೆಟ್ ಪಡೆದುಕೊಂಡರು. ಲೆಂತ್ ಎಸೆತವನ್ನು ಬೀಸಿ ಹೊಡೆಯುವ ಪ್ರಯತ್ನ ಮಾಡಿದ ಲ್ಯಾಬುಶೈನ್‌ಗೆ ನಟರಾಜನ್ ಎಸೆದ ಚೆಂಡು ವಂಚಿಸಿತು. ಬ್ಯಾಟ್‌ನ ಒಳಭಾಗಕ್ಕೆ ತಾಗಿದ ಚೆಂಡು ವಿಕೆಟ್‌ಗೆ ಬಡಿಯಿತು. ಈ ಮೂಲಕ ಚೊಚ್ಚಲ ವಿಕೆಟನ್ನು ನಟರಾಜನ್ ತನ್ನದಾಗಿಸಿದರು.

ನಟರಾಜನ್ ಅವರ ಬೌಲಿಂಗ್ ದಾಳಿಗೆ ಟ್ವಿಟ್ಟರ್‌ನಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಸಾಕಷ್ಟು ಶುಭಾಶಯಗಳು ನಟರಾಜನ್‌ಗೆ ವ್ಯಕ್ತವಾಗುತ್ತಿದೆ. ನಟರಾಜನ್ ಪರಿಶ್ರಮದ ಬಗ್ಗೆ ನೆಟ್ಟಿಗರು ಟ್ವೀಟ್ ಮಾಡುವ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

3-0 ಅಂತರದ ಸೋಲನ್ನು ತಪ್ಪಿಸಿಕೊಳ್ಳುತ್ತಾ ಟೀಮ್ ಇಂಡಿಯಾ?: ಕೆಟ್ಟ ದಾಖಲೆಯ ಭೀತಿಯಲ್ಲಿ ಕೊಹ್ಲಿ

ನವ್‌ದೀಪ್ ಸೈನಿ ಬದಲಿಗೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನಟರಾಜನ್ ಕಣಕ್ಕಿಳಿದಿದ್ದಾರೆ. ಐಪಿಎಲ್‌ನಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನ ನಟರಾಜನ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆತಾಗುವಂತೆ ಮಾಡಿದೆ. ಐಪಿಎಲ್‌ನಲ್ಲಿ 16 ಪಂದ್ಯಗಳನ್ನು ಆಡಿದ್ದ ನಟರಾಜನ್ 16 ವಿಕೆಟ್ ಕಿತ್ತಿದ್ದರು. ತಮ್ಮ ತೀಕ್ಷ್ಣವಾದ ಯಾರ್ಕರ್‌ಗಳ ಮೂಲಕ ಮನೆಮಾತಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, December 2, 2020, 14:58 [IST]
Other articles published on Dec 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X