ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧ ನನ್ನ ಪ್ರದರ್ಶನ ಸಂತಸ ಕೊಟ್ಟಿದೆ: ಹಾರ್ದಿಕ್ ಪಾಂಡ್ಯ

India vs Australia: Very happy with my performance in ODI series: Hardik Pandya

ಟೀಮ್ ಇಂಡಿಯಾದ ಸತತ 5ಏಕದಿನ ಪಂದ್ಯಗಳ ಸೋಲು ಕ್ಯಾನ್‌ಬೆರಾದ ಪಂದ್ಯದಲ್ಲಿ ಗೆಲ್ಲುವ ಮೂಲಕ ಅಂತ್ಯವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕ ಗಳಿಸಿ ವಿಕೆಟ್ ಒಪ್ಪಿಸಿದ ನಂತರ ಇನ್ನಿಂಗ್ಸ್ ಕಟ್ಟಿದ್ದು ಪಾಂಡ್ಯ ಜಡೇಜಾ ಜೋಡಿ. ಈ ಜೋಡಿ ಮುರಿಯದ ಆರನೇ ವಿಕೆಟ್‌ಗೆ ಭರ್ಜರಿ 150 ರನ್‌ಗಳ ಕೊಡುಗೆಯನ್ನು ನೀಡಿತು. ಈ ಮೂಲಕ ಉತ್ತಮ ಮೊತ್ತಗಳಿಸಲು ಕಾರಣರಾದರು.

ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಎರಡನೇ ಬಾರಿಗೆ 90ರ ಗಡಿಯನ್ನು ತಲುಪಿದ್ದಾರೆ. ಈ ಮೊತ್ತವನ್ನು ಶತಕವನ್ನಾಗಿ ಪರಿವರ್ಸಿಲು ಪಾಂಡ್ಯ ವಿಫಲರಾದರು ಕೂಡ ಟೀಮ್ ಇಂಡಿಯಾ ಪರವಾಗಿ ಅಧಿಕ ರನ್ ಗಳಿಸಿದ ಆಟಗಾರನಾಗಿದ್ದಾರೆ. ತನ್ನ ಈ ಪ್ರದರ್ಶನ ನನಗೆ ಸಂತಸ ತಂದಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಪಾಂಡ್ಯ, ಜಡೇಜಾ ಜೊತೆಯಾಟ ತಂಡಕ್ಕೆ ಬಲ ತುಂಬಿತು: ವಿರಾಟ್ ಕೊಹ್ಲಿಪಾಂಡ್ಯ, ಜಡೇಜಾ ಜೊತೆಯಾಟ ತಂಡಕ್ಕೆ ಬಲ ತುಂಬಿತು: ವಿರಾಟ್ ಕೊಹ್ಲಿ

"ಇದೊಂದು ಅದ್ಭುತವಾದ ಗೆಲುವು. ನಾನು ನನ್ನ ದೇಶದ ಪರವಾಗಿ ಆಡಲು ಸಾಧ್ಯವಾಗಲು ಸಾಕಷ್ಟು ಕಠಿಣ ಪರಿಶ್ರಮವನ್ನು ಪಟ್ಟಿದ್ದೇನೆ. ಹಾಗಾಗಿ ಈ ಸರಣಿಯಲ್ಲಿಪಾಲ್ಗೊಂಡಿರುವುದಕ್ಕೆ ಸಂತಸವಾಗಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಕಳೆದ ವರ್ಷ ಬೆನ್ನು ನೋವಿನ ಕಾರಣದಿಂದ ಆಪರೇಷನ್‌ಗೆ ಒಳಗಾಗಿ ಸುದೀರ್ಘ ಕಾಲ ವಿಶ್ರಾಂತಿಯಲ್ಲಿದ್ದರು.

ಇನ್ನು ಇದೇ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಹೆಚ್ಚಿನ ಯುವ ಆಟಗಾರರಿಗೆ ಅವಕಾಶ ನೀಡಿದಕ್ಕೆ ಹರ್ಷ ವ್ಯಕ್ತಪಡಿಸಿದರು. ಜೊತೆಗೆ ಪದಾರ್ಪಣಾ ಪಂದ್ಯವನ್ನಾಡಿದ ಟಿ ನಟರಾಜನ್ ಪ್ರದರ್ಶನಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ನಟರಾಜನ್ ಅವರದ್ದು ನಿಜಕ್ಕೂ ಸ್ಪೂರ್ತಿದಾಯಕ ಪಯಣ. ಅವರಂತಾ ಹಿನ್ನೆಲೆಯನ್ನು ಹೊಂದಿದ ಆಟಗಾರರಿಗೆ ಆತ ಪ್ರೇರಣೆಯನ್ನು ನೀಡುತ್ತಾರೆ ಎಂದು ಪಾಂಡ್ಯ ಹೇಳಿದರು.

Story first published: Wednesday, December 2, 2020, 20:14 [IST]
Other articles published on Dec 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X