ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಕಡೇಯ ಏಕದಿನ ಶತಕ ಬಾರಿಸಿದ್ದು ಯಾವಾಗ ಗೊತ್ತಾ?!

India vs Australia: Virat Kohli hits ODI century after a long time

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದ ಅವಕಾಶವನ್ನು ಕಳೆದುಕೊಂಡಿದ್ದರು. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾನುವಾರ (ನವೆಂಬರ್ 29) ನಡೆದಿದ್ದ ಪಂದ್ಯದಲ್ಲಿ ಕೊಹ್ಲಿ 87 ಎಸೆತಗಳಿಗೆ 89 ರನ್ ಬಾರಿಸಿ 34.5ನೇ ಓವರ್‌ನಲ್ಲಿ ಜೋಶ್ ಹ್ಯಾಝಲ್ವುಡ್ ಎಸೆತಕ್ಕೆ ಮೋಯ್ಸಸ್ ಹೆನ್ರಿಕ್ಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು.

ಭಾರತ vs ಆಸ್ಟ್ರೇಲಿಯಾ: ವಿರಾಟ್ ಕೊಹ್ಲಿ ನಿರ್ಧಾರದ ಬಗ್ಗೆ ಆಶಿಶ್ ನೆಹ್ರಾ ಅಸಮಾಧಾನಭಾರತ vs ಆಸ್ಟ್ರೇಲಿಯಾ: ವಿರಾಟ್ ಕೊಹ್ಲಿ ನಿರ್ಧಾರದ ಬಗ್ಗೆ ಆಶಿಶ್ ನೆಹ್ರಾ ಅಸಮಾಧಾನ

ಕೊಹ್ಲಿ ಕಡೇಯ ಏಕದಿನ ಶತಕ ಬಾರಿಸಿದ್ದು 2019ರ ಆಗಸ್ಟ್ 14ರಂದು ವೆಸ್ಟ್ ಇಂಡೀಸ್ ವಿರುದ್ಧ. ಭಾನುವಾರವೇನಾದರೂ ಕೊಹ್ಲಿ ಶತಕ ಬಾರಿಸಿದ್ದರೆ ಕೊಹ್ಲಿ ಸುಮಾರು 15 ತಿಂಗಳ ಬಳಿಕ ಏಕದಿನ ಶತಕ ಬಾರಿಸಿದಂತಾಗುತ್ತಿತ್ತು. ಆದರೆ ಕೊಹ್ಲಿ ಅಪೂರ್ವ ಅವಕಾಶ ಕೈ ತಪ್ಪಿಸಿಕೊಂಡರು.

ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ 83, ಆ್ಯರನ್ ಫಿಂಚ್ 60, ಸ್ಟೀವ್ ಸ್ಮಿತ್ 104, ಮಾರ್ನಸ್ ಲ್ಯಬುಶೇನ್ 70, ಗ್ಲೆನ್ ಮ್ಯಾಕ್ಸ್‌ವೆಲ್ 63 ರನ್‌ನೊಂದಿಗೆ 389 ರನ್ ಬಾರಿಸಿದ್ದರೆ, ಭಾರತ ಕೊಹ್ಲಿ 89, ಕೆಎಲ್ ರಾಹುಲ್ 76 ರನ್‌ನೊಂದಿಗೆ 338 ರನ್ ಬಾರಿಸಿ 51 ರನ್‌ನಿಂದ ಶರಣಾಯಿತು.

76 ಓವರ್ 439 ರನ್ 3 ವಿಕೆಟ್: ಭಾರತದ ಬೌಲಿಂಗ್ ಬ್ರಹ್ಮಾಸ್ತ್ರ ಬೂಮ್ರಾಗೆ ಇದೇನಾಯ್ತು?76 ಓವರ್ 439 ರನ್ 3 ವಿಕೆಟ್: ಭಾರತದ ಬೌಲಿಂಗ್ ಬ್ರಹ್ಮಾಸ್ತ್ರ ಬೂಮ್ರಾಗೆ ಇದೇನಾಯ್ತು?

ಕೊಹ್ಲಿ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. 86 ಟೆಸ್ಟ್ ಪಂದ್ಯಗಳಲ್ಲಿ 7240 ರನ್, 250 ಏಕದಿನ ಪಂದ್ಯಗಳಲ್ಲಿ 59.29ರ ಸರಾಸರಿಯಂತೆ 11977 ರನ್ ಬಾರಿಸಿದ್ದಾರೆ. ಇದರಲ್ಲಿ 43 ಶತಕ, 59 ಅರ್ಧ ಶತಕಗಳು ಸೇರಿವೆ. ಇನ್ನು 81 ಟಿ20ಐ ಪಂದ್ಯಗಳಲ್ಲಿ 2794 ರನ್, 192 ಐಪಿಎಲ್ ಪಂದ್ಯಗಳಲ್ಲಿ 5878 ರನ್ ಬಾರಿಸಿದ್ದಾರೆ.

Story first published: Monday, November 30, 2020, 17:39 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X