ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಸಿಜಿಯಲ್ಲಿ ರಾಹುಲ್ ದ್ರಾವಿಡ್ ದಾಖಲೆ ಮುರಿದ ವಿರಾಟ್ ಕೊಹ್ಲಿ

Ind v/s Aus 3rd Test : ರಾಹುಲ್ ದ್ರಾವಿಡ್ ರ 16 ವರ್ಷದ ದಾಖಲೆಯನ್ನ ಮುರಿದ ವಿರಾಟ್ ಕೊಹ್ಲಿ | Oneindia Kannada
India vs Australia: Virat Kohli breaks Rahul Dravid’s long-standing record at the MCG

ಮೆಲ್ಬೋರ್ನ್, ಡಿಸೆಂಬರ್ 27: ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​ (ಎಂಸಿಜಿ)ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರು ಮಾಜಿ ನಾಯಕ ರಾಹುಲ್​ ದ್ರಾವಿಡ್​ಅವರು ಸ್ಥಾಪಿಸಿದ್ದ ದಾಖಲೆಯೊಂದನ್ನು 16 ವರ್ಷಗಳ ನಂತರ ಮುರಿದಿದ್ದಾರೆ.

ತ್ವರಿತಗತಿಯಲ್ಲಿ 25ನೇ ಶತಕ, ಬ್ರಾಡ್ಮನ್ ನಂತರ ಕೊಹ್ಲಿಯೇ ಕಿಂಗ್ತ್ವರಿತಗತಿಯಲ್ಲಿ 25ನೇ ಶತಕ, ಬ್ರಾಡ್ಮನ್ ನಂತರ ಕೊಹ್ಲಿಯೇ ಕಿಂಗ್

ಬಾಕ್ಸಿಂಗ್​ ಡೇ ಟೆಸ್ಟ್​ನ ಮೊದಲ ಇನಿಂಗ್ಸ್​ನ ಎರಡನೇ ದಿನವಾದ ಗುರುವಾರದಂದು ಕೊಹ್ಲಿ ಅವರು 82 ರನ್​ ಗಳಿಸಿ ಔಟಾದರು. ಈ ಅರ್ಧ ಶತಕದ ಮೂಲಕ 2018ನೇ ಕ್ಯಾಲೆಂಡರ್ ವರ್ಷದಲ್ಲಿ ಭಾರತದಿಂದ ಹೊರಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಒಟ್ಟು 1138 ರನ್ ಗಳನ್ನು ಕೊಹ್ಲಿ ಗಳಿಸಿದ್ದಾರೆ. ಈ ಮೂಲಕ ರಾಹುಲ್​ ದ್ರಾವಿಡ್​ 2002ರಲ್ಲಿ 1137 ರನ್​ಗಳಿಸಿ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.


ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮೊಹಿಂದರ್ ಅಮರನಾಥ್​ ಇದ್ದು, ಇವರು 1983ರಲ್ಲಿ ವಿದೇಶಗಳಲ್ಲಿ ನಡೆದ ಟೆಸ್ಟ್​ಪಂದ್ಯಗಳಲ್ಲಿ ಒಟ್ಟು 1065 ರನ್​ ಗಳಿಸಿದ್ದರು.

ನಾಯಕನಾಗಿ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿನಾಯಕನಾಗಿ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ

ಒಂದು ಕ್ಯಾಲೆಂಡರ್ ವರ್ಷದಲ್ಲಿ 12ಕ್ಕೂ ಅಧಿಕ ಶತಕ ಗಳಿಸಿದ್ದ ಸಚಿನ್​ ದಾಖಲೆಯನ್ನು ಸರಿಗಟ್ಟುವ ಅವಕಾಶವನ್ನು ಕೊಹ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಮಿಸ್​ಮಾಡಿಕೊಂಡಿದ್ದಾರೆ.

ವಿದೇಶದಲ್ಲಿ ಅತಿ ಹೆಚ್ಚು ರನ್ ಒಂದು ಕ್ಯಾಲೆಂಡರ್ ವರ್ಷ:
* 1212ರನ್ : ಗ್ರಹಾಂ ಸ್ಮಿತ್ (2008)
* 1154 ರನ್: ವಿವ್ ರಿಚರ್ಡ್ಸ್ (1976)
* 1138: ವಿರಾಟ್ ಕೊಹ್ಲಿ (2018) ಭಾರತದ ಪರ ದಾಖಲೆ
* 1137 ರನ್ : ರಾಹುಲ್ ದ್ರಾವಿಡ್ (2002)
* 1065 : ಮೊಹಿಂದರ್ ಅಮರನಾಥ್ (1983)
* 1061 : ಅಲೆಸ್ಟರ್ ಕುಕ್ (2010)

ಎಂಸಿಜಿಯಲ್ಲಿ 2014ರಲ್ಲಿ 169 ಹಾಗೂ 54 ಹಾಗೂ 2018ರಲ್ಲಿ 82ಗಳಿಸುವ ಮೂಲಕ ಸತತ ಮೂರು 50ಪ್ಲಸ್ ರನ್ ಗಳಿಸಿ ಮೊದಲ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ.

Story first published: Thursday, December 27, 2018, 19:01 [IST]
Other articles published on Dec 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X