ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸರಣಿ ಸೋಲಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಟ್ಟ ಕಾರಣಗಳು

India vs Australia: Virat Kohli gives this reason for his sides series defeat

ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಸರಣಿಯನ್ನು ಬಿಟ್ಟುಕೊಟ್ಟಿದೆ. ಎರಡು ಪಂದ್ಯಗಳಲ್ಲೂ ಭಾರತದ ಬೌಲಿಂಗ್ ವಿಭಾಗದ ವೈಫಲ್ಯ ಎದ್ದು ಕಂಡಿದೆ. ಈ ಸೋಲಿಗೆ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯಾ ಟೀಮ್ ಇಂಡಿಯಾ ವಿರುದ್ಧ ಸತತ ಎರಡನೇ ಪಂದ್ಯದಲ್ಲಿ 370+ ರನ್ ಗಳಿಸಿತು. ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 374 ರನ್ ಗಳಿಸಿದ್ದರೆ ಎರಡನೇ ಪಂದ್ಯದಲ್ಲಿ ಅದನ್ನೂ ಮೀರಿಸಿತು. ಕೇವಲ 4 ವಿಕೆಟ್ ಕಳೆದುಕೊಂಡು ಭರ್ಜರಿ 389 ರನ್ ಗಳಿಸಿತ್ತು. ಇದನ್ನು ಬೆನ್ನಟ್ಟುವಲ್ಲಿ ಗರಿಷ್ಟ ಪ್ರಯತ್ನ ನಡೆಸಿದ ಹೊರತಾಗಿಯೂ ಟೀಮ್ ಇಂಡಿಯಾ 51 ರನ್‌ಗಳ ಅಂತರದಿಂದ ಶರಣಾಗಿದೆ.

Ind vs Aus : ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಆಟಗಾರರು ಸೀಮಿತ ಓವರ್‌ಗಳ ಸರಣಿಯಿಂದ ಔಟ್Ind vs Aus : ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಆಟಗಾರರು ಸೀಮಿತ ಓವರ್‌ಗಳ ಸರಣಿಯಿಂದ ಔಟ್

ಈ ಸೋಲಿನ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಕಾರಣಗಳನ್ನು ಮುಂದಿಟ್ಟಿದ್ದಾರೆ. ಆ ಕಾರಣಗಳು ಏನು? ಕೊಹ್ಲಿ ಈ ಸೋಲಿಗೆ ಯಾವ ರೀತಿ ಪ್ರತಿಕ್ರಿಯಸಿದರು ಮುಂದೆ ಓದಿ..

ಬೌಲಿಂಗ್ ವಿಭಾಗದ ವಿಫಲ

ಬೌಲಿಂಗ್ ವಿಭಾಗದ ವಿಫಲ

"ಪಂದ್ಯದಿಂದ ನಾವು ಸಂಪೂರ್ಣವಾಗಿ ಹೊರಗುಳಿದೆವು. ಅದರಲ್ಲೂ ಬೌಲಿಂಗ್ ವಿಭಾಗದಲ್ಲಿ ನಾವು ಅಷ್ಟೋಂದು ಪರಿಣಾಮಕಾರಿಯಾಗಿಲ್ಲ. ನಾವು ಅಂದುಗೊಂಡ ಸ್ಥಳಕ್ಕೆ ನಿರಂತರವಾಗಿ ಬೌಲಿಂಗ್ ಮಾಡಲು ವಿಫಲರಾಗುತ್ತಿದ್ದೇವೆ. ಎದುರಾಳಿಯ ಬಳಿ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿದೆ ಹಾಗೂ ಅವರಿಗೆ ಕೋನಗಳ ಬಗ್ಗೆ ಚೆನ್ನಾಗಿ ಅರಿವಿದೆ" ಎಂದು ಕೊಹ್ಲಿ ಪ್ರತಿಕ್ರಿಯಿಸಿದರು.

ಆಸ್ಟ್ರೇಲಿಯಾದ ಕಠಿಣ ಗುರಿ

ಆಸ್ಟ್ರೇಲಿಯಾದ ಕಠಿಣ ಗುರಿ

"ಆಸ್ಟ್ರೇಲಿಯಾ ನಮಗೆ ಕಠಿಣವಾದ ಗುರಿಯನ್ನು ನೀಡಿತ್ತು. ನೀವು ಗಮನಿಸಬಹುದು ನಾವು 340 ರನ್‌ಗಳನ್ನು ಗಳಿಸಿರುವ ಹೊರತಾಗಿಯೂ 51 ರನ್‌ಗಳ ಅಂತರದ ಸೋಲನ್ನು ಕಂಡಿದ್ದೇವೆ. ಅವರು ಬೌಲಿಂಗ್ ಮಾಡಿದ ಪ್ರದೇಶಗಳಿಂದ ಅವಕಾಶಗಳು ಸೃಷ್ಟಿಯಾಗುವಂತೆ ಮಾಡಿದರು. ಈ ಮೂಲಕ ಅವರು ಮೇಲುಗೈ ಸಾಧಿಸಿದರು" ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

ಹಾರ್ದಿಕ್ ಬೌಲಿಂಗ್‌ನಲ್ಲಿ ಯಶಸ್ಸು

ಹಾರ್ದಿಕ್ ಬೌಲಿಂಗ್‌ನಲ್ಲಿ ಯಶಸ್ಸು

ಈ ಪಂದ್ಯದಲ್ಲಿ ಸಕಾರಾತ್ಮಕವಾಗಿರುವ ಸಂಗತಿಯೆಂದರೆ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್. ಆತ ವರ್ಷಗಳ ಬಳಿಕ ಬೌಲಿಂಗ್ ನಡೆಸಿದ್ದು ದೊಡ್ಡ ವಿಕೆಟ್ ಸ್ಟೀವ್ ಸ್ಮಿತ್ ವಿಕೆಟ್ ಪಡೆದುಕೊಂಡಿದ್ದಾರೆ ಎಂದು ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಪ್ರದರ್ಶನದ ಬಗ್ಗೆ ಪ್ರಶಂಸಿದ್ದಾರೆ.

ರಾಹುಲ್ ಜೊತೆ ಉತ್ತಮ ಜೊತೆಯಾಟ ಬೇಕಿತ್ತು

ರಾಹುಲ್ ಜೊತೆ ಉತ್ತಮ ಜೊತೆಯಾಟ ಬೇಕಿತ್ತು

ಇನ್ನು ಕೆಎಲ್ ರಾಹುಲ್ ಜೊತೆಗೆ ಕನಿಷ್ಟ 40 ಓವರ್‌ವರೆಗೆ ಬ್ಯಾಟಿಂಗ್ ಮಾಡಿದ್ದರೆ ಎದುರಾಳಿ ಮೇಲೆ ಒತ್ತಡವನ್ನು ಹೇರಬಹುದಾಗಿತ್ತು ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಅಂತಿಮ 10 ಓವರ್‌ಗಳಲ್ಲಿ 100ರನ್‌ಗಳ ಅವಶ್ಯಕತೆಯಿದ್ದರೆ ಅದನ್ನು ಪಾಂಡ್ಯ ಅವರ ಜೊತೆಗೂಡಿ ಸಾಧಿಸಬಹುದು ಎಂಬ ಲೆಕ್ಕಾಚಾರವನ್ನು ಹಾಕಿದ್ದೆವು ಎಂದು ಕೊಹ್ಲಿ ವಿವರಿಸಿದ್ದಾರೆ.

Story first published: Monday, November 30, 2020, 10:45 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X