ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಅಜಿಂಕ್ಯ ರಹಾನೆಗೆ 'ಗೌಪ್ಯ ಸಂದೇಶ' ನೀಡಿದ ವಾಸಿಂ ಜಾಫರ್

India vs australia: Wasim Jaffer sent hidden message for Ajinkya Rahane

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಸರಣಿಯಲ್ಲಿ ಭಾರತ ಸೋತ ಬಳಿಕ ಸೋಲಿನ ಬಗ್ಗೆ ಅನೇಕ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 36 ರನ್‌ಗಳಿಗೆ ಆಲ್‌ಔಟ್ ಆಗಿರುವುದು ತಂಡದ ಆತ್ಮವಿಶ್ವಾಸವನ್ನೂ ಕುಗ್ಗಿಸಿರುವುದರಲ್ಲಿ ಅನುಮಾನವಿಲ್ಲ. ಈ ಮಧ್ಯೆ ಮಾಜಿ ಆಟಗಾರರಿಂದ ಸಾಕಷ್ಟು ಸಲಹೆಗಳು ವ್ಯಕ್ತವಾಗುತ್ತಿದೆ.

ಎರಡನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಲಿದ್ದು ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮುಂದಿನ ಪಂದ್ಯಕ್ಕೂ ಮುನ್ನ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ತಂಡದ ನಾಯಕ ಅಜಿಂಕ್ಯ ರಹಾನೆಗೆ ಟ್ವಿಟ್ಟರ್‌ನಲ್ಲಿ ಗೌಪ್ಯ ಸಂದೇಶವೊಂದನ್ನು ನೀಡಿದ್ದಾರೆ. ಈ ಸಂದೇಶ ವಿಭಿನ್ನವಾಗಿದ್ದು ಸಾಕಷ್ಟು ಕುತೂಹಲಕಾರಿಯಾಗಿದೆ.

ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅಜಿಂಕ್ಯ ರಹಾನೆಗೆ ಟ್ವಿಟ್ಟರ್‌ನಲ್ಲಿ ನೀಡಿರುವ ಗೌಪ್ಯ ಸಲಹೆ ಹೀಗಿದೆ:

ಇದರ ಜೊತೆಗೆ ಈ ಗೌಪ್ಯ ಸಂದೇಶವನ್ನು ನೀವು ಕೂಡ ಬಿಡಿಸಬಹುದು ಎಂದು ಅಭಿಮಾನಗಳಿಗೆ ವಾಸಿಂ ಜಾಫರ್ ಸೂಚನೆಯನ್ನು ನೀಡಿದ್ದಾರೆ. ಹೀಗಾಗಿ ಸಾಕಷ್ಟು ಅಭಿಮಾನಿಗಳು ಈ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಿದ್ದು ಜಾಫರ್ ಯಾವ ಸಂದೇಶವನ್ನು ನೀಡಿದ್ದಾರೆ ಎಂದು ತಲೆ ಕೆಡಿಸುತ್ತಿದ್ದಾರೆ. ಈ ಸಂದೇಶದ ಜೊತೆಗೆ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಜಾಫರ್ ಶುಭ ಹಾರೈಸಿದ್ದಾರೆ.

ಭಾರತೀಯ ಬೌಲರ್‌ಗಳ ಪೈಕಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಆರ್ ಅಶ್ವಿನ್ಭಾರತೀಯ ಬೌಲರ್‌ಗಳ ಪೈಕಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಆರ್ ಅಶ್ವಿನ್

ಇನ್ನು ಈ ಗೌಪ್ಯ ಸಂದೇಶವನ್ನು ಅನೇಕ ಅಭಿಮಾನಿಗಳು ಬಿಡಿಸುವಲ್ಲಿ ಸಫಲರಾಗಿದ್ದಾರೆ. ಟ್ವೀಟ್‌ನಲ್ಲಿ ಒಂದೊಂದೇ ಶಬ್ಧಗಳನ್ನು ಮೇಲಿನಿಂದ ಕೆಳಕ್ಕೆ ಬರೆಯುತ್ತಾ ಕುತೂಹಲ ಮೂಡಿಸುವಂತೆ ಮಾಡಿದ್ದಾರೆ. ಸಾಮಾನ್ಯವಾಗಿ ಓದಿದರೆ ಕ್ರಿಕೆಟ್ ಬಗೆಗಿನ ಸುಂದರವಾದ ಸಂದೇಶವಾಗಿದೆ. ಆದರೆ ಅದರಲ್ಲಿ ಕರಾಮತ್ತು ತೋರಿಸಿದ್ದಾರೆ ವಾಸಿಂ ಜಾಫರ್.

ವಾಸಿಂ ಜಾಫರ್ ಬರೆದ ಈ ಸಂದೇಶದ ಮೊದಲ ಅಕ್ಷರಗಳನ್ನು ಜೋಡಿಸಿದರೆ "PICK GILL AND RAHUL" ಎಂದಾಗುತ್ತದೆ. ಅಂದರೆ ಶುಭ್ಮನ್ ಗಿಲ್ ಹಾಗೂ ರಾಹುಲ್ ಅವರನ್ನು ಆಯ್ಕೆ ಮಾಡುವಂತೆ ವಾಸಿಂ ಜಾಫರ್ ಸಲಹೆಯನ್ನು ನೀಡಿದ್ದು ಅಭಿಮಾನಿಗಳು ಈ ಸವಾಲನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Story first published: Monday, December 21, 2020, 19:41 [IST]
Other articles published on Dec 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X