ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆ

India vs Australia: Virat Kohlis CK Nayudu XI beat KL Rahuls Ranjitsinhji XI by 5 wickets

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟಿಮ್ ಇಂಡಿಯಾ ನವೆಂಬರ್ 27ರಿಂದ ಆರಂಭಗೊಳ್ಳಲಿರುವ ಸರಣಿಗಾಗಿ ಸಜ್ಜಾಗುತ್ತಿದೆ. ಬದ್ಧ ಎದುರಾಳಿ ತಂಡಗಳೆನಿಸಿರುವ ಇತ್ತಂಡಗಳ ಕದನ ಕುತೂಹಲ ಮೂಡಿಸಿದೆ. ಇದಕ್ಕೂ ಮುನ್ನ ಭಾನುವಾರ (ನವೆಂಬರ್ 22) ನಡೆದ ವಿರಾಟ್ ಕೊಹ್ಲಿ ಮುಂದಾಳತ್ವದ ಸಿಕೆ ನಾಯುಡು XI ಮತ್ತು ಕೆಎಲ್ ರಾಹುಲ್ ನಾಯಕತ್ವದ ರಂಜಿತ್ ಸಿಂಹಜಿ XI ನಡುವಿನ ಅಂತರ್ ತಂಡದ ಪಂದ್ಯದಲ್ಲಿ ಕೊಹ್ಲಿ ಪಡೆ ಮೈಲುಗೈ ಸಾಧಿಸಿದೆ.

 ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲುಬೇಕಾದ ಅಂಶವನ್ನು ಹೇಳಿದ ಹರ್ಭಜನ್ ಸಿಂಗ್ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲುಬೇಕಾದ ಅಂಶವನ್ನು ಹೇಳಿದ ಹರ್ಭಜನ್ ಸಿಂಗ್

ನವೆಂಬರ್ 27ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಸಭ್ಯಾಸಾರ್ಥವಾಗಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡ ಕೆಎಲ್ ರಾಹುಲ್ ತಂಡವನ್ನು 5 ವಿಕೆಟ್‌ನಿಂದ ಸೋಲಿಸಿದೆ. ಸಿಡ್ನಿಯಲ್ಲಿ ನಡೆದಿದ್ದ ಈ ಪಂದ್ಯ 40 ಓವರ್‌ಗಳ ಪಂದ್ಯವಾಗಿತ್ತು.

ಸೂರ್ಯಕುಮಾರ್-ಕೊಹ್ಲಿ ಸಿಡುಕಿನ ಬಳಿಕ ಏನಾಯ್ತು?!: ಯಾದವ್ ವಿವರಣೆಸೂರ್ಯಕುಮಾರ್-ಕೊಹ್ಲಿ ಸಿಡುಕಿನ ಬಳಿಕ ಏನಾಯ್ತು?!: ಯಾದವ್ ವಿವರಣೆ

ಭಾರತ ಕ್ರಿಕೆಟ್ ತಂಡದ ಅಧಿಕೃತ ಟ್ವಿಟರ್ ಖಾತೆ ಈ ಅಭ್ಯಾಸ ಪಂದ್ಯದ ಮಾಹಿತಿ ನೀಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಳ್ಳಲಾಗಿರುವ ಸ್ಟೋರಿಯ ಪ್ರಕಾರ ಪಂದ್ಯದ ಆರಂಭ ಮಳೆಯಿಂದಾಗಿ ಕೊಂಚ ಸಮಸ್ಯೆಗೀಡಾಗಿತ್ತು.

ಮಯಾಂಕ್-ಧವನ್ ಓಪನ್

ಮಯಾಂಕ್-ಧವನ್ ಓಪನ್

ಮೊದಲು ಇನ್ನಿಂಗ್ಸ್ ಆಡಿದ್ದ ಕೆಎಲ್ ರಾಹುಲ್ ಅವರ ರಂಜಿತ್‌ ಸಿಂಹಜಿ XI ತಂಡದ ಪರ ಶಿಖರ್ ಧವನ್ ಮತ್ತು ಮಯಾಂಕ್ ಅಗರ್ವಾಲ್ ಆರಂಭಿಕ ಬ್ಯಾಟಿಂಗ್ ಮಾಡಿದ್ದರು. ನಾಯಕ ರಾಹುಲ್ 66 ಎಸೆತಗಳಿಗೆ 83 ರನ್ ಬಾರಿಸಿದ್ದರು. ತಂಡ 40 ಓವರ್‌ಗಳಲ್ಲಿ ಎದುರಾಳಿಗೆ 235 ರನ್ ಗುರಿ ನೀಡಿತ್ತು.

ಕೊಹ್ಲಿ ಸ್ಫೋಟಕ ಬ್ಯಾಟಿಂಗ್

ಕೊಹ್ಲಿ ಸ್ಫೋಟಕ ಬ್ಯಾಟಿಂಗ್

ಗುರಿ ಬೆನ್ನಟ್ಟಿದ ವಿರಾಟ್ ಕೊಹ್ಲಿ ನಾಯಕತ್ವದ ಸಿಕೆ ನಾಯುಡು XI ಪರ ಯುವ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಶಾ ಮತ್ತು ಶುಬ್ಮನ್ ಗಿಲ್ ಗಿಲ್ ಓಪನಿಂಗ್ ಬ್ಯಾಟಿಂಗ್ ಮಾಡಿದ್ದರು. ಪಂದ್ಯದಲ್ಲಿ 32ರ ಹರೆಯದ ಅನುಭವಿ ಕೊಹ್ಲಿ 58 ಎಸೆತಗಳಲ್ಲಿ 91 ರನ್ ಬಾರಿಸಿದ್ದರು. 26 ಎಸೆತಗಳು ಉಳಿದಿರುವಾಗಲೇ ಕೊಹ್ಲಿ ಪಡೆ ಗೆಲುವಿನ ಗುರಿ ತಲುಪಿತು.

ಆರ್‌ ಅಶ್ವಿನ್ ಅಜೇಯ ಆಟ

ಆರ್‌ ಅಶ್ವಿನ್ ಅಜೇಯ ಆಟ

ಇನ್‌ಸ್ಟಾಗ್ರಾಮ್ ಸ್ಟೋರಿಯ ಚಿತ್ರಗಳ ಪ್ರಕಾರ, ಕೆಎಲ್ ರಾಹುಲ್ ಅವರ ರಂಜಿತ್‌ ಸಿಂಹಜಿ XI ತಂಡಕ್ಕೆ ನಾಯಕ ರಾಹುಲ್ ಅವರೇ ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತಿದ್ದರು. ಗೆದ್ದ ಕೊಹ್ಲಿ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಅಜೇಯರಾಗಿ ಉಳಿದಿದ್ದರು.

ಸುದೀರ್ಘ ಕ್ರಿಕೆಟ್ ಸರಣಿ

ಸುದೀರ್ಘ ಕ್ರಿಕೆಟ್ ಸರಣಿ

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿರುವ ಭಾರತ ತಂಡ ಅಲ್ಲಿ 3 ಪಂದ್ಯಗಳ ಏಕದಿನ ಸರಣಿ, 3 ಪಂದ್ಯಗಳ ಟಿ20ಐ ಸರಣಿ ಮತ್ತು 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ನವೆಂಬರ್ 27ಕ್ಕೆ ಏಕದಿನ, ಡಿಸೆಂಬರ್ 4ಕ್ಕೆ ಟಿ20ಐ ಮತ್ತು ಡಿಸೆಂಬರ್ 17ಕ್ಕೆ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.

Story first published: Monday, November 23, 2020, 8:48 [IST]
Other articles published on Nov 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X