ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: 2 ತಾಣ, 2 ತಂಡಗಳ ಕುತೂಹಲಕಾರಿ ಕದನ

India vs Australia: Two Indian teams will be in action at different venues in Sydney

ಸಿಡ್ನಿ: ಭಾರತೀಯ ಕ್ರಿಕೆಟ್‌ನಲ್ಲಿ ಇದು ನಡೆಯುತ್ತಿರುವುದು ಬಲು ಅಪರೂಪ. ಒಂದೇ ದೇಶದಲ್ಲಿ ಒಂದೇ ದೇಶದ ಎರಡು ಬೇರೆ ಬೇರೆ ತಂಡಗಳು ಎರಡು ಬೇರೆ ಬೇರೆ ತಾಣಗಳಲ್ಲಿ ಪಂದ್ಯವಾಡುವ ದೃಶ್ಯ ಡಿಸೆಂಬರ್ 6ರ ಭಾನುವಾರ ಕಾಣಸಿಗಲಿದೆ. ಸಿಡ್ನಿಯಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ಎರಡು ವಿಭಿನ್ನ ತಂಡಗಳಾಗಿ ಕಾದಾಡಲಿವೆ.

ಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳುಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳು

ಭಾನುವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುವ ದ್ವಿತೀಯ ಟಿ20ಐ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಆ್ಯರನ್ ಫಿಂಚ್ ಮುಂದಾಳತ್ವದ ತಂಡದ ಸವಾಲು ಸ್ವೀಕರಿಸಲಿದೆ. ಇದೇ ದಿನ ಅಜಿಂಕ್ಯ ರಹಾನೆ ನಾಯಕತ್ವದ ಭಾರತ 'ಎ' ತಂಡ ಆಸ್ಟ್ರೇಲಿಯಾ 'ಎ' ವಿರುದ್ಧ ಡ್ರಮ್ಮೊಯ್ನ್ ಓವಲ್ ಸ್ಟೇಡಿಯಂನಲ್ಲಿ ಮೊದಲ ಅಭ್ಯಾಸ ಪಂದ್ಯವನ್ನಾಡಲಿದೆ.

ಡಿಸೆಂಬರ್ 6 ಭಾನುವಾರ ಭಾರತೀಯ ಕಾಲಮಾನ 5:00 AMಗೆ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ಮೊದಲ ಅಭ್ಯಾಸ ಪಂದ್ಯ ಆರಂಭಗೊಂಡರೆ, ಅದೇ ದಿನ 1:40 PMಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟಿ20ಐ ಶುರುವಾಗಲಿದೆ.

ಜಡೇಜಾ ಆಲ್ ರೌಂಡರ್, ಚಾಹಲ್ ಬೌಲರ್, ಬದಲು ಹೇಗೆ ಸಾಧ್ಯ?: ಹೆನ್ರಿಕ್ಸ್ಜಡೇಜಾ ಆಲ್ ರೌಂಡರ್, ಚಾಹಲ್ ಬೌಲರ್, ಬದಲು ಹೇಗೆ ಸಾಧ್ಯ?: ಹೆನ್ರಿಕ್ಸ್

ಆಸ್ಟ್ರೇಲಿಯಾ ವಿರುದ್ಧ ಟಿ20ಐನಲ್ಲಿ ಆಡುವ XIನಲ್ಲಿ ಇಲ್ಲದ ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ವೃದ್ಧಿಮಾನ್ ಸಹಾ, ರಿಷಭ್ ಪಂತ್, ಆರ್‌ ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅಜಿಂಕ್ಯ ರಹಾನೆ ಮೊದಲಾದವರು ಭಾರತ ಎ ತಂಡವಾಗಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ವಿರುದ್ಧ ಮೈದಾನಕ್ಕಿಳಿಯಲಿದ್ದಾರೆ.

Story first published: Saturday, December 5, 2020, 12:43 [IST]
Other articles published on Dec 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X